ಸಕಲೇಶಪುರ ಕಡೆಯಿಂದ ಕೇರಳ ಕಸಾಯಿಖಾನೆಗೆ ಸಾಗುತ್ತಿದ್ದ 18 ಹಸುಗಳ ರಕ್ಷಣೆ

0

ಸಕಲೇಶಪುರ – ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಹಾಸನ ಭಾಗದಿಂದ ಕೇರಳದ ಮೂಲದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸರಿಸುಮಾರು ಇಪ್ಪತ್ತು ಹಸುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿದ್ದಾರೆ. ಖಚಿತ ಮಾಹಿತಿ ಆಧಾರಿಸಿ ಕಾರ್ಯಾಚರಣೆಲ್ಲಿದ್ದ ಬಜರಂಗದಳ ಕಾರ್ಯಕರ್ತರು ಅನುಮಾನಾಸ್ಪದವಾಗಿ ಬಂದಂತಹ ಲಾರಿಯನ್ನು ಬಾಳ್ಳುಪೇಟೆ ಭಾಗದಿಂದ ಹಿಂಬಾಲಿಸಿದ್ದಾರೆ ಲಾರಿ ಚಾಲಕನಿಗೆ ಅನುಮಾನ ಬಂದು ಲಾರಿಯನ್ನು ವೇಗವಾಗಿ ಚಲಿಸಿದ್ದು ಸಕಲೇಶಪುರ ನಗರ ಭಾಗದಲ್ಲಿರುವ ಪುರಸಭೆ ಮುಂಭಾಗ ಲಾರಿಯನ್ನು ಅಡ್ಡಗಟ್ಟಿದ್ದು ಲಾರಿ ಚಾಲಕ ಪರಾರಿಯಾಗಲು ಯತ್ನಿಸಿದ್ದು ದುರದೃಷ್ಟಕರ ಸಿಕ್ಕಿಬಿದ್ದಿದ್ದಾನೆ. ಮುಂಜಾನೆ ವಾಹನ ಸಮೇತ ಹಸುಗಳನ್ನು ಪೋಲಿಸರ ವಶಕ್ಕೆ ನೀಡಿದ್ದು ಸಕಲೇಶಪುರ ನಗರ ಠಾಣೆಯ ಸಬ್ ಇನ್ಸೆಕ್ಟರ್‌ ಬಸವರಾಜ್ ಚಿಂಚೋಳಿ ನೇತೃತ್ವದಲ್ಲಿ ಎಫ್‌ಐಆರ್‌ ದಾಖಲಾಗಿದ್ದು ಹಿಂಸಾತ್ಮಕವಾಗಿ ತುಂಬಿದ್ದ ಹಸುಗಳನ್ನು ಇನ್ನೊಂದು ಲಾರಿಯನ್ನು ಕರೆಸಿ ಪೋಲಿಸರ ಸಮ್ಮುಖದಲ್ಲಿ ಒಂದು ಲಾರಿಗೆ 9 ಹಸು ಇನ್ನೊಂದು ಲಾರಿಗೆ 9 ಹಸು ತುಂಬಿಸಿ ಮೈಸೂರಿನ ಪಿಂಜಾರ್‌ ಪೋಲ್ ಗೋಶಾಲೆಗೆ ಬಿಡಲಾಯಿತು..

#hassan #hassannews #sakleshpur

LEAVE A REPLY

Please enter your comment!
Please enter your name here