ಸ್ವಂತ ಚಿಕ್ಕಪ್ಪನ ಮಗನಿಂದಲೇ ಕೊಲೆ : 23 ಲಕ್ಷ ಮೌಲ್ಯದ 500g ಚಿನ್ನಾಭರಣ ವಶ
ಕುಮಾರ್ ಜ್ಯೂಯಲರ್‌ನ ಮಾಲೀಕರಾದ ಕುಮಾರಸ್ವಾಮಿ
ಅವರ ಪತ್ನಿ ಮಂಜುಳಾ ಅವರ ಚಿಕ್ಕಪ್ಪನ ಮಗನೇ ಕೊಲೆಯ ಪ್ರಮುಖ ರೂವಾರಿಯಾಗಿದ್ದು, ಚಿಕ್ಕಪ್ಪನ ಮಗನಿಂದಲೇ ಮಂಜುಳಳಾ ಅವರನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳಾದ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಹೋಬಳಿಯ ಕಬ್ಬಳಿ ಗ್ರಾಮದ ಸುನಿಲ್ ಕುಮಾ ಕೆ.ಜಿ. (39) ಎಂಬಾತ ಬೆಂಗಳೂರಿನ ಲಕ್ಷ್ಮೀಪುರಂ ಲೇಔಟ್‌ನಲ್ಲಿ ವಾಸವಾಗಿದ್ದು, ಈತ ಮೃತ ಮಂಜುಳಾ ಅವರ ಚಿಕ್ಕಪ್ಪನ ಮಗ ಎಂದು ತಿಳಿದುಬಂದಿದ್ದು, ಈತನೇ ಪ್ರಮುಖ ಆರೋಪಿ, ಆಂಧ್ರ ಮೂಲದ ಬೆಂಗಳೂರಿನ ರಾಜಗೋಪಾಲ್ ನಗರ ವಾಸಿಯಾದ ಮುರುಳಿ ಅಲಿಯಸ್ ಮುರುಳಿ ನಾಯ್ಡು (39), ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದ್ಯಾವಸಂದ್ರ ಗ್ರಾಮದ ರಾಜು ಅಲಿಯಾಸ್ ಚೆಲುವರಾಜ್ (34) ಎಂಬುವವರನ್ನು ಬಂಧಿಸಲಾಗಿದೆ.
ಹಾಸನ ನಗರದ ಲಕ್ಷ್ಮೀಪುರ ಬಡಾವಣೆಯ ಅಡ್ಡಿ ಮನೆ ರಸ್ತೆಯ ಕುಮಾರಸ್ವಾಮಿ ಅವರ ಪತ್ನಿ ಮಂಜುಳಾ ಅವರನ್ನು ಕೊಲೆ ಮಾಡಿ 500 ಗ್ರಾಂ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜುಲೈ 29 ರಂದು ಮಧ್ಯಾಹ್ನ 2-30ರ ಸಮಯದಲ್ಲಿ ಒಂಟಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಂಜುಳಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ ಅವರ ಕೊರಳಿನಲ್ಲಿದ್ದ ಮತ್ತು ಬೀರುವಿನಲ್ಲಿದ್ದ ಲಾಕರಲ್ಲಿದ್ದ 522 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಎಎಸ್ಪಿ ಎಂ.ಕೆ. ತಮ್ಮಯ್ಯ ಅವರ ನೇತೃತ್ವದಲ್ಲಿ 4 ತಂಡ ರಚನೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಬಂಧಿತರಿಂದ 23.50 ಲಕ್ಷ ರೂ. ಮೌಲ್ಯದ 514 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು 2-3 ದಿನಗಳಿಂದ ಮನೆಯ ಸುತ್ತ ಹೊಂಚು ಹಾಕಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಿದರು.
ಆಷಾಢ ಮಾಸದ ಮೊದಲನೇ ಶುಕ್ರವಾರ ಚಿನ್ನಾಭರಣಗಳನ್ನು ಇಟ್ಟು ಪೂಜೆ ಮಾಡುವ ಪ್ರತೀತಿ ಇರುವುದರಿಂದ ಕುಮಾರ್ ಅವರು ತನ್ನ ಜ್ಯೂಯಲರಿ ಶಾಪ್‌ನಿಂದ ಚಿನ್ನಾಭರಣಗಳನ್ನು ತಂದಿದ್ದರುಇ. ಆದರೆ ಪೂಜೆ ಆಗುವ ಮೊದಲೇ ಅವರ ಪತ್ನಿ ಮಂಜುಳಾ ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ತನಿಖೆ ನಡೆಸಿದಾಗ ಸಿಸಿ ಟಿವಿ ದೃಶ್ಯಾವಳಿಗಳು, ಮನೆಯಲ್ಲಿ ಎರಡ ಕಾಫಿ ಕುಡಿದ ಗ್ಲಾಸುಗಳು ಸೇರಿದಂತೆ ಇನ್ನಿತರೆ ಸುಳಿವುಗಳನ್ನು ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಪತ್ತೆ ಹಚ್ಚಿದ ಡಿವೈಸ್ಪಿ ಉದಯಭಾಸ್ಕರ್, ಪೆನ್‌ಷನ್ ಮೊಹಲ್ಲಾ ವೃತ್ತ ನಿರೀಕ್ಷಕ ರೇಣುಕಾ ಪ್ರಸಾದ್ ಅವರನ್ನು ಅಭಿನಂದಿಸಿ 10 ಸಾವಿರ ನಗದು ಬಹುಮಾನ ಘೋಷಿಸಿದರು. ಈ ಸಂದರ್ಭದಲ್ಲಿ ಎಎಸ್ಪಿ ಎಂ.ಕೆ. ತಮ್ಮಯ್ಯ, ಡಿವೈಎಸ್ಪಿ ಉದಯಭಾಸ್ಕರ್, ವೃತ್ತ ನಿರೀಕ್ಷಕನ ರೇಣುಕಾಪ್ರಸಾದ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಬೆಂಗಳೂರಿನಲ್ಲಿ ಜ್ಯೂಯಲರಿ ಶಾಪ್ ಆರಂಭಿಸಿ ನಷ್ಟವಾದ ಮೇಲೆ ಕಳೆದ ಮೂರಾಲ್ಕು ತಿಂಗಳ ಹಿಂದೆ ಅಂಗಡಿ ಮುಚ್ಚಿಕೊಂಡಿದ್ದನು. ಶೋಕಿ ಮತ್ತು ಸಾಲ ತೀರಿಸಲು ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಪುನಿತ್‌ಾಜ್ ಕುಮಾರ್ ನಿಧನದ ಸಂದರ್ಭದಲ್ಲಿ ಲಕ್ಷಗಟ್ಟಲೆ ಬಡ್ಡಿಸಾಲ ಮಾಡಿಕೊಂಡು ಪುನಿತ್‌ರಾಜ್ ಕುಮಾರ್ ಅವರ ಚಿನ್ನ ಮತ್ತು ಬೆಳ್ಳಿಯ ಪುತ್ಥಳಿಯನ್ನು ಮಾರಾಟಕ್ಕಾಗಿ ನಿರ್ಮಿಸಿಕೊಂಡಿದ್ದನು. ಆ ಸಮಯದಲ್ಲಿ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಪುತ್ಥಳಿ ಕೊಳ್ಳುವವರಿಲ್ಲದೆ ತೀವ್ರ ನಷ್ಟ ಅನುಭವಿಸಿದನು. ಹಾಗಾಗಿ ತೀರಾ ಪರಿಚಯಸ್ಥರಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಒಟ್ಟು 522 ಗ್ರಾಂಚಿನ್ನ
ಶೋಕಿ ಮತ್ತು ಸಾಲ ತೀಲಿಸಲು ಕೃತ್ಯ ಸುನಿಲ್ ಕುಮಾರ್ ಎಂಬ ಆರೋಪಿ ಚಿನ್ನಬೆಳ್ಳಿ ವ್ಯಾಪಾರಿಯಾಗಿದ್ದು,ಚಿನ್ನಾಭರಣ ದೋಚಿದ್ದ ಇವರು 8 ಗ್ರಾಂ ಚಿನ್ನವನ್ನು ಖರ್ಚಿಗಾಗಿ ಈಗಾಗಲೇ ಆರೋಪಿಗಳು ಸುನಿಲ್ ಕುಮಾರನ ಸ್ನೇಹಿತರಾಗಿದ್ದು, ಅಡವಿಟ್ಟಿದ್ದಾರೆ. ನಂತರ ಉಳಿದ ಚಿನ್ನವನ್ನು ಮಾರಾಟ ಮಾಡಲು ಈ ರೀತಿ ಎರಡು ಕಡೆ ಚಿನ್ನಾಭರಣ ದೋಚಿರುವ ಬಗ್ಗೆ ಪ್ರಕರಣ ಯತ್ನಿಸುವಷ್ಟರಲ್ಲಿ ಪೊಲೀಸರ ಬಲೆಗೆ ಬಿದ್ದು ಈಗ ಜೈಲು ಪಾಲಾಗಿದ್ದಾರೆ. ದಾಖಲಾಗಿದೆ ಎನ್ನಲಾಗಿದೆ.