ರೈತರು ತಮ್ಮ ಬಳಿ ಇರುವ ರಾಗಿ ಭತ್ತವನ್ನು ಬೆಂಬಲ ಬೆಲೆ ಯೊಂದಿಗೆ ನೀಡಬಹುದಾಗಿದೆ ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ 1,868₹, ರಾಗಿ ಪ್ರತಿ ಕ್ವಿಂಟಾಲ್‍ಗೆ 3950₹ ಖರೀದಿ ದರವನ್ನು ನಿಗದಿಪಡಿಸಲಾಗಿದೆ : ಹೆಚ್ಚಿನ ಮಾಹಿತಿಗಾಗಿ 08172-1950 ಮತದಾರರ ಸಹಾಯವಾಣಿಯನ್ನು ಸಂಪರ್ಕಿಸಿ

0

ಬೆಂಬಲ ಬೆಲೆಯಡಿ ಹೆಚ್ಚುವರಿಯಾಗಿ 5 ಖರೀದಿ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ

ಹಾಸನ ಮಾ. (ಹಾಸನ್_ನ್ಯೂಸ್ !, ಜಿಲ್ಲೆಯಾದ್ಯಂತ ಈಗಾಗಲೇ ಕನಿಷ್ಟ ಬೆಂಬಲ ಬೆಲೆಯಡಿ 7 ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ರೈತರಿಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ 5 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.


ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಒಟ್ಟು ಜಿಲ್ಲೆಯಲ್ಲಿ 9 ಭತ್ತ ಖರೀದಿ ಕೇಂದ್ರಗಳು, 14 ರಾಗಿ ಖರೀದಿ ಕೇಂದ್ರಗಳು ಸೇರಿದಂತೆ ಒಟ್ಟು 23 ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಬೆಂಬಲ ಬೆಲೆ ಯೊಂದಿಗೆ ರಾಗಿ ಭತ್ತ ಖರೀದಿಗೆ ಮಾರ್ಚ್ ತಿಂಗಳ ಅಂತ್ಯದವರೆಗೂ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ರಾಗಿ ಭತ್ತವನ್ನು ಖರೀದಿಸಲು ಗರಿಷ್ಠ ಮಿತಿಯನ್ನು ತೆಗೆದುಹಾಕಲಾಗಿದೆ ರೈತರು ತಮ್ಮ ಬಳಿ ಇರುವ ರಾಗಿ ಭತ್ತವನ್ನು ಬೆಂಬಲ ಬೆಲೆ ಯೊಂದಿಗೆ ನೀಡಬಹುದಾಗಿದೆ ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ  1,868, ರಾಗಿ ಪ್ರತಿ ಕ್ವಿಂಟಾಲ್‍ಗೆ  3950 ಖರೀದಿ ದರವನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದೇಶದಾದ್ಯಂತ ಕೋವಿಡ್ 19 ಲಸಿಕಾ ಕಾರ್ಯಕ್ರಮ ಪ್ರಾರಂಭಗೊಂಡಿದ್ದು ಈಗಾಗಲೇ ಆರೋಗ್ಯ ಕಾರ್ಯಕರ್ತರು, ಮುಂಚೂಣಿಯಲ್ಲಿರುವ ಸಿಬ್ಬಂದಿಗಳು, ಪೋಲಿಸ್ ಇನ್ನಿತರ ಕಾರ್ಯಕರ್ತರಿಗೆ ಲಸಿಕೆಯನ್ನು ಯಶಸ್ವಿಯಾಗಿ ಪೂರೈಸುತ್ತಿದ್ದು, ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಮತ್ತು 45 ರಿಂದ 59  ವರ್ಷದೊಳಗಿನ ಸಹ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ಕೋವಿಡ್ ಲಸಿಕೆಯನ್ನು ಎರಡು ಹಂತದಲ್ಲಿ ನೀಡಲಾಗುವುದು ಎಂದು ತಿಳಿಸಿದರು
ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಸಾರ್ವಜನಿಕರು ಆತಂಕವಿಲ್ಲದೆ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಹೇಳಿದರು.
60 ವರ್ಷ ಮೇಲ್ಪಟ್ಟವರು ಹಾಗೂ 45ರಿಂದ 59 ವರ್ಷದೊಳಗಿನ ಸಹಅಸ್ವಸ್ಥತೆ ಇದ್ದವರು cowin.gov.in  ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಸಹಅಸ್ವಸ್ಥತೆ ಇದ್ದವರು ನೋಂದಾಯಿತ ವೈದ್ಯರಿಂದ ಪ್ರಮಾಣಪತ್ರವನ್ನು ತರುವುದು ಕಡ್ಡಾಯವಾಗಿರುತ್ತದೆ ಎಂದರು.
ಸ್ವತಃ ನೋಂದಣಿ ಮಾಡುವವರು ನೇರವಾಗಿ ಲಸಿಕೆ ನೀಡುವ ಸ್ಥಳದಲ್ಲಿ  ತಮ್ಮ ಗುರುತಿನ ಚೀಟಿ (ಆಧಾರ್ ಕಾರ್ಡ್, ಪಾನ್ ಕಾರ್ಡ್,  ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್,) ತೆಗೆದುಕೊಂಡು ಹೋಗಿ ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು  ಜಿಲ್ಲಾಧಿಕಾರಿ ತಿಳಿಸಿದರು.
ಕೋವಿಡ್ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆ ಹಾಗೂ ಎಲ್ಲ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರತಿದಿನ (ಸಾರ್ವಜನಿಕ ರಜಾ ದಿನ ಹೊರತುಪಡಿಸಿ)ನೀಡಲಾಗುವುದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರದಲ್ಲಿ ನಾಲ್ಕು ದಿನ (ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ) ಬೆಳಗ್ಗೆ 9 ಗಂಟೆಯಿಂದ ಸಂಜೆ 5  ಗಂಟೆವರೆಗೆ ನೀಡಲಾಗುತ್ತದೆ ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರವು ರೈತರಿಗೆ ಅನುಕೂಲವಾಗುವಂತೆ ವಿವಿಧ  ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಪ್ರತಿ ಯೋಜನೆಯ ಸೌಲಭ್ಯ ಪಡೆಯಲು ವಿವಿಧ ಇಲಾಖೆಗಳಲ್ಲಿ ವಿವಿಧ ದಾಖಲಾತಿಗಳನ್ನು (ವೈಯಕ್ತಿಕ ಹಾಗೂ ಭೂವಿವರ) ಒದಗಿಸಬೇಕಾಗುತ್ತಿರುತ್ತದೆ. ಈ ರೀತಿಯ ಪ್ರತಿ ಭಾರಿಯ ದಾಖಲಾತಿ ಒದಗಿಸುವುದನ್ನು ನಿವಾರಿಸಲು ಡಿ.ಪಿ.ಎ.ಆರ್, ಇ-ಆಡಳಿತ ವತಿಯಿಂದ Fruits (Farmers Registration and Unified Beneficiary Information System)  ಎಂಬ ಅಭಿವೃದ್ಧಿಪಡಿಸಿರುತ್ತಾರೆ  ಎಲ್ಲಾ  ರೈತರು ಇದರ ನೊಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
  Fruits ತಂತ್ರಾಂಶದಲ್ಲಿ ರೈತರು ತಮ್ಮ ವೈಯಕ್ತಿಕ ಮತ್ತು ಭೂ ದಾಖಲಾತಿಗಳನ್ನು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಒಂದು ಭಾರಿ ನೀಡಿ, ಆಧಾರ್ ಆಧಾರಿತ ನೋಂದಾವಣಿ ಮಾಡಿಕೊಂಡು FID/ Fruits Id ಪಡೆದರೆ ಎಲ್ಲಾ ಇಲಾಖೆಗಳಲ್ಲೂ  ಕೂಡ ಈ FID ಬಳಸಿ ವಿವಿಧ ಸವಲತ್ತು ಪಡೆಯಬಹುದಾಗಿರುತ್ತದೆ. ಇಲಾಖೆಯ ಸವಲತ್ತುಗಳನ್ನು ಪಡೆಯುವುದರೊಂದಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಆಹಾರ ಪದಾರ್ಥಗಳ ಖರೀದಿಯಲ್ಲಿ, ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭದಲ್ಲಿ ಪರಿಹಾರ ನೀಡಲು, ಬೆಳೆ ಸಮೀಕ್ಷೆಗಾಗಿ, ಬೆಳೆ ವಿಮೆ ಪರಿಹಾರ ನೀಡಲು ಸದರಿ ಮಾಹಿತಿಯನ್ನು ಬಳಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಹಾಸನ ಜಿಲ್ಲೆಯಲ್ಲಿ 2015-16ರ ಕೃಷಿ ಸಮೀಕ್ಷೆ ಪ್ರಕಾರ 5,39,301 ರೈತರು, 15.31.869 ಭೂ ಹಿಡುವಳಿ ಸರ್ವೆ ನಂಬರ್ (ಸಬ್ ಸರ್ವೆ ನಂಬರ್) ತಾಕುಗಳನ್ನು ಹೊಂದಿದ್ದು, ಪ್ರಸ್ತುತ 3,73,131 ರೈತರನ್ನು ನೊಂದಾಯಿಸಿ, 7,67,937 ಸಬ್ ಸರ್ವೆ ನಂಬರ್ ತಾಕುಗಳನ್ನು ಈಡಿuiಣs ತಂತ್ರಾಂಶದಲ್ಲಿ ಅಳವಡಿಸಲಾಗಿರುತ್ತದೆ. ಉಳಿದಂತೆ 7.63.932 ಸಬ್ ಸರ್ವೆ ನಂಬರ್‍ಗಳನ್ನು ನೊಂದಾಯಿಸಬೇಕಾಗಿರುತ್ತದೆ ಎಂದರು.
Fruits ತಂತ್ರಾಂಶದ ನೊಂದಾವಣೆಯನ್ನು ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಇತರೆ ಇಲಾಖೆಗಳಲ್ಲಿ ನಡೆಸಲಾಗುತ್ತಿದೆ. ಇದುವರೆಗೆ Fruits ತಂತ್ರಾಂಶದಲ್ಲಿ ನೊಂದಾಯಿಸದ ರೈತರು ತಮ್ಮ ಆಧಾರ್ ಕಾರ್ಡ್, ಪಾಸ್ ಪುಸ್ತಕ ಜೆರಾಕ್ಸ್, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ರೈತರು ಜಾತಿ ದೃಢೀಕರಣ ಪತ್ರ, ಫೋಟೋ, ರೇಷನ್ ಕಾರ್ಡ್, ತಾವು ಹೊಂದಿರುವ ಎಲ್ಲಾ ಜಮೀನುಗಳ ಪಹಣಿ / ಪಟ್ಯಾ ಪುಸ್ತಕದ ವಿವರಗಳೊಂದಿಗೆ ಹತ್ತಿರದ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಮೀನುಗಾರಿಕೆ, ಕಂದಾಯ ಹಾಗೂ ಇತರೆ ಕೃಷಿ ಸಂಬಂಧಿತ ಇಲಾಖೆಗಳನ್ನು ಸಂಪರ್ಕಿsಸಿ ನೋಂದಾಯಿಸಿ FID  ಈಗಾಗಲೇ ಹೊಂದಿದ ರೈತರು Fruits ಸರ್ವೆ ತಂತ್ರಾಂಶದಲ್ಲಿ ಅಳವಡಿಸಿರುವ ಸರ್ವೆ ನಂಬರ್‍ಗಳನ್ನು ಹೊರತುಪಡಿಸಿ, ಉಳಿದ  ಎಲ್ಲಾ ನಂಬರ್‍ಗಳನ್ನು ನೀಡಿ, ತಮ್ಮ FID ಗೆ ಜೋಡಣೆ   ಮಾಡುವಂತೆ  ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ

ಸಾಮೂಹಿಕ ವಿವಾಹಕ್ಕೆ ನೋಂದಣಿ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಮಾರ್ಚ್, ಎಪ್ರಿಲ್, ಮೇ, ಜೂನ್, ಹಾಗೂ ಜುಲೈ ತಿಂಗಳಲ್ಲಿ ಸಾಮೂಹಿಕ ಸರಳ ವಿವಾಹವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಹಾಸನಾಂಬ ದೇವಾಲಯದಲ್ಲಿ ವಿವಾಹವಾಗಲು ಇಚ್ಚಿಸುವವರು ಉಪವಿಭಾಗಾಧಿಕಾರಿ ಕಚೇರಿ, ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಇಚ್ಚಿಸುವವರು ಕಾರ್ಯನಿರ್ವಾಹಕ ಅಧಿಕಾರಿಗಳು ಕಚೇರಿ ಬೇಲೂರು, ಚೌಡೇಶ್ವರಿ (ಪುರದಮ್ಮ)ದೇವಾಲಯದಲ್ಲಿ ವಿವಾಹವಾಗಲು ಇಚ್ಚಿಸುವವರು  ತಹಸೀಲ್ದಾರ್ ಹಾಸನ ಕಚೇರಿ ಇಲ್ಲಿಗೆ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.     

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರು ದೇವಾಲಯದ ಕಚೇರಿಗಳಿಗೆ ಬಂದು ಅರ್ಜಿ ಪಡೆದು ದಾಖಲೆಗಳನ್ನು ನೀಡಿ ವಿವಾಹ ನಡೆಯುವ ದಿನಾಂಕಕ್ಕೆ 30 ದಿನಗಳ ಮುಂಚಿತವಾಗಿ ನೊಂದಾಯಿಸಿಕೊಳ್ಳುವುದು (ವಧು-ವರರ ಫೋಟೋ, ಜನನ ಪ್ರಮಾಣ ಪತ್ರ/ಎಸ್.ಎಸ್.ಎಲ್.ಸಿ ಅಂಕಪಟ್ಟಿ/ ಆಧಾರ್ ಕಾರ್ಡ್ ಹಾಗೂ ಪಂಚಾಯತ್/ ನಗರಸಭೆ/ ಪುರಸಭೆ/ ಅವರಿಂದ ಅವಿವಾಹಿತ ದೃಡೀಕರಣ ಪತ್ರ).

ಸಾಮೂಹಿಕ ವಿವಾಹಕ್ಕೆ ನೊಂದಾಯಿಸಿರುವ ವಧು-ವರರ ವಿವರಗಳನ್ನು ದೇವಾಲಯದ ಕಚೇರಿಯಲ್ಲಿ ವಿವಾಹ ದಿನಾಂಕಕ್ಕೆ 25 ದಿನಗಳ ಮುಂಚಿತವಾಗಿ ಪ್ರಕಟಿಸಲಾಗುವುದು. ಈ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸುವವರು ವಿವಾಹ ನಡೆಯುವ ದಿನಾಂಕಕ್ಕಿಂತ 20 ದಿನಗಳ ಮುಂಚಿತವಾಗಿ ದೇವಾಲಯದ ಕಚೇರಿಗೆ ಸಲ್ಲಿಸುವುದು. ಆ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸುವಂತಿಲ್ಲ. ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ವಧುವರರ ಪಟ್ಟಿಯನ್ನು 15 ದಿನಗಳ ಮುಂಚಿತವಾಗಿ ಪ್ರಚುರಪಡಿಸಲಾಗುವುದು.
       ವಧು-ವರರ ಎರಡು ಕಡೆಯ ತಂದೆ-ತಾಯಿಯವರು ವಿವಾಹಕ್ಕೆ ಒಪ್ಪಿ ವಿವಾಹ ದಿನದಂದು ತಂದೆ-ತಾಯಿ ಉಪಸ್ಥಿತಿ ಹಾಗೂ ಎರಡು ಕಡೆಯಿಂದ ಸಾಕ್ಷಿದಾರರು ಇದ್ದಲ್ಲಿ ಮಾತ್ರ ವಿವಾಹವನ್ನು ನಡೆಸಲಾಗುವುದು. ವಧು-ವರರ ತಂದೆ-ತಾಯಿಯವರು ನಿಧನರಾಗಿದ್ದಲ್ಲಿ ಅವರ ವಾರಸುದಾರರ ಸಂಪೂರ್ಣ ಒಪ್ಪಿಗೆ ಇದ್ದು, ವಿವಾಹ ದಿನದಂದು ಅವರು ಕಡ್ಡಾಯವಾಗಿ ಹಾಜರಿರಬೇಕು.(ನಿಧನದ ಬಗ್ಗೆ ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸುವುದು).
ವಧು-ವರರ ಕುಟುಂಬದ ಬಗ್ಗೆ ಕಡ್ಡಾಯವಾಗಿ ಪಡಿತರ ಚೀಟಿಯ (ರೇಷನ್ ಕಾರ್ಡ್) ಪ್ರತಿಯನ್ನು ಸಲ್ಲಿಸುವುದು. ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ಅಂತಹ ವಿವಾಹವಾಗುವ ವಧು-ವರರ ಬಗ್ಗೆ ಪುನರ್ ಪರಿಶೀಲಿಸುವುದು.
ಸರ್ಕಾರದ ನಿಯಮದಂತೆ ಗಂಡಿಗೆ 21 ವರ್ಷಗಳು ಹೆಣ್ಣಿಗೆ 18 ವರ್ಷಗಳು ತುಂಬಿರಬೇಕು ವಯಸ್ಸಿನ ಬಗ್ಗೆ ಸರ್ಕಾರದ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದು. ವಿವಾಹ ನಡೆಯುವ ಸ್ಥಳದಲ್ಲಿ ವಿವಾಹ ನೊಂದಣಾಧಿಕಾರಿಗಳು ಮತ್ತು ಆಯಾಯ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದು, ಕಡ್ಡಾಯವಾಗಿ ವಿವಾಹ ನೊಂದಣಿ ಮಾಡಿಸಲಾಗುವುದು.
 
ಸದರಿ ಕಾರ್ಯಕ್ರಮಕ್ಕೆ ಭಕ್ತಾಧಿಗಳಿಂದಾಗಲೀ/ ಸಾರ್ವಜನಿಕರಿಂದಾಗಲೀ ಚಂದಾ/ ದೇಣಿಗೆ ವಸೂಲಿ ಮಾಡುವುದಿಲ್ಲ. ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು-ವರರ ಮೊದಲನೇ ವಿವಾಹಕ್ಕೆ ಮಾತ್ರ ಅವಕಾಶ ಕಲ್ಪಿಸತಕ್ಕದ್ದು. ಎರಡನೇ ವಿವಾಹಕ್ಕೆ ಕಡ್ಡಾಯವಾಗಿ ಅವಕಾಶವಿರುವುದಿಲ್ಲ.
ಸಾಮೂಹಿಕ ವಿವಾಹಕ್ಕೆ ಸಲ್ಲಿಸುವ ದಾಖಲೆಗಳು ಸುಳ್ಳು ದಾಖಲೆಗಳೆಂದು ದೃಢಪಟ್ಟಲ್ಲಿ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಸಾಮೂಹಿಕ ವಿವಾಹಕ್ಕೆ ವಧು-ವರರೊಂದಿಗೆ ಎಷ್ಟು ಜನ ಬಂಧುಗಳು/ ಪೋಷಕರು ಆಗಮಿಸುತ್ತಾರೆ ಎಂಬ ಬಗ್ಗೆ ಮುಂಚಿತವಾಗಿ ವಧು-ವರರಿಂದ ಮಾಹಿತಿ ಪಡೆದು ಅವರುಗಳಿಗೆ ದೇವಾಲಯದ ವತಿಯಿಂದ ಊಟೋಪಚಾರದ ವ್ಯವಸ್ಥೆ ಮಾಡುವುದು. ವಧು-ವರರಿಗೆ ವಸ್ತ್ರಗಳಿಗಾಗಿ ಮತ್ತು ಪ್ರೋತ್ಸಾಹ ಧನವನ್ನಾಗಿ ನೀಡುವ ಮೊತ್ತವನ್ನು ಅವರವರ ಬ್ಯಾಂಕ್ ಖಾತೆಗಳಿಗೆ ವಿವಾಹದ ನಂತರ ನೇರವಾಗಿ ಜಮಾ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದು ಎಂದರು.

ಅಂತಿಮ ಮತದಾರರ ಪಟ್ಟಿ ಪ್ರಕಟ: ಭಾರತದ ಚುನಾವಣಾ ಆಯೋಗದ ಹಾಗೂ ಮುಖ್ಯ ಚುನಾವಣಾ ಅಧಿಕಾರಿಗಳು ಬೆಂಗಳೂರು ರವರ ನಿರ್ದೇಶನದನ್ವಯ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಣೆ ಮಾಡಲಾಗಿದ್ದು ನೋಂದಣಿಯಾಗಿರುವ ಮತದಾರರಿಗೆ NVSP.IN ವೆಬ್ ಸೈಟ್ ನಿಂದE-EPIC  ಕಾರ್ಡ್ ಮತದಾರರ ಗುರುತಿನ ಚೀಟಿ ಡೌನ್ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಕಲ್ಪಿಸಲಾಗಿದೆ  ಈ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ 08172-1950 ಮತದಾರರ ಸಹಾಯವಾಣಿಯನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಪುಟ್ಟ ಸ್ವಾಮಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರವಿ  ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here