ಪವರ್ ಇಂಡಿಯನ್ ಅಕಾಡೆಮಿಯಿಂದ ವಿಭಿನ್ನ ರೀತಿಯ ಗಾಂಧಿ ಜಯಂತಿ ಆಚರಣೆ
ಪವರ್ ಇಂಡಿಯನ್ ಅಕಾಡೆಮಿ ಹಾಸನ ಇದರ ವತಿಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು . ಹಾಸನ ನಗರದ ಪ್ರಖ್ಯಾತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಇದಾಗಿದ್ದು (PC AND PSI ಅಗ್ನಿಪಥ್” ಬ್ಯಾಂಕಿಂಗ್ FDA AND SDA ) ಮುಂತಾದ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿದೆ. ಕಾರ್ಯಕ್ರಮದಲ್ಲಿ ಅಕಾಡೆಮಿ ನಿರ್ದೇಶಕರಾದ ಬಿ.ಎಸ್ ರಮೇಶ್ ರವರು ಮುಖ್ಯ ಅತಿಥಿಗಳಾದ ಲಿಖಿತಾ ಮೋಹನ್ ರವರು (2018 ಬ್ಯಾಚ್ KAS ಅಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ ) . ಪ್ರಭಾಕರ ಮಾಜಿ ಸೈನಿಕ ಸಂಘದ ಮಾಜಿ ಅಧ್ಯಕ್ಷರು ಹಾಸನ , ಅಕಾಡೆಮಿಯ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಎಂ.ಜೆ, ಲೋಕೇಶ್, ಹಾಗೂ ಮಾಜಿ ಸೈನಿಕರಾದ ಅಗ್ನಿಪಥ್ ಮತ್ತು ಪೊಲೀಸ್ ದೈಹಿಕ ಪರೀಕ್ಷೆ ತರಬೇತಿ ದಾರರಾದ ಆನಂದ್ ( EX ಹವಲ್ದಾರ್ ) ಮತ್ತು ರಂಗೇಗೌಡರು, ಪ್ರದೀಪ್ ನಾಗರ್ ರವರು ಮೋಹನ್ ರವರು ಸುರೇಶ್ ರವರು ಮತ್ತು ಅಕಾಡೆಮಿಯ ಮುಂತಾದವರು ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಲಿಖಿತಾ ಮೋಹನ್ ರವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿ ಯಾಗಲು ನಿರಂತರ ಪ್ರಯತ್ನ ಕಠಿಣ ಪರಿಶ್ರಮ ತಾಳ್ಮೆ ಪ್ರಮುಖ ವಾಗಿರುತ್ತದೆ ಎಂದು ಹೇಳಿದರು. ಮಾತನಾಡುತ್ತಾ ಪವರ್ ಇಂಡಿಯನ್ ಅಕಾಡೆಮಿಯು ಹಾಸನ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುನ್ನತ ತರಬೇತಿಯನ್ನು ನೀಡುತ್ತಿದ್ದು ಸ್ಪರ್ಧಾರ್ಥಿಗಳಿಗೆ ಆಶಾಕಿರಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿಯ ಪ್ರಯುಕ್ತ ಗಾಂಧಿ ತತ್ವ, ಮತ್ತು ಶಾಸ್ತ್ರೀ ಸಿದ್ಧಂತಾದ ಸಂದೇಶ ಸಾರುವ ಉದ್ದೇಶದಿಂದ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಅಕಾಡೆಮಿಯ 120 ಕ್ಕೂ ಹೆಚ್ಚಿನ ಸ್ಪರ್ಧಾರ್ಥಿಗಳು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು . ಮ್ಯಾರಥಾನ್ ನಗರದ ಅರಳಿಕಟ್ಟೆ ವೃತ್ತದಿಂದ ಎಂ ಜಿ ರಸ್ತೆ, ಆರ್ ಸಿ ರಸ್ತೆ ಮುಖಾಂತರ ಸಾಲಗಾಮೆ ರಸ್ತೆ ದಾಟಿ NCC ಕಛೇರಿಗೆ ಮುಕ್ತಾಯ ಗೊಂಡಿತು .
ಪವರ್ ಇಂಡಿಯನ್ ಅಕಾಡೆಮಿ ಜೀವ ಸಂಜೀವಿನಿ ರಕ್ತ ಕೇಂದ್ರ ಹಾಸನ ಇದರ ಸಹಭಾಗಿತ್ವದಲ್ಲಿ ರಕ್ತ ದಾನ ಶಿಬಿರ ಗಾಂಧೀಜಿ ಮತ್ತು ಶಾಸ್ತ್ರೀಜಿ ಅಂಗವಾಗಿ ಪವರ್ ಇಂಡಿಯನ್ ಅಕಾಡೆಮಿಯ ಜೀವ ಸಂಜೀವಿನಿ ರಕ್ತ ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಸ್ಪರ್ಧಾರ್ಥಿಗಳು ಸ್ವಇಚ್ಛೆಯಿಂದ ರಕ್ತದಾನ ಮಾಡಿದರು. ಅಕಾಡೆಮಿಯ ನಿರ್ದೇಶಕರಾದ ಬಿ. ಎಸ್ ರಮೇಶ್ ರವರು ಸೇರಿದಂತೆ 20 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.