ಮೂವರು ಆರೋಪಿಗಳ ಬಂಧನ ಆರೋಪಿಗಳಿಂದ ರೂ, 5,72.000 ಬೆಲೆಯ ಖೋಟಾನೋಟು , ಹಾಗೂ ರೂ. 1,52,000 ನಗದು ಹಣ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಕಾರು ವಶ :

0

ಸಕಲೇಶಪುರ ನಗರ ಪೊಲೀಸ್ ರವರಿಂದ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ

ಮೂವರು ಆರೋಪಿಗಳ ಬಂಧನ ಆರೋಪಿಗಳಿಂದ ರೂ, 5,72.000 ಬೆಲೆಯ ಖೋಟಾನೋಟು , ಹಾಗೂ ರೂ. 1,52,000 ನಗದು ಹಣ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಕಾರು ವಶ :

ಪ್ರಕರಣದ ವಿವರ:

ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ, ಶ್ರೀ ಗೋಪಿ. ರವರಿಗೆ ದಿನಾಂಕ:04-11-2020 ರಂದು ದೊರೆತ ಖಚಿತ ವರ್ತಮಾನದ ಮೇರೆಗೆ ಸಕಲೇಶಪುರ ನಗರ ಠಾಣಾ ವ್ಯಾಪ್ತಿಯ ದೋಣಿಗಾಲ್ ಬಳಿ ಕೆಎ-04 ಎಎಫ್ 1247 ಸಂಖ್ಯೆಯ ಕಾರಿನಲ್ಲಿ ಬೆಂಗಳೂರು ಮೂಲದ 1) ಅಜಯ್ 2) ಜಿ. ಶಾಂತಕುಮಾರಿ 3) ಥಾಮಸ್ ಜನ ಅಸಾಮಿಗಳು ಖೋಟಾನೋಟು ಚಲಾವಣೆಗೆ ಯತ್ನಿಸುತ್ತಿದ್ದ ವೇಳೆಯಲ್ಲಿ ಡಿವೈಎಸ್ಪಿ, ರವರು ಸಿಬ್ಬಂದಿಯವರಾದ ಸತೀಶ್, ಸುನಿಲ್ ಲೋಕೇಶ, ಪೃಥ್ವಿ, ಮಹಿಳಾ ಸಿಬ್ಬಂದಿ-ರಮ್ಯ ಮತ್ತು ಚಾಲಕ ಅಶೋಕ ರವರೊಂದಿಗೆ ದಾಳಿ ನಡೆಸಿ ಮೇಲ್ಕಂಡ 3 ಜನರನ್ನು ವಶಕ್ಕೆ ತೆಗೆದುಕೊಂಡು ಆರೋಪಿತರ ವಶದಲ್ಲಿದ್ದಂತಹ 2000ರೂ, 500ರೂ ಹಾಗೂ 200ರೂ. ಮುಖಬೆಲೆಯ ಒಟ್ಟು 77,000ರೂ. ಖೋಟಾ ನೋಟುಗಳನ್ನು ಮತ್ತು ಆರೋಪಿತರು ಬೊಟಾನೋಟುಗಳನ್ನು ಚಲಾವಣೆ ಮಾಡಿ ಸಂಗ್ರಹಿಸಿದ್ದಂತಹ ಒಟ್ಟು 50,000ರೂ. ನೈಜ ನೋಟುಗಳನ್ನು ಈ ಕೆಳಕಂಡ ಆರೋಪಿಗಳಿಂದ ಅಮಾನತ್ತು ಪಡಿಸಿಕೊಳ್ಳಲಾಗಿತ್ತು.

ಆರೋಪಿಗಳ ವಿವರ:

1) ಅಜಯ್ ಬಿನ್ ಯತೀಶ್‌ರಾವ್, 54ವರ್ಷ, ಚಾಮರಾಜಪೇಟೆ, ಬೆಂಗಳೂರು.

2) ಜಿ. ಶಾಂತಕುಮಾರಿ ಕೋರಿ ಅಜಯ್, 50 ವರ್ಷ,  ಚಾಮರಾಜಪೇಟೆ

3) ಥಾಮಸ್ ಬಿನ್ ಅಜಯ್, 23 ವರ್ಷ,  ಚಾಮರಾಜಪೇಟೆ

ಆರೋಪಿತರ ಹಿನ್ನಲೆ:

ಆರೋಪಿತರು ಗಂಡ/ಹೆಂಡತಿ ಮತ್ತು ಮಗ ಆಗಿದ್ದು, ಆರೋಪಿ-ಜಯ್ ಈತನು ಲಾಕ್‌ಡೌನ್ ಅವಧಿಯಲ್ಲಿ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಸ್ಟೀನ್ ಪ್ರಿಂಟಿಂಗ್ ಮಾಡುವುದನ್ನು ಕಲಿತು ಬೆಂಗಳೂರಿನ ತಮ್ಮ ಮನೆಯಲ್ಲಿ ಕಂಪ್ಯೂಟರ್, ಸ್ವಾನರ್, ಪ್ರಿಂಟರ್, ಹಾಗೂ ಖೋಟಾನೋಟು ಮುರ್ದಣಕ್ಕೆ ಬೇಕಾಗುವ ಪೇಪರ್, ಸ್ಟಿಕರ್ ಮುಂತಾದ ಉಪಕರಣಗಳನ್ನು ಇಟ್ಟುಕೊಂಡು ಬೊಟಾನೋಟು ಗಳನ್ನು ಮುದ್ರಿಸುತ್ತಿದ್ದರೆಂದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಸದರಿಯವರನ್ನು ಕೃತ್ಯದ ಬಗ್ಗೆ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದ್ದು, ಆರೋಪಿಗಳು ನೀಡಿದ ಸುಳುವಿನ ಮೇರೆಗೆ ತನಿಖಾಧಿಕಾರಿಗಳು ಆರೋಪಿಗಳು ವಾಸವಾಗಿದ್ದ ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿನ ವಾಸದ ಮನೆಯನ್ನು ಶೋದಿಸಿದಾಗ ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದಂತಹ ಕಂಪ್ಯೂಟರ್, ಸಿಹಿಯು, ಸ್ಯಾನರ್ ಇಂಟರ್‌ ಮತ್ತು ಬೋಟಾನೋಟುಗಳನ್ನು ಮುದ್ರಿಸಲು ಬಳಸುತ್ತಿದ್ದ 4 ಅಚ್ಚುಗಳನ್ನು ವಶಪಡಿಸಿಕೊಂಡಿರುತ್ತದೆ, ಹಾಗೂ ಚಲಾವಣೆಗೆ ಸಿದ್ಧಪಡಿಸಲಾಗಿದ್ದ, ರೂ 2000/- ಮುಖ ಬೆಲೆಯ 1 ಲಕ್ಷ ರೂ. 200 ಮುಖ ಬೆಲೆಯ ರೂ. 30,500/- ಹಾಗೂ ಎ4 ಸೈಜ್‌ ಪೇಪರ್‌ನಲ್ಲಿ ಮುದ್ರಿಸಿ ಸಿದ್ಧಪಡಿಸಿದ್ದ ರೂ. 500 ಮುಖಬೆಲೆಯ ಪ್ರತಿ ಸೀಟಿನಲ್ಲಿ 4 ನೋಟುಗಳಂತೆ ಒಟ್ಟು 170 waens, sd e, do. 3,40.000/- de. 200 ಮುಖಬೆಲೆಯ ಪ್ರತಿ ಶೀಟಿನಲ್ಲಿ 4, ನೋಟುಗಳಂತೆ ಒಟ್ಟು 30 ಹಾಳೆಗಳು, ಮಲ್ಯ ರೂ. 24,000/- ಆಗಿದ್ದು ಒಟ್ಟು ಮೊತ್ತ 4,94,500/- ಆಗಿರುತ್ತದೆ

ಹಾಗೂ ಅರೋಪಿಗಳು ಖೋಟನೋಟುಗಳನ್ನು ಚಲಾವಣೆ ಮಾಡಿ ಪರಿವರ್ತಿಸಿದ್ದ ಒಟ್ಟು ಹಣ ರೂ 62,000/- ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಒಟ್ಟು ರೂ, 5,72,000/- ಬೆಲೆಯ ನೋಟನೋಟುಗಳು ಮತ್ತು ನಗದು ಹಣ 1,52,000/- ರೂ. ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಆರೋಪಿತರು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕಾರು ಬಾಡಿಗೆ ಪಡೆದು, ಕಾರಿನಲ್ಲಿ ಹೊರಗಡೆ ಜಿಲ್ಲೆಗಳಲ್ಲಿ ಪ್ರಯಾಣಿಸುತ್ತಾ, ವಿವಿಧ ಅಂಗಡಿಗಳಲ್ಲಿ ಸಾಮಾನುಗಳನ್ನು ಖರೀದಿಸಿ, ಖೋಟಾನೋಟುಗಳನ್ನು ಚಲಾವಣೆ ಮಾಡಿ ಚಿಲ್ಲರೆಯಾಗಿ ನೈಜ ಹಣವನ್ನು ಪಡೆಯುತ್ತಿರುತ್ತಾರೆಂದು ತಿಳಿದು ಬಂದಿರುತ್ತದೆ.

ಸದರಿ ಪ್ರಕರಣದ ತನಿಖೆಯನ್ನು ಸಿಪಿಐ ಸಕಲೇಶಪುರ ವೃತ್ತ ರವರು ಮುಂದುವರೆಸಿದ್ದು, ಸದರಿ ಪ್ರಕರಣದಲ್ಲಿ

ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ.

ಪ್ರಕರಣವನ್ನು ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ :

ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಸಕಲೇಶಪುರ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಗೋಪಿ, ಸಕಲೇಶಪುರ ವೃತ್ತ ನಿರೀಕ್ಷಕರಾದ ಶ್ರೀ ಗಿರೀಶ್ ಸಕಲೇಶಪುರ ಗ್ರಾಮಾಂತರ ಠಾಣೆಯ ಪಿಎಸ್ ಐ ಶ್ರೀ ಚಂದ್ರಶೇಖರ್, ಪ್ರೊ.ಪಿಎಸ್‌ಐ ಕು: ಭಾರತಿ ರಾಯಣ್ಣಗೌಡ ಹಾಗೂ ಎಎಸ್ಐ ರಂಗಸ್ವಾಮಿ ಹಾಗೂ ಸಿಬ್ಬಂದಿಗಳಾದ ಸತೀಶ್‌.ಸಿ.ಆರ್, ಸುನೀಲ್, ಲೋಕೇಶ್, ಪೃಥ್ವಿ, ಸತೀಶ್ ವಿ.ಕೆ, ರೇವಣ್ಣ, ಹೇಮಂತ್, ಗಿರೀಶ್ ಮತ್ತು ಮಹಿಳಾ ಸಿಬ್ಬಂದಿ ರಮ್ಮ ಹಾಗೂ ಖಚಾಲಕರಾದ ಹರೀಶ್, ಆಶೋಕ್, ಮಧು, ರೆಹಮಾನ್ ರವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಶಿಸಿ ವಿಶೇಷ ಬಹುಮಾನ ಘೋಷಿಸಿರುತ್ತಾರೆ.

ಈ ಪ್ರಕಟಣೆಯನ್ನು ಜಿಲ್ಲಾ ಪೊಲೀಸ್ ಕಛೇರಿಯಿಂದ ಹೊರಡಿಸಲಾಗಿದೆ,

https://m.facebook.com/story.php?story_fbid=3359350317508212&id=195025720607370

LEAVE A REPLY

Please enter your comment!
Please enter your name here