ಹಾಸನ :ಹಾಸನ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಜಿಲ್ಲೆಯ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ , ಹಾಸನ ಮೆಗಾ ಡೈರಿಯ ಐಸ್ ಕ್ರೀಮ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಕರ್ನಾಟಕ ಸರ್ಕಾರ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾ ಪಂಚಾಯಿತಿ ಸಿಇಒ ಶ್ರೀ ಕಾಂತರಾಜು, ಇಲಾಖೆಯ ನಿರ್ದೇಶಕರಾದ ಡಾ.ಮಂಜುನಾಥ್ ಪಾಳೇಗಾರ್, ಹಾಸನ ಮಿಲ್ಕ್ ಡೈರಿ ಎಂ.ಡಿ ಶ್ರೀ ಗೋಪಾಲಯ್ಯ, ಜಂಟಿ ನಿರ್ದೇಶಕರಾದ ಡಾ. ವೀರಭದ್ರಯ್ಯ, ಉಪನಿರ್ದೇಶಕರಾದ ಡಾ. ರಮೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳಿದ್ದರು.
ಇದೆ ಮೊದಲ ಬಾರಿಗೆ ಪಶು ಸಹಾಯವಾಣಿ ಪ್ರಾರಂಭಿಸಲಾಗಿದೆ ., ರೈತರು 1965 ಕರೆಮಾಡಿ ಸಹಾಯ ಪಡೆಯ ಬಹುದು .ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ, ಇಲಾಖಾ ಆಡಳಿತ ಸುಧಾರಣೆಗೂ ಕೂಡ ಆದ್ಯತೆ , ಪಶು ವೈದ್ಯರು ರೈತರಿಗೆ ಲಭ್ಯವಾಗಬೇಕು ,ಔಷಧಿಗಳ ಚೀಟಿ ಬರೆದು ಕೊಡದೆ ಸರ್ಕಾರದಿಂದ ನೀಡುವ ಔಷಧಿಗಳನ್ನು ಉಚಿತವಾಗಿ ಒದಗಿಸಬೇಕು.ಸಹಾಯ ವಾಣಿಗೆ ಕರೆ ಬಂದಾಗ ಸಂಚಾರಿ ಚಿಕಿತ್ಸಾ ವಾಹನ ರೈತರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಪ್ರಭು ಬಿ ಚೌವ್ಹಾಣ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಬ್ಬನಘಟ್ಟ ಗೋಶಾಲೆ ಕಾಮಗಾರಿ ತೃಪ್ತಿಕರವಾಗಿದೆ . ಉದ್ಯೋಗ ಖಾತರಿ ಯೋಜನೆ ಸದ್ಬಳಕೆ ಮಾಡಿ ಇತರ ಮೂಲಭೂತ ಸೌಕರ್ಯ ಒದಗಿಸಿ ಎಂದು ಸಚಿವರು ನಿರ್ದೇಶನ ನೀಡಿದರು.ಶೀಘ್ರದಲ್ಲೇ 400 ಪಶು ವೈದ್ಯರ ನೇಮಕಾತಿ ನಡೆಯುತ್ತಿದೆ ಜಿಲ್ಲೆಗಳ ವೈದ್ಯರ ಕೊರತೆ ನೀಗಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ಅವರು ಮಾತನಾಡಿ ಜಿಲ್ಲೆಯಲ್ಲಿ ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಅಭಿವೃದ್ಧಿಗೆ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ವಿವಿಧ ಯೋಜನೆ ಗಳ ಮೂಲಕ ನೆರವು ಒದಗಿಸಲಾಗುತ್ತಿದೆ ಎಂದರು. ರಸ್ತೆ ,ನೀರಿನ ತೊಟ್ಟಿಗಳ ನಿರ್ಮಾಣದ ಜೊತೆಗೆ ಗೋಶಾಲೆ ಜಾಗಗಳಲ್ಲಿ ವನ ಸಮೃದ್ದಿ ಮಾಡಲಾಗುತ್ತಿದೆ. ನೆರಳಿನ ಗಿಡಗಳನ್ನು ನೆಡಲಾಗಿದೆ ಎಂದು ಕಾಂತರಾಜ್ ಹೇಳಿದರು.