ಇನ್ನೂ ಉದ್ಘಾಟನೆ ಆಗದ ನೂತನ ಪ್ರಾಥಮಿಕ ಪಶು ಚಿಕತ್ಸಾ ಕೇಂದ್ರಕ್ಕೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

0

ಹಾಸನ/ಅರಸೀಕೆರೆ : ಇನ್ನೂ ಉದ್ಘಾಟನೆ ಆಗದ ನೂತನ ಪ್ರಾಥಮಿಕ ಪಶು ಚಿಕತ್ಸಾ ಕೇಂದ್ರ. 22 sept 2022 ರ ರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ಎಲ್ಲಾ ಕಿಟಕಿ ಗಾಜುಗಳನ್ನು ಒಡೆದ್ದಿದ್ದಾರೆ. 23 sept 2022 ರಂದು ಪೋಲಿಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದ್ದು ಈ ವರೆಗೆ ಸ್ಥಳ ಪರಿಶೀಲನೆ ಆಗಲಿ ಪ್ರಾಥಮಿಕ ತನಿಖೆ ಆಗಲಿ ಆಗಿಲ್ಲ ಎಂದು ಸ್ಥಳೀಯರು ದೂರಿದ್ದು .

ಸಾರ್ವಜನಿಕ ಆಸ್ತಿ ಹಾನಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಬೇಕು. ಸಂಭಂದಪಟ್ಟ ಪಶು ವೈದ್ಯಾಧಿಕಾರಿಗಳು ಸಹ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮ ಗ್ರಾಮದಲ್ಲಿ ಕೆಲವು ಮಧ್ಯ ವ್ಯಸನಿಗಳಿಂದ ಮನೆಗಳ ಮೇಲೆ ಈ ರೀತಿ ಕಲ್ಲು ತೂರಾಟ ನಡೆಯುವುದು ಸಾಮಾನ್ಯವಾಗಿದೆ. ಕಳೆದ

ಎರಡು ತಿಂಗಳ ಹಿಂದೆ ಪ್ರಸ್ತುತ ನಡೆಯುತ್ತಿರುವ ಪಶು ಚಿಕಿತ್ಸಾ ಕೇಂದ್ರದ ಹಳೆಯ ಕಟ್ಟಡದಲ್ಲಿ ಬೀಗ ಮುರಿದು ಕಳ್ಳತನ ಕೂಡಾ ಆಗಿದೆ. ದಯಮಾಡಿ ಸಂಭಂದಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಈ ರೀತಿ ಅಹಿತಕರ ಘಟನೆಗಳು ನಡೆಯದಂತೆ ತಪ್ಪಿಸಬೇಕಿದೆ…

ಹಾಸನ ಜಿಲ್ಲೆ
ಅರಸೀಕೆರೆ ತಾಲ್ಲೂಕು
ಬಾಣಾವರ ಹೋಬಳಿ
ಬೇವಿನಹಳ್ಳಿ ಗ್ರಾಮ

LEAVE A REPLY

Please enter your comment!
Please enter your name here