” ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ ” ಪ್ರಬಂಧ ಸ್ಪರ್ಧೆಯಲ್ಲಿ ಆಡುವಳ್ಳಿ, ಹಾಸನದ ಶ್ರೀ ಯೋಗೇಶ್ ಪಿ.ಕೆ. ಯವರು ಪ್ರಥಮ ಬಹುಮಾನ 🏅 ಗಳಿಸಿದರು

0

*”ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ”*
ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯ
*ಬಹುಮಾನ ವಿತರಣಾ ಸಮಾರಂಭ*

ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ರಾಜ್ಯ ಘಟಕದ ವತಿಯಿಂದ 2020ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯವ್ಯಾಪಿ ಅಭಿಯಾನದ ಅಂಗವಾಗಿ ಹಾಸನ ಶಾಖೆಯ ವತಿಯಿಂದ
*”ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ”* ಎಂಬ ವಿಷಯಕ್ಕೆ ಸಂಬಂಧಿಸಿ ಹಾಸನದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು 20-12-2020 ಭಾನುವಾರದಂದು ಬೆಳಿಗ್ಗೆ 10:30 ಘಂಟೆಗೆ ಸರಿಯಾಗಿ ಹಾಸನ ನಗರದ ಎನ್.ಆರ್ ಸರ್ಕಲ್ ನ ಹತ್ತಿರದಲ್ಲಿರುವ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆಯಿತು . ಕಾರ್ಯಕ್ರಮಕ್ಕೆ ಸಂಘಟನೆಯ ರಾಜ್ಯ ಸಲಹಾ ಸಮಿತಿಯ ಸದಸ್ಯರು ಹಾಗೂ ಪ್ರಸಿದ್ಧ ವಾಗ್ಮಿಗಳಾದ ಜ|| ಅಕ್ಬರ್ ಅಲಿ ಉಡುಪಿಯವರು ಆಗಮಿಸಿ ಅಧ್ಯಕ್ಷತೆಯನ್ನು ವಹಿಸಿ ವಿಜೇತರನ್ನು ಪ್ರೋತ್ಸಾಹಿಸಿದರು. ಮುಖ್ಯ ಅತಿಥಿಗಳಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯದ ಜಂಟಿ ಕಾರ್ಯದರ್ಶಿಗಳಾದ ರಿಯಾಝ್ ಅಹ್ಮದ್ ರೋಣ ಮತ್ತು ಪ್ರಸಿದ್ಧ ಸಾಹಿತಿಗಳು ಹಾಗೂ ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ  ಡಾ|| C.S.ಯತೀಶ್ವರ M.A.,PhD ಯವರು ಸಮಾರಂಭಕ್ಕೆ ಆಗಮಿಸಿದ್ದರು. ಈ ಪ್ರಬಂಧ ಸ್ಪರ್ಧೆಯಲ್ಲಿ ಆಡುವಳ್ಳಿ, ಹಾಸನದ ಶ್ರೀ ಯೋಗೇಶ್ ಪಿ.ಕೆ. ಯವರು ಪ್ರಥಮ ಬಹುಮಾನ (10,000 ರೂ’ಗಳನ್ನು) ಗಳಿಸಿದರು. ಹಾಗೂ
ತಣ್ಣೀರುಹಳ್ಳ ಹಾಸನದ ನಿವಾಸಿಯಾಗಿರುವ ಶ್ರೀಮತಿ ದಾಕ್ಷಾಯಿಣಿ ಜಿ.ಕೆ. ಯವರು ದ್ವಿತೀಯ ಬಹುಮಾನ (7,000 ರೂ) ವನ್ನು ತನ್ನದಾಗಿಸಿಕೊಂಡರೆ, ಆರ್.ಸಿ. ರಸ್ತೆ, ಹಾಸನದ ನಿವಾಸಿಯಾಗಿರುವ ಶ್ರೀ ಮಲ್ಲೇಶ್ ಗೌಡ ಬಿ.ಎಸ್ ರವರು ತೃತೀಯ ಬಹುಮಾನ (5,000 ರೂ) ವನ್ನು ಜಯಿಸಿದರು. ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ಮತ್ತು ನೆನಪಿ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಸಮೇತ ಸುಮಾರು 150 ಗಣ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here