ಹಾಸನ : ಕೃಷಿ ಇಲಾಖೆ ಅಧಿಕಾರಿ ಎಂದು ನಂಬಿಸಿ ರೈತರಿಗೆ ವಂಚನೆ, ಇಬ್ಬರ ಬಂಧನ

0

ಹಾಸನ / ಆಲೂರು : ನಾನು ಆಲೂರು ಕೃಷಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ರೈತರಿಗೆ ಕಡಿಮೆ ದರ , ಸಬ್ಸಿಡಿ ದರದಲ್ಲಿ ಟಾರ್ಪಲ್& ಪೈಪ್ ಸೇರಿದಂತೆ ಇತರೆಗಳನ್ನು ಸಬ್ಸಿಡಿ ದರದಲ್ಲಿ ಕೊಡುವುದಾಗಿ ಹೇಳಿ ಹಣ ಪಡೆದು

ವಂಚನೆ ಮಾಡಿದ ಇಬ್ಬರನ್ನು ಹಾಸನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ ವಿಷಯ ನಡೆದಿದೆ. , ಹಾಸನ ತಾಲ್ಲೂಕಿನ ವರ್ತಿಕೆರೆ ಗ್ರಾಮದ ವೆಂಕಟೇಶ್ ಬಿನ್ ಲೇಟ್ ಜವರೇಗೌಡ ಎಂಬುವರು ಹಾಸನ ನಗರ ಪೊಲೀಸ್ ಠಾಣೆಗೆ ಹಾಜರಾಗಿ ನನಗೆ ಹಾಸನ ನಗರದ ಸಂತೆಪೇಟೆ ಬಳಿ ಇರುವ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಛೇರಿ ಬಳಿ ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ಸಿಂಧುವಳ್ಳಿ ಗ್ರಾಮದ ಹೇಮಂತ್ ಎಂಬುವರು ಪರಿಚಯವಾಗಿ ನಾನು ಆಲೂರು ತಾಲ್ಲೂಕಿನ ಕೃಷಿ ಇಲಾಖೆ ಅಧಿಕಾರಿಯಾಗಿದ್ದು, ರೈತರಿಗೆ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ವಿತರಣೆ ಮಾಡುವ

ಟಾರ್ಪಲ್, ಪೈಫುಗಳು, ಜಟ್ಟು ಮುಂತಾದ ಸಲಕರಣೆ ಕಡಿಮೆ ಹಣದಲ್ಲಿ ಕೊಡಿಸುವುದಾಗಿ ತಮ್ಮ ಮೊಬೈಲ್ ಫೋನ್ ಪೋನ್ ಪೇ ನಂಬರ್ ಗೆ ಸುಮಾರು 20 ಸಾವಿರ ರುಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದು, ನಂತರ ಇನ್ನೂ ಹಲವು ಕೃಷಿ ಉಪಕರಣಗಳು ನನ್ನ ಬಳಿ ನಿಮ್ಮ ಪರಿಚಯದವರಿಗೆ ತಿಳಿಸಿ ಎಂದು ಹೇಳಲಾಗಿತ್ತು ಎಂದರು. , ಸ್ನೇಹಿತರೆಲ್ಲರೂ ಸೇರಿ ಆತನಿಗೆ ಪೋನ್ ಪೆ ಮುಖಾಂತರ ಹಣ ವರ್ಗಾವಣೆ ಮಾಡಲಾಗಿದ್ದು, ಹಣ ಪಡೆದು 5ರಿಂದ 6 ತಿಂಗಳಾದರು ಕೃಷಿ ಸಲಕರಣೆಗಳನ್ನು ನೀಡದ ಬಗ್ಗೆ ಗ್ರಾಮಕ್ಕೆ ಹೋಗಿ ಆ ವ್ಯಕ್ತಿ ಬಗ್ಗೆ ವಿಚಾರ ಮಾಡಲಾಗಿ

ಈ ತರಹದ ವ್ಯಕ್ತಿ ಗ್ರಾಮದಲ್ಲಿ ಇರುವುದಿಲ್ಲ ಎಂದು ತಿಳಿಸಲಾಗಿ ., ಈ ಸಂಬಂಧ ಸುಮಾರು 6 ರೈತರು ಆತನಿಗೆ ಸುಮಾರು 1 ಲಕ್ಷದ 24 ಸಾವಿರ ರುಪಾಯಿ ಹಣ ನೀಡಿದ್ದು, ನಮಗೆ ಕೃಷಿ ಸಲಕರಣೆಗಳನ್ನು ವಿತರಣೆ ಮಾಡಿರುವುದಿಲ್ಲ& ಹಣವನ್ನು ಹಿಂತಿರುಗಿಸರುವುದಿಲ್ಲ. ರೈತರಾದ ತಮಗೆ ವಂಚನೆ ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು

ಹೇಮಂತ್& ಆತನ ಸಹಚರ ಸೇರಿ ಇಬ್ಬರನ್ನೂ ಬಂದಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here