ಸಕಲೇಶಪುರದ ತಂಬಲಗೇರಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಕಾಫಿ, ಬಾಳೆ ಬೆಳೆ ನಾಶ , ಮಠಸಾಗರದಲ್ಲಿ ಬೈಕ್ ಜಖಂ

0

ಕಾಡಾನೆ ದಾಳಿ: ಆಪಾರ ಬೆಳೆ ನಾಷ

ಸಕಲೇಶಪುರ: ಕಾಡಾನೆ ದಾಳಿಯಿಂದ ರೈತ ರೊಬ್ಬರ ಕಾಫಿ ಹಾಗೂ ಬಾಳೆ ಬೆಳೆ ನಾಶವಾಗಿ ರುವ ಘಟನೆ ತಾಲೂಕಿನ ದನಗೂರು ಗ್ರಾಪಂ ವ್ಯಾಪ್ತಿಯ ತಂಬಲಗೇರಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ತಂಬಲಗೇರಿ ಗ್ರಾಮದಲ್ಲಿ ಕಾಡಾನೆಯೊಂದು ನಡೆಸಿದ ದಾಳಿಗೆ ಗ್ರಾಮದ ಪಾಪಣ್ಣ ಎಂಬುವರು ಕಣದಲ್ಲಿ ಒಣಗಿಸಿ ಚೀಲದಲ್ಲಿ ತುಂಬಿಟ್ಟಿದ್ದ ಅಪಾರ ಪ್ರಮಾಣದ ಕಾಫಿ, ಸುಮಾರು 50 ಕಾಫಿ ಗಿಡಗಳು ಹಾಗೂ ಅಪಾರ ಪ್ರಮಾಣದ ಬಾಳೆ ಗಿಡ ನಾಶಪಡಿಸಿದೆ. ಇದರಿಂದ ಅಪಾರ ನಷ್ಟವಾಗಿದೆ. ಶಾಶ್ವತ ಪರಿಹಾರ ನೀಡಲು ವಿಫಲ:

ಕಳೆದ 15 ವರ್ಷಗಳಿಂದ ಕಾಡಾನೆಗಳ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸುತ್ತಿದ್ದರೂ ಸರ್ಕಾರ ಶಾಶ್ವತ ಪರಿಹಾರ ನೀಡಲು ವಿಫಲವಾಗಿದೆ. ಯಾರು ಇತ್ತ ಗಮನಹರಿಸುತ್ತಿಲ್ಲ. ಹಗಲಿಡಿ ಕಷ್ಟಪಟ್ಟು ದುಡಿಯುವ ರೈತ ರಾತ್ರಿ ಮಲಗಿ ಬೆಳಗ್ಗೆ ಬರುವಷ್ಟರಲ್ಲಿ ಜಮೀನುಗಳು ಕಾಡಾನೆಗಳಿಂದ ಹಾನಿಗೀಡಾಗುತ್ತಿರುವುದು ರೈತರಲ್ಲಿ ಆತಂಕ ತಂದಿದೆ. ರೈತರಿಗೆ ಕನಿಷ್ಠ ಸಾಂತ್ವನ ಹಾಗೂ ಪರಿಹಾರ ನೀಡುವಲ್ಲಿ ತಾಲೂಕು ಆಡಳಿತ ವಿಫಲ ಗೊಂಡಿದ್ದು, ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಪಾಪಣ್ಣ ಗೋವಿಂದ್ ಆರ್ ಗೌಡ ಒತ್ತಾಯಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದ ಗ್ರಾಮದ ಎಂ.ಜೆ. ಜಾನ್ ಎಂಬುವವರು ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ ತುಳಿದು ಜಖಂಗೊಳಿಸಿದೆ. ಅಲ್ಲದೇ ಅಡಿಕೆ, ಕಾಫಿ ಹಾಗೂ ಇನ್ನಿತರ ಬೆಳೆ ನಾಶವಾದ ಭಾನುವಾರ ರಾತ್ರಿ ನಡೆದಿದೆ. , ಗ್ರಾಮದ ರೋಜಿ಼ಬಾಯಿ, ದಾವಿದ್‌,  ಫ್ರಾನ್ಸಿಸ್, ಸಿರಿಲ್‌ ಡಿ’ಕುನ್ನ, ಜೋಸೆಫ್ ಅವರ ಅಡಿಕೆ, ಕಾಫಿ ಬೆಳೆಯನ್ನು ನಾಶ ಮಾಡಿದ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ..


forrestnewshassan hassan hassannews sakleshpur

LEAVE A REPLY

Please enter your comment!
Please enter your name here