ಚಿಕ್ಕಮಗಳೂರು – ಮಂಗಳೂರು ಸಂಪರ್ಕಿಸುವ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿ ಅಲ್ಲದೇ ,
ಕೆಲ ಕಾಲ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿ. ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಸಂಜೆ ಒಂಟಿ ಸಲಗ ರಸ್ತೆಯಲ್ಲಿ ನಿಂತು ಆತಂಕದಲ್ಲಿ ಅದು ಇರುವಾಗ , ಇತ್ತ ವಾಹನ ಸವಾರರಿಗೆ ಒಂದು ರೀತಿ ಭಯ ಸೃಷ್ಟಿ ಮಾಡಿತ್ತು . , ಕಾಡಾನೆ ಕಂಡು ಚಾಲಕ ಬಸ್ ಅಲ್ಲೇ ನಿಲ್ಲಿಸಿದ್ದು, ರಸ್ತೆ ಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾಡಾನೆಯು ಸ್ವಲ್ಪ ಸಮಯದ ನಂತರ
ಏಳನೇ ತಿರುವಿನ ಮತ್ತೊಂದು ಭಾಗದಲ್ಲಿ ಹೋಗಿ ನಿಂತಿದೆ . ಬಸ್‌ನ ಹಿಂದೆ ಹಲವು ವಾಹನಗಳು ಅರ್ಧ ಗಂಟೆಗೂ ಅಧಿಕ ಕಾಲ ಸಾಲುಗಟ್ಟಿ ನಿಂತಿದ್ದು ಅದೃಷ್ಟವಶಾತ್ ಒಂದೊಂದೇ ವಾಹನಗಳು ನಿಧಾನವಾಗಿ ಹೊರಟವು . ಬಸ್ ಕಾಡಾನೆಯಿಂದ ತುಸು ಮುಂದೋದ ನಂತರ
ಪ್ರಯಾಣಿಕರೆಲ್ಲರೂ ನಿಟ್ಟುಸಿರು ಬಿಟ್ಟರು. ಅರಣ್ಯ ಅಧಿಕಾರಿಗಳು ಚಾರ್ಮಾಡಿ ಘಾಟಿನಲ್ಲಿ ರಾತ್ರಿ ಹೊತ್ತು ವಾಹನ ಸಂಚಾರ ನಿರ್ಬಂಧಿಸಿ ಕಾಡಾನೆಯನ್ನು ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮೊನ್ನೆ ರಾತ್ರಿ ಹಾನು ಬಾಳು ನಲ್ಲಿ ಆನೆಯೊಂದು ಮನೆ ಹಾಗೂ ತೋಟಗಳಿಗೆ ದಾಳಿ ಮಾಡಿ ಹಾನಿ ಮಾಡಿದ ಘಟನೆ ವರದಿಯಾಗಿದೆ.
ಸಕಲೇಶಪುರ ತಾಲೂಕಿನ ಕ್ಯಾಮನಹಳ್ಳಿ ಗ್ರಾಮದ ಮುರಳಿ ಅವರ ಮನೆಯ ಮೇಲೆ ರಾತ್ರಿ 12 ಘಂಟೆ ಸುಮಾರಿಗೆ ಮಾಕನ ಎಂಬ ಆನೆಯೂ ದಾಳಿ ನಡೆಸಿ ಮನೆಯನ್ನು ಹಾನಿಯುಂಟು ಮಾಡಿದೆ
ರಾತ್ರಿ 10.30 ರ ಸುಮಾರಿಗೆ ಕ್ಯಾಮನ ಹಳ್ಳಿ ಮುರಳಿ ಎಂಬವರ ಮನೆ ಅಂಗಳಕ್ಕೆ ಬಂದ ಆನೆ ಅವರ ಮನೆಗೆ ಗುದ್ದಿದೆ.ಆನೆ ಗುದ್ದಿದ ರಭಸಕ್ಕೆ ಅವರ ಆರ್ ಸಿ ಸಿ ಮನೆಯ ಸಿಟೌಟ್ ನ ಹಂಚುಗಳು ಪುಡಿ ಪುಡಿಯಾಗಿದೆ. ಮನೆ ಕಿಟಕಿ ಮುರಿದು ಬಿದ್ದಿದೆ. ಮನೆಯೊಳಗಿದ್ದ ಆ ಮನೆಯ ನಿವಾಸಿಗಳು ಜೀವ ಭಯದಿಂದ ಘಟನೆಗಳನ್ನು ನೋಡುತ್ತಾ
ಕಾಲ ಕಳೆದಿದ್ದಾರೆ. ಮನೆಯ ಕಿಟಿಕಿ ಬಳಿ ಇಟ್ಟಿದ್ದ ಭತ್ತ ಪಡೆಯಲು ಆನೆ ಇ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.ಬಳಿಕ ಚಿದಂಬರ ಎಂಬವರ ಮನೆ ಗೇಟು, ಜಾಯ್ ಮ್ಯಾತ್ಯು ರವರ ಗೇಟು ಹಾಗೂ ಮನೆಯ ಪೋರ್ಟಿಕೋ ದಿಲೀಪ್ ರವರ ಶೆಡ್, ಧನಂಜಯ ರವರ ತೋಟ, ಅಗಲಟ್ಟಿ ಎಸ್ಟೇಟ್ ನ ಕರೆಂಟ್ ಬೇಲಿ ಹಾಗೂ ಗೇಟ್ ಗಳಿಗೆ ಹಾನಿ ಮಾಡಿದೆ.
ಪರಿಸ್ಥಿತಿ ಈ ರೀತಿ ಆದ್ರೆ ಬದುಕೋದು ಹೇಗೆ. ಇವೆಲ್ಲಾ ಘಟನೆಗಳು ಆ ಪರಿಸರದಲ್ಲಿ ಜನರನ್ನು ಆತಂಕಕ್ಕೆ ದೂಡಿವೆ.
ಶಾಸಕರಾದ ಸಿಮೆಂಟ್ ಮಂಜು ಸ್ಥಳಕ್ಕೆ ಭೇಟಿ ನೀಡಿದರು