ಪಿಸ್ತೂಲ್ ಹಿಡಿದು ಬಂದು ಸರ ಕಳವಿಗೆ ಯತ್ನ
ಖದೀಮರ ಪ್ಲಾನ್ ವಿಫಲಗೊಳಿಸಿದ ವೃದ್ಧೆ: ಸಾರ್ವಜನಿಕ ವಲಯದಲ್ಲಿ ಆತಂಕ
ಹಾಸನ: ಪಾರ್ಸೆಲ್ ಕೊಡುವ ನೆಪದಲ್ಲಿ ಮನೆಯೊಳಗೆ ಬಂದ ಅಪರಿಚಿತರು, ಪಿಸ್ತೂಲ್ ತೋರಿಸಿ, ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿರುವ ಘಟನೆ ನಗರದ ಕೆ.ಆರ್.ಪುರಂ ಬಡಾವಣೆಯ 5ನೇ ಕ್ರಾಸ್‌ನಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ 12.50 ರ ಸುಮಾರಿಗೆ ವೃದ್ಧೆ ರಂಗಮ್ಮ ಎಂಬುವರು ಸಂಪಿಗೆ ರಸ್ತೆಯ ಮನೆಯಲ್ಲಿದ್ದರು. ಈ ವೇಳೆ ಇಬ್ಬರು ಹುಡುಗರು ಬಂದು ನಿಮ್ಮ ಮಗನಿಗೆ ಪಾಸೆÀðಲ್ ಬಂದಿದೆ ಎಂದು ಹೇಳಿ ಒಳಗೆ ಎಂಟ್ರಿ ಕೊಟ್ಟಿದ್ದಾರೆ.
ರಂಗಮ್ಮ ಬಾಗಿಲು ತೆಗೆಯುತ್ತಿದ್ದಂತೆಯೇ ಒಳ ಬಂದು ಪಿಸ್ತೂಲ್ ತೋರಿಸಿ, ಕೊರಳಿನಲ್ಲಿದ್ದ 100 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಳ್ಳಲು ಪ್ರಯತ್ನಿದ್ದಾರೆ. ಕೂಡಲೇ ರಂಗಮ್ಮ ಕೂಗಿಕೊಂಡಾಗ ಇಬ್ಬರೂ ಅಲ್ಲಿಂದ ಓಡಿಹೋಗಿದ್ದಾರೆ.
ವೃದ್ಧೆ ಧೈರ್ಯಕ್ಕೆ ಮೆಚ್ಚುಗೆ:
ಸರ ಕದಿಯಲು ಬಂದ ಇಬ್ಬರು ಖದೀಮರನ್ನು ಹಿಮ್ಮೆಟ್ಟಿಸಿದ ವೃದ್ಧೆ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿ ಯುವ ಮುಖಂಡ ಡಿ.ಟಿ.ಪ್ರಕಾಶ್ ಎಂಬುವರ ತಾಯಿ ರಂಗಮ್ಮ ಒಬ್ಬರೇ ಮನೆಯಲ್ಲಿರುವುದನ್ನು ಖಾತ್ರಿ ಪಡಿಸಿಕೊಂಡು ಕಳ್ಳರು ಬಂದಿದ್ದಾರೆ. ಜೊತೆಯಲ್ಲಿ ಪಿಸ್ತೂಲ್ ಕೈಯಲ್ಲಿಡಿದು ಬಂದಿದ್ದರು. ನಿಮ್ಮ ಮಗನಿಗೆ ಪಾಸೆಲ್ ಇದೆ ಎಂದು
ಬಂದಿದ್ದರಿಂದ ಅಜ್ಜಿ ಬಾಗಿಲು ತೆರೆದರು. ಕೂಡಲೇ ವೃದ್ಧೆ ಕುತ್ತಿಗೆಗೆ ಕೈ ಹಾಕಿ ಸರ ಕೀಳಲು ಯತ್ನಿಸಿದರು. ಇದರಿಂದ ವಿಚಲಿತರಾಗದ ರಂಗಮ್ಮ, ಇಬ್ಬರು ಚೋರರನ್ನು ತಳ್ಳಿಕೊಂಡೇ ಹೊರ ಬಂದಿದ್ದಾರೆ. ಹಣೆಗೆ ಪಿಸ್ತೂಲ್ ಇಟ್ಟು ಹೆದರಿಸಿದರೂ ಧೈರ್ಯದಿಂದ ಇಬ್ಬರನ್ನೂ ಎದುರಿಸಿದ್ದಾರೆ. ವೃದ್ಧೆ ಪ್ರತಿರೋಧ ತೋರುತ್ತಲೇ ಗಾಬರಿಯಿಂದ ಸರಗಳ್ಳರಿಬ್ಬರು ಕಾಂಪೌಂಡ್ ನೆಗೆದು ಎಸ್ಕೇಪ್ ಆಗಿದ್ದಾರೆ. ಪ್ರಕಾಶ ಅವರು ನೀಡಿದ ದೂರು ಆಧರಿಸಿ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇಬ್ಬರು ಖದೀಮರು ಸರ ಕದಿಯುವ ಉದ್ದೇಶದಿಂದಲೇ ಬಂದಿದ್ದರೋ ಅಥವಾ ಬೇರೆ ಕಾರಣದಿಂದ ಎಂಟ್ರಿಕೊಟ್ಟಿದ್ದರೋ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಕಳ್ಳರ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬಾಕ್ಸ್
ಆತಂಕ ಸೃಷ್ಟಿಸಿದ ಪ್ರಕರಣ:
ಹಾಡ ಹಗಲೇ ಪಿಸ್ತೂಲ್ ಹಿಡಿದು ಯುವಕರು ಸಂಚಾರ ಮಾಡಿದ್ದಲ್ಲದೇ ಬಿಜೆಪಿ ಮುಖಂಡನ ಮನೆಗೆ ಶಸ್ತಾçಸ್ತç ಹಿಡಿದುಕೊಂಡೇ ಬಂದು ಹೋಗಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಡಿಲವರಿ ಬಾಯ್‌ಗಳ ರೀತಿಯಲ್ಲಿ ಕೈಯ್ಯಲ್ಲೊಂದು ಕವರ್ ಹಿಡಿದು ಹಿಡಿದು ಬಂದು ಸರ ಕಳವು ಮಾಡಲು ಯತ್ನಿಸಿದ್ದಾರೆ. ಇದು ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಎಲ್ಲಾ ಆಯಾಮಗಳಿಂದಲೂ ತನಿಖೆ ಮುಂದುವರಿಸಿದ್ದಾರೆ.