ಬಾಡಿಗೆ ಕಾರನ್ನು ತಂದು ಯುವತಿಯನ್ನು ಕೊಲೆ ಮಾಡುವ ಉದ್ದೇಶ ಅಪಘಾತದ ನಾಟಕವಾಡಲು ಹೋಗಿ

0

ಹಾಸನ : ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಕೊಲೆ ಮಾಡುವ ಯತ್ನದಿಂದಾಗಿ ಬಾಡಿಗೆ ಕಾರನ್ನು ತಂದು ಯುವತಿಯನ್ನು ಕೊಲೆ ಮಾಡುವ ಉದ್ದೇಶ ಅಪಘಾತದ ನಾಟಕವಾಡಲು ಹೋಗಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 3ರಂದು ನಗರದ ಬೂವನಹಳ್ಳಿ ಸಮೀಪ ಶರಣ್ಯ ಎಂಬ ಯುವತಿಯನ್ನು ಅಪಘಾತ ಎಸಗಿ ಕೊಲೆ ಮಾಡಿದ ಆರೋಪಿ ಭರತ್ (24) ಎಂಬಾತ ಪ್ರೀತಿಸುತ್ತಿದ್ದನು, ಇದಕ್ಕೆ ಆಕೆ ನಿರಾಕರಿಸಿದ್ದಕ್ಕಾಗಿ ಮೈಸೂರಿನಿಂದ ಬಾಡಿಗೆ ಕಾರನ್ನು ತಂದು ಯುವತಿಯ ಚಲನವಲನಗಳನ್ನು ಗಮನಿಸಿ ಆಕೆಯನ್ನು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗುವ ಸಂದರ್ಭದಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ನಾಪತ್ತೆಯಾಗಿದ್ದ ಆರೋಪಿಯನ್ನು ವಶಪಡಿಸಿಕೊಂಡಿದ್ದೇವೆ ಎಂದರು.

ಈತ ಈ ಕೃತ್ಯ ಎಸಗಿ ಪರಾರಿಯಾಗಲು ಅದೇ ದಿನ ತನ್ನಬ್ಯಾಂಕಿನ ಖಾತೆಗೆ ಹಣವನ್ನು ಠೇವಣಿ ಮಾಡಿಕೊಂಡಿದ್ದಾನೆ. ಈ ಎಲ್ಲಾ ಸಾಕ್ಷ್ಯಾಧಾರಗಳ ಮೇಲೆ ಆತನನ್ನು ಬಂಧಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here