ಸರ್ಕಾರಿ ಶಾಲೆಯಲ್ಲಿ ಓದಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಹನ್ನೆರಡು ಜನ ಹೆಣ್ಣು ಮಕ್ಕಳಿಗೆ ತಲಾ ಹದಿನೈದು ಸಾವಿರ ರೂ

0

ಕ್ರೇಡಿಟ್ ಆಕ್ಸಿಸ್ ಗ್ರಾಮಿಣ್ ಲಿಮಿಟೆಡ್ -ಗ್ರಾಮೀಣಕೂಟ ಸಂಸ್ಥೆ ಯ ಸಿ ಎಸ್ ಆರ್ ವಿಭಾಗ ಕ್ರೇಡಿಟ್ ಆಕ್ಸಿಸ್ ಇಂಡಿಯಾ ಫೌಂಡೇಶನ್ ರವರ ಗ್ರಾಮೀಣ ವಿದ್ಯಾ ವಿದ್ಯಾರ್ಥಿ ವೇತನ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಹನ್ನೆರಡು ಜನ ಹೆಣ್ಣು ಮಕ್ಕಳಿಗೆ ತಲಾ ಹದಿನೈದು ಸಾವಿರ ರೂ ಗಳನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಯುತ ಹರಿರಾಂ ಶಂಕರ್ ರವರ ನೇತೃತ್ವದಲ್ಲಿ ನೀಡಲಾಯಿತು.


ಕ್ರೇಡಿಟ್ ಆಕ್ಸಿಸ್ ಗ್ರಾಮಿಣ್ ಲಿಮಿಟೆಡ್ -ಗ್ರಾಮೀಣಕೂಟ ಸಂಸ್ಥೆ ಯ ಡಿವಿಷನಲ್ ಮ್ಯಾನೇಜರ್ ಲೋಕೇಶ್ ಸಿ ವಿ ,ಏರಿಯಾ ಮ್ಯಾನೇಜರ್ ಪ್ರದೀಪ್ ಕುಮಾರ್ ಬಿ ಎಸ್ ,ಮತ್ತು ಪಿ ಅಂಡ್ ಎಂ ನಟರಾಜು ಎಂ ಎಸ್ ಬ್ರಾಂಚ್ ಮ್ಯಾನೇಜರ್ ಗಳಾದ ಕುಮಾರಸ್ವಾಮಿ ,ಕೀರ್ತಿಕುಮಾರ್ ಉಪಸ್ಥಿತರಿದ್ದರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಯುತ ಹರಿರಾಂ ಶಂಕರ್ ರವರು ಮಾತನಾಡಿ ಗ್ರಾಮೀಣಕೂಟ ಸಂಸ್ಥೆ ಯ ಕಾರ್ಯಕ್ರಮಗಳನ್ನು ಶ್ಲಾಘಿಸಿ.ವಿಧ್ಯಾರ್ಥಿ ಗಳಿಗೆ ಪ್ರೊತ್ಸಹ ನೀಡಿ ಪೋಲಿಸ್ ಇಲಾಖೆಯ ಹುದ್ದೆಗಳಿಗೆ ಸೇರುವಂತೆ ಉರಿದುಂಬಿಸಿದರು.ಕ್ರೇಡಿಟ್ ಆಕ್ಸಿಸ್ ಗ್ರಾಮಿಣ್ ಲಿಮಿಟೆಡ್ -ಗ್ರಾಮೀಣಕೂಟ ಸಂಸ್ಥೆ ಡಿವಿಷನಲ್ ಮ್ಯಾನೇಜರ್ ಲೋಕೇಶ್ ಸಿ ವಿ ಮಾತನಾಡಿ ಸಂಸ್ಥೆಯ ಸಾಮಾಜಿಕ ಅಬಿವೃದ್ದಿ ಕಾರ್ಯಕ್ರಮಗಳನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here