ನ.10 ರಂದು ತೆಂಗಿನ ನಾರಿನ ಭೂವಸ್ತ್ರದ ಬಳಕೆ ಕಾರ್ಯಾಗಾರ ಇದೆ ಆಸಕ್ತರು ಭಾಗವಹಿಸಿ ಆದಾಯದ ಮೂಲ ತಿಳಿದುಕೊಳ್ಳಿ !! , ನಿಮ್ಮ ಸ್ನೇಹಿತ ರೈತರಿಗೆ ಶೇರ್ ಮಾಡಿ!!

0


ಹಾಸನ,ನ.07(ಹಾಸನ್_ನ್ಯೂಸ್):- ರಸ್ತೆ ನಿರ್ಮಾಣದಲ್ಲಿ, ಗಣಿಗಾರಿಕೆಯಲ್ಲಿ,

ಇಳಿಜಾರು ಭೂಮಿಯಲ್ಲಿ ತೆಂಗಿನ ನಾರಿನ ಭೂವಸ್ತ್ರವನ್ನು ಹೊದಿಸುವುದರಿಂದ ಭೂಮಿಯ ಸವೆತವನ್ನು ತಡೆಗಟ್ಟಬಹುದಾಗಿದೆ.

ಇದರಿಂದ ರಸ್ತೆಯು ಗಟ್ಟಿಯಾಗುವುದಲ್ಲದೆ ರಸ್ತೆಗೆ ಬಿರುಕು ಉಂಟಾಗುವುದಿಲ್ಲ,

ಗುಣಮಟ್ಟದ ದೀರ್ಘಕಾಲ ಬಾಳಿಕೆಯನ್ನು ಸಾಧಿಸಬಹುದಾಗಿದೆ. ಇದಲ್ಲದೆ,

ಕೃಷಿ ಹೊಂಡ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ರಸ್ತೆ, ನೀರಾವರಿ ಕಾಲುವೆಗಳು,

ಕಟ್ಟಡ ಮೇಲ್ಚಾವಣಿ, ಸೇತುವೆ ಇತರೆ ಕಾಮಗಾರಿಗಳಲ್ಲಿ ಸಹ ತೆಂಗಿನ ನಾರಿನ ಭೂವಸ್ತ್ರವನ್ನು ಉಪಯೋಗಿಸಬಹುದಾಗಿದೆ.

ತೆಂಗಿನ ನಾರಿನ ಭೂವಸ್ತ್ರವನ್ನು ಉಪಯೋಗಿಸುವ ಬಗ್ಗೆ ನ.10 ರಂದು ಮಧ್ಯಾಹ್ನ 3 ಗಂಟೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸಭಾಂಗಣ,

ಡೈರಿ ವೃತ್ತ, ಹಾಸನ ಇಲ್ಲಿ, ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಆಸಕ್ತರು ಸದರಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆಯಬಹುದಾಗಿದೆ – ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು , ಹಾಸನ

LEAVE A REPLY

Please enter your comment!
Please enter your name here