ಪ್ರಖ್ಯಾತ ರಸಗೊಬ್ಬರಗಳಾದ ಗ್ರೋಮೋರ್ ಪ್ಯಾರಂಫಾಸ್ ಮತ್ತು ಗ್ರೋಮೋರ್ 20-20-0-13 ರಸಗೊಬ್ಬರಗಳ ಗರಿಷ್ಠ ಮಾರಾಟ ಬೆಲೆಯಲ್ಲಿ ಪ್ರತಿ ಚೀಲದ ಮೇಲೆ 50 ರೂ. ಕಡಿತಗೊಳಿಸಿದೆ

0

ಹಾಸನ.ನ.11(ಹಾಸನ್_ನ್ಯೂಸ್):- ರಂಜಕಯುಕ್ತ ರಸಗೊಬ್ಬರಗಳ  ಉತ್ಪಾದನೆಯಲ್ಲಿ ದೇಶದಲ್ಲೆ ಮುಂಚೂಣಿಯಲ್ಲಿರುವ ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿಯು ತಮ್ಮ ಪ್ರಖ್ಯಾತ ರಸಗೊಬ್ಬರಗಳಾದ ಗ್ರೋಮೋರ್ ಪ್ಯಾರಂಫಾಸ್ ಮತ್ತು ಗ್ರೋಮೋರ್ 20-20-0-13 ರಸಗೊಬ್ಬರಗಳ  ಗರಿಷ್ಠ ಮಾರಾಟ ಬೆಲೆಯಲ್ಲಿ ಪ್ರತಿ ಚೀಲದ ಮೇಲೆ 50 ರೂ. ಕಡಿತಗೊಳಿಸಿದೆ(ಪ್ರತಿ ಟನ್ ಮೇಲೆ 1000 ರೂ. ಕಡಿತ).
ಕೋರಮಂಡಲ್ ಕಂಪನಿಯು ರೈತರ ಸೇವೆಯಲ್ಲಿ ಸದಾ ಮುಂದೆ ಇದ್ದು, ಇಂದಿನ ಕೊರೋನ ಕಷ್ಟಕರ ಪರಿಸ್ಥಿತಿಯನ್ನು ಅರಿತು ದೀಪಾವಳಿ ಹಬ್ಬದ ಮುಂಚಿತವಾಗಿ ಮೇಲೆ ತಿಳಿಸಿದ ರಸಗೊಬ್ಬರಗಳ ಮೇಲೆ ಪ್ರತಿ ಚೀಲಕ್ಕೆ 50 ರೂ. ಕಡಿತಗೊಳಿಸಿದ ಸುದ್ದಿಯನ್ನು ಬಿಡುಗಡೆ ಮಾಡಿದೆ.


ಇಂದು ಅರಕಲಗೂಡು ತಾಲ್ಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ನಡೆದ ರೈತರ ಸಮಾರಂಭದಲ್ಲಿ ಬೆಲೆ ಕಡಿತಗೊಂಡ ರಸಗೊಬ್ಬರಗಳ ವಿವರಗಳನ್ನು ಜಿಲ್ಲೆಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ ಕುಮಾರ್ ಮತ್ತು ರೇಷ್ಮೇ ಇಲಾಖೆಯ ಸಹಾಯಕ ನಿರ್ದೇಶಕರಾದ ಸೀತಾರಾಮನ್ ಅವರು ರೈತರಿಗೆ ಮಾಹಿತಿ ನೀಡಿದರು.
ಇದೇ ಸಮಾರಂಭದಲ್ಲಿ ಕಂಪನಿಯ ವತಿಯಿಂದ ಜೋನಲ್ ವ್ಯವಸ್ಥಾಪಕರಾದ ಪ್ರಪುಲ್ ಅಣಿಗೊಳ್, ಸೇಲ್ಸ್ ಆಫೀಸರ್ ಆದ ತಿಪ್ಪೇಸ್ವಾಮಿ ಮತ್ತು ಬೇಸಾಯ ಶಾಸ್ತ್ರಜ್ಞರಾದ ಮಧುಸೂದನ್ ಅವರು ಭಾಗವಹಿಸಿ ಮುಸುಕಿನ ಜೋಳ ಮತ್ತು ಆಲೂಗೆಡ್ಡೆ ಬೆಳೆಯಲ್ಲಿ ಸಮತೋಲನ ಪೋಷಕಾಂಶಗಳ ಅನಿವಾರ್ಯತೆ ಮತ್ತು ಸಾವಯವ ಗೊಬ್ಬರಗಳ ಉಪಯೋಗಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಸ್ಪೂರ್ತಿ ಕಾಫಿ ವತಿಯಿಂದ ಸಮಸ್ತ ಹಾಸನ ಜನತೆಗೆ ಹಾಸನಾಂಬ ಜಾತ್ರ ಮಹೋತ್ಸವ 2020 ಹಾಗೂ ದೀಪಾವಳಿ ಹಬ್ಬದ ಶುಭಾಶಯ ಗಳು 
ಪರಿಶುದ್ಧ ಮುಂಜಾನೆಗಾಗಿ ,☕ ಪರಿಶುದ್ಧ ಕಾಫಿ ⛅ , ಸ್ಪೂರ್ತಿ ಎಂಟರ್ ಪ್ರೈಸಸ್ (ಉತ್ಕೃಷ್ಟ ಗುಣಮಟ್ಟದ ಕಾಫಿ ಮತ್ತು ಟೀ ಪೌಡರ್ ತಯಾರಕರು ಹಾಗೂ ಮಾರಾಟಗಾರರು) ಸ್ಥಳ : ಸ್ಲೇಟರ್ಸ್ ಹಾಲ್ ಹತ್ತಿರ , ಬಸಟ್ಟಿಕೊಪ್ಪಲು ಮುಖ್ಯ ರಸ್ತೆ , ಹಾಸನ
ಫೋನ್ ಸಂಖ್ಯೆ ! 9483125000
SPOORTI ENTERPRISES
Coffee And Tea Powder Manufacturers
Near Slaters Hall, Basattikoppalu Main Road-Hassan ,573201,9483125000 @spoorti_kaapi  #hassan
https://instagram.com/spoortienterprises?igshid=1ge6951siu7bl Spoorti Kaapi
https://www.facebook.com/spoorti.kaapi.9
https://www.abdsmart.com/visiting-card/SE?profile=Karthik-171 .

LEAVE A REPLY

Please enter your comment!
Please enter your name here