ಸ್ವಾತಂತ್ರ್ಯ ಹೋರಾಟಗಾರರು, ನಿವೃತ್ತ ಶಿಕ್ಷಕರೂ, ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರೂ, ಹೋಗಾರ್ಡ್ಸ್ ನಿವೃತ್ತ ಕಮಾಂಡೆಂಟ್ ಆದ ಶ್ರೀ. ಹೆಚ್.ಸಿ. ಸುಬ್ಬರಾವ್ (97 ವರ್ಷ) ಇಂದು ಮಧ್ಯಾಹ್ನ ಹಾಸನದ ಸ್ವಗೃಹದಲ್ಲಿ ನಿಧನ

  0

  ಸ್ವಾತಂತ್ರ್ಯ ಹೋರಾಟಗಾರರು, ನಿವೃತ್ತ ಶಿಕ್ಷಕರೂ, ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರೂ, ಹೋಗಾರ್ಡ್ಸ್ ನಿವೃತ್ತ ಕಮಾಂಡೆಂಟ್ ಆದ ಶ್ರೀ. ಹೆಚ್.ಸಿ. ಸುಬ್ಬರಾವ್ (97 ವರ್ಷ) ಇಂದು ಮಧ್ಯಾಹ್ನ ಹಾಸನದ ಸ್ವಗೃಹದಲ್ಲಿ ನಿಧನರಾದರು.

  ದಿವಂಗತ ಸುಬ್ಬುರಾವ್ ಹಾಸನ ನಗರದ ಸರ್ಕಾರಿ ಹೊಸ ಮಾಧ್ಯಮಿಕ ಶಾಲೆಯಲ್ಲಿ ಬಹಳ ವರ್ಷಗಳು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು, ಮತ್ತು ನಡತೆಯಲ್ಲಿ ಶಿಸ್ತಿನ ಸಿಪಾಯಿ ಎಂದು ಜನ ಪ್ರಶಂಸಿಸುತ್ತಿದ್ದರು ,

  ಸೇವಾದಳ ಸಂಘಟಿಕರಾಗಿಯೂ ಸೇವೆ ಸಲ್ಲಿಸಿರುವರು , 2013 ರಲ್ಲಿ “ಜಯನಗರ 4th ಬ್ಲಾಕ್” ಎಂಬ ಯ್ಯೂಟ್ಯೂಬ್ ಬ್ಲಾಕ್ ಬಸ್ಟರ್ ಕಿರುಚಿತ್ರದಲ್ಲಿ ನಮ್ಮ ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರ ಡಾಲಿ ಧನಂಜಯ ಅವರೊಂದಿಗೆ ನಟಿಸಿದ್ದರು.

  ಮೃತರು ಮೂವರು ಪುತ್ರಿಯರು, ಓರ್ವ ಪುತ್ರ ಅಪಾರ ಬಂಧುಮಿತ್ರರನ್ನು , ಸಾವಿರಾರು ಶಿಷ್ಯವೃಂದವನ್ನು ಅಗಲಿದ್ದಾರೆ,

  ” ಜಯನಗರ 4th ಬ್ಲಾಕ್ ನಲ್ಲಿ ಜೊತೆಯಾದ ಜೀವ, ಸ್ಫೂರ್ತಿಯಾದ ಜೀವ, ನನ್ನ ಪಾಲಿನ ವೆಂಕಿ, ಸುಬ್ಬರಾವ್ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ  Rest in peace ” – @kadhananjaya ಅರಸೀಕೆರೆ ಧನಂಜಯ (ನಾಯಕ ನಟ) ಕನ್ನಡ ಚಲನಚಿತ್ರರಂಗ

  LEAVE A REPLY

  Please enter your comment!
  Please enter your name here