ಬಸ್ ಪಾಸ್ ಉಳ್ಳವರಿಗೆ ನಿಮಗಿದೋ ಸಿಹಿ ಸುದ್ದಿ

0

ಹಾಸನ / ಕರ್ನಾಟಕ : 2021-22ನೇ ಸಾಲಿನಲ್ಲಿ ಪದವಿ, ವೃತ್ತಿಪರ ಕೋರ್ಸ್, ಕಾನೂನು ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಲಿ ವರ್ಷದ 2022 ಆಗಸ್ಟ್/ಸೆಪ್ಟೆಂಬರ್/ನವೆಂಬರ್ ತರಗತಿಗಳು ಹಾಗೂ ಪರೀಕ್ಷೆಗಳು ನಡೆಯುವುದರಿಂದ,

ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಅವಧಿಯನ್ನು ವಿಸ್ತರಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿರುವುದನ್ನು ಪರಿಶೀಲಿಸಲಾಗಿರುತ್ತದೆ.ಆದರಿಂದ

ಪ್ರಸ್ತುತ ಎಲ್ಲಾ ವರ್ಗದ ಪದವಿ, ವೃತ್ತಿಪರ ಕೋರ್ಸ್, ಕಾನೂನು ಹಾಗೂ ಸ್ನಾತಕೋತ್ತರ ಅಂತಿಮ ವರ್ಷದ ಪರೀಕ್ಷೆಗಳು / ತರಗತಿಗಳು ನಡೆಯುತ್ತಿದ್ದಲ್ಲಿ ಅದನ್ನು ಖಾತರಿಪಡಿಸಿಕೊಂಡು, ಒಂದು / ಎರಡು ತಿಂಗಳ ಅವಧಿಗೆ (ಜುಲೈ 2022/ಆಗಸ್ಟ್-2022) ನಿಗದಿತ ಮೊತ್ತವನ್ನು ಪಾವತಿಸಿಕೊಂಡು ರಶೀದಿ ನೀಡುವುದು, ವಿದ್ಯಾರ್ಥಿಗಳು ಕಡ್ಡಾಯವಾಗಿ ರಶೀದಿ ಮತ್ತು ಹಳೆಯ ಪಾಸ್ ಎರಡನ್ನೂ ತೋರಿಸಿ ಪ್ರಯಾಣಿಸಬಹುದಾಗಿರುತ್ತದೆ.

ಈ ಬಗ್ಗೆ ಎಲ್ಲಾ ಚಾಲಕ / ನಿರ್ವಾಹಕ ಮತ್ತು ತನಿಖಾ ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ ನೀಡಿ, ದೂರುಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಕೋರಲಾಗಿದೆ.

LEAVE A REPLY

Please enter your comment!
Please enter your name here