ಗಣೇಶ ಹಬ್ಬದ ಹಿನ್ನೆಲೆ ಯಶವಂತಪುರ ಜಂಕ್ಷನ್ – ಮುರುಡೇಶ್ವರ ನಡುವೆ ಒಂದು ಟ್ರಿಪ್ ವಿಶೇಷ ರೈಲು ಓಡಾಟ ನಡೆಸಲಿದೆ. , ಬೆಂಗಳೂರಿನಿಂದ ಕರಾವಳಿಗೆ ತೆರಳುವವರ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಬೇಡಿಕೆ ಹಿನ್ನೆಲೆ ಯಶವಂತಪುರ – ಮುರುಡೇಶ್ವರ ವಿಶೇಷ ಎಕ್ಸ್‌ಪ್ರೆಸ್ ಒಂದು ಟ್ರಿಪ್ ಸಂಚರಿಸಲಿದೆ. ಸೆ.15 ರ ರಾತ್ರಿ 11.55 ಕ್ಕೆ ಯಶವಂತಪುರ ಜಂಕ್ಷನ್‌ನಿಂದ ಹೊರಟು ಮರು ದಿನ ಮಧಾಹ್ನ 12.55ಕ್ಕೆ ಮರುಡೇಶ್ವರ ತಲುಪಲಿದೆ. , ಸೆ.16ರ ಮಧ್ಯಾಹ್ನ 1.30ಕ್ಕೆ ಹೊರಟು ಮರುದಿನ ಬೆಳಗಿನ ಜಾವ 4ಕ್ಕೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.
ಎಲ್ಲೆಲ್ಲಿ ನಿಲುಗಡೆ ಗೊತ್ತೆ??:
ಮಾರ್ಗದಲ್ಲಿ ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚೆನ್ನರಾಯ ಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು ಮೂಕಾಂಬಿಕಾ ರಸ್ತೆ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಯಶವಂತಪುರ ಮುರುಡೇಶ್ವರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 06587, ಮುರುಡೇಶ್ವರ ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ -06588 ಈ ರೈಲುಗಳ ಬುಕ್ಕಿಂಗ್‌ಗೆ ಸಮೀಪದ ರೈಲು ನಿಲ್ದಾಣ ಅಥವಾ ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.