ಡಾ. ಬಿ ಅರ್ ಅಂಬೇಡ್ಕರ್ ಮಹಾನ್ ಮಾನವತಾವಾದಿ, ದೇಶದ ಸರ್ವ ಜನಾಂಗದ ಹಿತ ದೃಷ್ಠಿ ಹೊಂದಿದ ಮಹಾನ್ ನಾಯಕ ಎಂದು ಸರ್ಕಾರಿ ಕಲಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಡಿ.ಜಿ ಕೃಷ್ಣೇಗೌಡ ಅಭಿಪ್ರಾಯ ಪಟ್ಟರು.

ಆಲೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ದಿನಾಂಕ 1/5/2022 ರ ಭಾನುವಾರ ಸಂಜೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಭೀಮ ನಡಿಗೆ ಮೂಲಕ ಆಗಮಿಸಿದ ಅತಿಥಿಗಳು ಮತ್ತು ಗ್ರಾಮಸ್ಥರು ವೇದಿಕೆಗೆ ಆಗಮಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಲೂರು – ಸಕಲೇಶಪುರ ವಿಧಾನಸಭೆ ಶಾಸಕರಾದ ಶ್ರೀ ಹೆಚ್.ಕೆ ಕುಮಾರಸ್ವಾಮಿ ಅಂಬೇಡ್ಕರ್ ಅತೀ ಹೆಚ್ಚು ಕಾಲ ಓದುವುದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ತತ್ವಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದೇಳಿದರು.
ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಆಲೂರು ತಾಲ್ಲೂಕಿನ ಆರೋಗ್ಯ ಅಧಿಕಾರಿ ಶ್ರೀಯುತ ತಿಮ್ಮಯ್ಯನವರು ಅಂಬೇಡ್ಕರ್ ರಂತೆ ಒಳ್ಳೆಯ ಆಲೋಚನೆ ಮಾಡಿ. ಪುಸ್ತಕ ಪ್ರೇಮಿಯಾಗಿದ್ದ ಅಂಬೇಡ್ಕರ್ ಗ್ರಂಥಾಲಯಕ್ಕಾಗಿಯೇ ಹೆಚ್ಚು ಸಮಯ ಮೀಸಲಾಗಿಟ್ಟಿದ್ದರು. ಅವರ ಸಂವಿಧಾನಕ್ಕೆ ನೀಡಿದ ಕೊಡುಗೆ ಅಪಾರ ಎಂದು ತಿಳಿಸಿದರು.

ಹಾಸನದ ಲೆಕ್ಕ ಪರಿಶೋಧನಾ ಮತ್ತು ಲೆಕ್ಕ ಪತ್ರ ಇಲಾಖೆಯ ಮಧು ಎಂ ಮಾತನಾಡಿ ಸಂವಿಧಾನ ಬರೆಯುವ ಅವಕಾಶವನ್ನು ಅಂಬೇಡ್ಕರ್ ರವರಿಗೆ ತಪ್ಪಿಸುವ ಹುನ್ನಾರ ನಡೆದಿತ್ತು .ಇಂಗ್ಲೆಂಡ್ ನ ರಾಣಿ ಅಂಬೇಡ್ಕರ್ ರವರನ್ನು ಕರಡು ಸಮಿತಿಯ ಅಧ್ಯಕ್ಷರಾಗಿ ಮಾಡದೆ ಹೋದರೆ ಭಾರತ ದೇಶಕ್ಕೆ ನೀಡುವ ಸ್ವಾತಂತ್ರವನ್ನು ಮುಂದೂಡಲಾಗುವುದು ಎಂದು ಹೇಳಿದ್ದರು, ಆಗ ಅಂಬೇಡ್ಕರ್ ರವರಿಗೆ ಅವಕಾಶ ದೊರೆಯಿತು. ಇದು ಅಂಬೇಡ್ಕರ್ ರವರಿಗೆ ಇದ್ದ ಶಕ್ತಿ ಎಂದರೆ ತಪ್ಪಾಗಲಾರದು ಎಂದು ಘಟನೆಯನ್ನು ನೆನೆದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಮತ್ತು ಬಿಜೆಪಿ ಮುಖಂಡ ಸಿಮೆಂಟ್ ಮಂಜು ರವರು ಮಾತನಾಡಿ ಅವರು ಅನುಭವಿಸಿದ ಕಷ್ಟಗಳು ಇಂದು ನಾವೆಲ್ಲಾ ನೆಮ್ಮದಿಯಿಂದ ಇರಲು ಸಾಧ್ಯ ಆಗಿದ್ದು ಅಂಬೇಡ್ಕರ್ ರಚಿತ ಸಂವಿಧಾನದಿಂದ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಪಾಳ್ಯ ಗ್ರಾ.ಪ ಅಧ್ಯಕ್ಷರಾದ ಪ್ರಕಾಶ್ ಎಸ್ ಎನ್ ಮತ್ತು ಸದಸ್ಯರಾದ ಉಮೇಶ್,ಕಲ್ಯಾಣ್,ವೆಂಕಟೇಶ್, ಕೃಷಿ ಪತ್ತಿನ ನಿಂಗರಾಜು, ಹೊನ್ನಪ್ಪ, ಸಿ.ವಿ ಲಿಂಗರಾಜು, ಶಿಕ್ಷಕ ಕುಮಾರ್, ಆಗ್ರೋ ಸೆಂಟರ್ ನ ಮಲ್ಲಿಕಾರ್ಜುನ್, ಮಂಜುನಾಥ ಶಾಮಿಯಾನ ದ ಮೋಹನ್ ಹಾಗೂ ಹೊನ್ನವಳ್ಳಿ ಗ್ರಾಮದ ಎಲ್ಲಾ ಸಮುದಾಯದ ಜನತೆ ಹಾಜರಿದ್ದರು.