ನೆಲಮಂಗಲದ ಈ ಮೋರಿಯಲ್ಲಿ ಹಾಸನ ಜಿಲ್ಲೆಯ ಮೂಲದ ಈ ಯುವಕನ ಮೃತದೇಹ ಪತ್ತೆ

    0

    ನೆಲಮಂಗಲ : ರಾಷ್ಟ್ರೀಯ ಹೆದ್ದಾರಿ 48ರ ದಾನೋಜಿಪಾಳ್ಯದ ಬಳಿ ಮೋರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಈಗಿನ ದೊಡ್ಡಬಳ್ಳಾಪುರದ ಬಸವೇಶ್ವರ ಬಡಾವಣೆ ನಿವಾಸಿ ಸಂತೋಷ್ ಕುಮಾರ್ (32) ಅವರ ಮೃತದೇಹ ಪತ್ತೆಯಾಗಿತ್ತು ., ಸ್ಥಳೀಯರು ನಿನ್ನೆ(5Aug2023) ಶನಿವಾರ ಮಧ್ಯಾಹ್ನ ಮೃತದೇಹ ಕಂಡು ತಕ್ಷಣ ಪೊಲೀಸರಿಗೆ ತಿಳಿಸಿದ್ದರು. ಇನ್‌ಸ್ಪೆಕ್ಟರ್ ಶಶಿಧರ್ , ಅವರ , ತಂಡ, ಮೃತ ವ್ಯಕ್ತಿಯ ಜೇಬಿನಲ್ಲಿದ್ದ ಮೊಬೈಲ್‌ನಿಂದ ಸಂಬಂಧಿಕರ ದೂರವಾಣಿ ಸಂಖ್ಯೆಗೆ ಆ ಕೂಡಲೇ ಕರೆ ಮಾಡಿದರು.

    ಸ್ಥಳಕ್ಕಾಗಮಿಸಿದ ಸಂಬಂಧಿಗಳು ಕೈಮೇಲಿದ್ದ ಹಚ್ಚೆ ಹಾಗೂ ಬಟ್ಟೆ, ಕನ್ನಡಕದ ಆಧಾರದ ಮೇಲೆ ಸಂತೋಷ್ ಕುಮಾರ್ ಎಂದು ಗುರುತಿಸಿದರು. , ಇವರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕುಂಚೆ ಗ್ರಾಮದ ನಿವಾಸಿ ಸಂತೋಷ್ ಕುಮಾರ್ ಎಂದು ಕನ್ಫರ್ಮ್ ಆಗಿತ್ತು , ದೊಡ್ಡಬಳ್ಳಾಪುರದ ಬಸವೇಶ್ವರ ಬಡಾವಣೆಯಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ನೆಲೆಸಿದ್ದರು. 15 ವರ್ಷಗಳಿಂದ ಚಾಟ್ಸ್ ಅಂಗಡಿ ನಡೆಸುತ್ತಿದ್ದ ಇವರು.

    ವಾರದ ಹಿಂದೆ ಪತ್ನಿಯನ್ನು ತವರು ಮನೆಗೆ ಕಳಿಸಲು ನಂಜನಗೂಡಿಗೆ ತೆರಳಿದ್ದ ಸಂತೋಷ್, ಬಳಿಕ ವಾರದ ಹಿಂದೆ ಪತ್ನಿಯನ್ನು ತವರು ಮನೆಗೆ ಕಳಿಸಲು ನಂಜನಗೂಡಿಗೆ ತೆರಳಿದ್ದ ಸಂತೋಷ್, ಬಳಿಕ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳಿದ್ದರಂತೆ . ಅವರು ಅಪಘಾತದಿಂದ ಮೃತಪಟ್ಟಿರಬಹುದೆಂದು ಮೇಲ್ನೋಟಕ್ಕೆ ಕಂಡು ಬಂದರೂ ಸಹ, ಕೊಲೆ ಆಗಿರುವ ಶಂಕೆಯಿದೆ ಎನ್ನಲಾಗಿದೆ , ಕುಟುಂಬಸ್ಥರ ದೂರಿನ ಅನುಸಾರ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು’ ಎಂದು ಪೊಲೀಸರು ತಿಳಿಸಿದರು.

    ಸ್ಥಳ ಪರಿಶೀಲನೆ ನಡೆಸಿದ ಸ್ಥಳೀಯ ಪೊಲೀಸರು

    LEAVE A REPLY

    Please enter your comment!
    Please enter your name here