ಶಿವರಾತ್ರಿ ಪ್ರಯುಕ್ತ ಭಕ್ತಾದಿಗಳ ಪಾದಯಾತ್ರೆ ಚೀಲಗಟ್ಟಳೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಸುಸ್ತಾದ ಅರಣ್ಯ ಇಲಾಖೆ

0

ಸಕಲೇಶಪುರ ತಾಲ್ಲೂಕು ಎಸಳೂರು ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬಿಸಿಲೆ ಗ್ರಾಮದಿಂದ ಸುಬ್ರಹ್ಮಣ್ಯ ವರೆಗೆ ಪಶ್ಚಿಮಘಟ್ಟಗಳ ಮಧ್ಯದಲ್ಲಿ ಬಿಸಿಲೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗೆ ಶಿವರಾತ್ರಿ ಪ್ರಯುಕ್ತ ಭಕ್ತಾದಿಗಳು ಪಾದಯಾತ್ರೆಯನ್ನು ಕೈಗೊಂಡಿದ್ದು ಈ ಸಮಯದಲ್ಲಿ ಎಲ್ಲೆಂದರಲ್ಲಿ ನೀರಿನ ಬಾಟಲ್ ಗಳು ಮಜ್ಜಿಗೆ ಪ್ಯಾಕೆಟ್ ,ಜ್ಯೂಸ್ ಬಾಟಲ್ ಮತ್ತು ಊಟದ ತಟ್ಟೆಗಳನ್ನು ಎಸೆದಿದ್ದು ಎಸಳೂರು ಅರಣ್ಯ ವಲಯದ ವತಿಯಿಂದ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಎಸಳೂರು ವಲಯದ 40 ಸಿಬ್ಬಂದಿಗಳು ಬಿಸಿಲೆ ಗ್ರಾಮದ ಅರಣ್ಯ ಇಲಾಖೆ ತನಿಖಾ ಠಾಣೆ ಯಿಂದ ಹೊರಟು ಸುಬ್ರಹ್ಮಣ್ಯದ ಬಳಿಯಿರುವ ಹಾಸನದ ಗಡಿಯವರೆಗೆ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದು ಸುಮಾರು ಇನ್ನೂರು ಚೀಲಕ್ಕೂ ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಕಸ ವಿಲೇವಾರಿ ಘಟಕಕ್ಕೆ ರವಾನೆ ಮಾಡಲಾಗಿರುತ್ತದೆ.

ಬಿಸಿಲೆ ಘಾಟ್ ರಕ್ಷಿತಾರಣ್ಯ ಪ್ರದೇಶವು ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿದ್ದು ರಾಜ್ಯ ಹೆದ್ದಾರಿಯು ಬಿಸಿಲೆಘಾಟ್ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿದ್ದು ಪ್ಲಾಸ್ಟಿಕ್ ತ್ಯಾಜ್ಯವು ವನ್ಯಜೀವಿಗಳ ಆಶ್ರಯ ತಾಣಕ್ಕೆ ಧಕ್ಕೆ ಉಂಟು ಮಾಡುವುದಲ್ಲದೆ ವನ್ಯಜೀವಿಗಳ ಪ್ರಾಣಕ್ಕೂ ಸಂಚಕಾರ ತರುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ವತಿಯಿಂದ ನಿರಂತರವಾಗಿ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.ಇದಕ್ಕಾಗಿ ನಾವೆಲ್ಲಾ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳನ್ನು ಅಭಿನಂದಿಸೋಣ…

LEAVE A REPLY

Please enter your comment!
Please enter your name here