ಮೊಸಳೆಹೊಸಹಳ್ಳಿಯ ತಾತ್ಕಾಲಿಕ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡದಿಂದ ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ

0

ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು, ಮೊಸಳೆಹೊಸಹಳ್ಳಿ 2019-20 ಸಾಲಿನಲ್ಲಿ ಪ್ರಾರಂಭವಾಗಿ ಈ ಕೆಳಕಂಡ ಕೋರ್ಸ್‌ಗಳಲ್ಲಿ ಸುಮಾರು 550 ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುತ್ತಾರೆ. ಈ ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್‌ಗಳವಿವರ:

• ಸಿವಿಲ್‌ ಇಂಜಿನಿಯರಿಂಗ್‌

• ಕಂಪ್ಯೂಟರ್‌ ಸೈನ್ಸ್‌  ಇಂಜಿನಿಯರಿಂಗ್‌

• ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯೂನಿಕೇಶನ್‌ ಇಂಜಿನಿಯರಿಂಗ್‌

• ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್ಇಂಜಿನಿಯರಿಂಗ್

• ಮೆಕ್ಯಾನಿಕಲ್‌  ಇಂಜಿನಿಯರಿಂಗ್‌

ಸಂಸ್ಥೆಯು ಹಾಸನ ನಗರದಿಂದ ಸುಮಾರು 17 ಕಿಲೋ ಮೀಟರ್‌ ದೂರದಲ್ಲಿದ್ದು ಈಗಾಗಲೇ ತಾತ್ಕಾಲಿಕ ಕಟ್ಟಡದಿಂದ ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿರುತ್ತದೆ.

ಈ ಸಂಸ್ಥೆಯಲ್ಲಿ ಬಾಲಕರ ಮತ್ತು ಬಾಲಕಿಯರ ಪ್ರತ್ಯೇಕ ವಸತಿನಿಲಯಗಳು ಮೊಸಳೆಹೊಸಹಳ್ಳಿಯಲ್ಲಿ ಮತ್ತು ಹಾಸನದಲ್ಲಿ ಲಭ್ಯವಿರುತ್ತವೆ.

ಈ ಸಂಸ್ಥೆಯ ಎಲ್ಲಾ ವಿಭಾಗಗಳಲ್ಲು ನುರಿತ ಉಪನ್ಯಾಸಕರುಲಭ್ಯರಿರುತ್ತಾರೆ.

ಈ   ಸಂಸ್ಥೆಯಲ್ಲಿ ವಿಧ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿರುವ ಪ್ರಯೋಗಾಲಯಗಳು ಮತ್ತು ಗ್ರಂಥಾಲಯ ಲಭ್ಯವಿರುತ್ತದೆ.

ಕಾಲೇಜಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಸಾರಿಗೆ ವ್ಯವಸ್ಥೆಯನ್ನು ಕೆ.ಎಸ್.ಆರ್.ಟಿ.ಸಿ. ಹಾಸನ, ಇವರು ಬೆಳಗ್ಗೆ 8 ರಿಂದ 9 ರವರೆಗೆ ನಾಲ್ಕು ಬಸ್‌ಗಳು ಮತ್ತು ಸಂಜೆ ಕಾಲೇಜಿನಿಂದ ಹಾಸನಕ್ಕೆ 4 ರಿಂದ 5.15 ರ ವರೆಗೆ ನಾಲ್ಕು ಬಸ್ಗಳನ್ನು ಸಂಚರಿಸಲು ವ್ಯವಸ್ಥೆ ಮಾಡಿಕೊಡಲು ಒಪ್ಪಿರುತ್ತಾರೆ.

ಈ ಬಾರಿಯ 2021-22 ನೇ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆಯು CET ಮುಖಾಂತರ ಪ್ರಾರಂಭಗೊಂಡಿರುತ್ತದೆ.

ಈ ಸಂಸ್ಥೆಯ CET ಕೊಡ್‌ E-274 ಅಗಿದ್ದು, ವಿದ್ಯಾರ್ಥಿಗಳು ಮೇಲೆ ಸೂಚಿಸಿದ 5ಇಂಜಿನಿಯರಿಂಗ್‌ ವಿಷಯಗಳನ್ನು ಆಯ್ಕೆಮಾಡಬಹುದು.

ವಿದ್ಯಾರ್ಥಿಗಳ ಪ್ರವೇಶ ಶುಲ್ಕವು ಪರಿಶಿಷ್ಟಜಾತಿ/ಪರಿಶಿಷ್ಟಪಂಗಡಗಳಿಗೆ ರೂ/-10280 ಹಾಗೂ ಸಾಮಾನ್ಯ ವರ್ಗದವರಿಗೆ ರೂ/- 6690 ಗಳಾಗಿರುತ್ತದೆ.

ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ವಸತಿನಿಲಯದ ಸೌಲಭ್ಯ ಲಭ್ಯವಿರುತ್ತದೆ.

ಇದರ  ಸದುಪಯೋಗಗಳನ್ನು ಪಡೆದುಕೊಳ್ಳಲು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.

             ಪ್ರವೇಶಾತಿ ಮತ್ತು ಇನ್ನಿತರ ಮಾಹಿತಿಗಾಗಿ ಸಂಸ್ಥೆಯ ಪ್ರಾಂಶುಪಾಲರನ್ನುಸಂಪರ್ಕಿಸಬಹುದು.

ಸಂಪರ್ಕಿಸ ಬಹುದಾದ ದೂರವಾಣಿ ಸಂಖ್ಯೆ   Mobile – 1)9660192488 , 2)9448941222

ವಂದನೆಗಳೊಂದಿಗೆ                                    ತಮ್ಮವಿಶ್ವಾಸಿ                   ಪ್ರಾಂಶುಪಾಲರು

#courseshassan #hassan #hassannews #engineeringcollegehassan #Mosalehosalli

LEAVE A REPLY

Please enter your comment!
Please enter your name here