ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್‌ಜಿಲ್ಲಾ ಕಳ್ಳನ ಬಂಧನ

0

ಹಾಸನ : ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ಬಂಧಿಸಲಾಗಿದ್ದು, ಆತನಿಂದ 3.34 ಲಕ್ಷ ರೂ. ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣಗಳನ್ನು ವಶ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶಾಂತಿನಗರದ ಲಿಂಗೇಶ್ (42) ಎಂಬಾತನನ್ನು ಬಂಧನ ,  ಈತನಿಂದ 65 g ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ

ಜೂನ್ 11 ರ ಬೆಂಗಳೂರಿನ ಯಲಹಂಕದ ಚೈತ್ರ ಎಂಬುವವರು ಹೊಳೆನರಸೀಪುರಕ್ಕೆ ಸಂಬಂಧಿಕರ ಮದುವೆಗೆಂದು ಆಗಮಿಸಿದ್ದು, ಈ ವೇಳೆ ಜೂ.12ರಂದು ಹೊಳೆನರಸೀಪುರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಮುಗಿಸಿ, ನಂತರ

ಬೆಂಗಳೂರಿಗೆ ಹೋಗಲು ಬಸ್‌ ಹತ್ತುವ ವೇಳೆ ಬ್ಯಾಗಿನಲ್ಲಿದ್ದ 35 ಗ್ರಾಂ ಚಿನ್ನದ ನಕ್ಲೇಸ್ 15 ಗ್ರಾಂ ಓಲೆ ಕಳುವಾಗಿರುವ ಬಗ್ಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಆರೋಪಿಯನ್ನು ಬಂದಿ ಸುವಲ್ಲಿ ಯಶಸ್ವಿಯಾಗಿದೆ

ಆರೋಪಿ ಲಿಂಗೇಶ್ 2003ರಿಂದ ಇಲ್ಲಿಯವರೆಗೆ ಹೊ.ನ.ಪುರದಲ್ಲಿ 3, ಬಳ್ಳಾರಿ ಯಲ್ಲಿ 2, ಉಡುಪಿ ಮತ್ತು ತುಮ ಕೂರಿನಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ಭಾಗಿಯಾಗಿದ್ದು, ಈಗ ಬಂಧಿತನಿಂದ ಒಟ್ಟು 65 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here