ಹಾವಿನ ಹುತ್ತಕ್ಕೆ ಹಾಲು ಹಾಕಬೇಡಿ: ಜವೇನಹಳ್ಳಿ ಮಠದ ಸ್ವಾಮೀಜಿ
ಹಾಸನ: ದೇವರು ಎಂದು ಮನುಷ್ಯನ ಮೇಲೆ ಬರುವುದಿಲ್ಲ. ಬಂದರೇ ಅದು ದೇವರೆ ಅಲ್ಲ. ವೈಜ್ಞಾನಿಕವಾಗಿ ಯೋಚಿಸಿ ಹಾವಿನ ಹುತ್ತಕ್ಕೆ ಹಾಲು ಹಾಕುವ ಬದಲು ಬಡವನಿಗೆ ಕುಡಿಯಲು ಕೊಟ್ಟರೆ ಉತ್ತಮ ಎಂದು ಶ್ರೀ ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಆರ್.ಸಿ. ರಸ್ತೆ ಬಳಿ ಇರುವ ಬಾಲಕಿಯರ ವಿಭಜಿತ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಜಿಲ್ಲಾ ಸಂಚಲನ ಸಮಿತಿಯಿಂದ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು,
ಮನೆಯಲ್ಲಿ ಕಷ್ಟ ಬಂದರೇ ಸಾಕು ಮೈಮೇಲೆ ದೇವರು ಬರುವ ಕಡೆ ಕಳುಹಿಸುತ್ತಾರೆ. ಇನ್ನು ಹಳ್ಳಿ ಭಾಗಗಳಲ್ಲಿ ಪ್ರಸ್ತುತ ಬಹಳಷ್ಟು ದೇವರುಗಳು ಬರಲು ಪ್ರಾರಂಭಿಸಿದೆ. ನಿಜವಾಗಲು ದೇವರು ಮನುಷ್ಯನ ಮೇಲೆ ಬರುವುದಿಲ್ಲ. ಬಂದರೇ ಅದು ದೇವರೆ ಅಲ್ಲ. ದೇವರ ಕಲ್ಪನೆಯೇ ಬೇರೆ. ದೇವರು ಎಂದರೇ ಅವನು ಅಲ್ಲ. ಅವಳು ಅಲ್ಲ. ಅದೊಂದು ಮಹಾನ್ ಚೇತನ ಶಕ್ತಿ. ಇಷ್ಟೊಂದು ವಿದ್ಯಾವಂತರು, ಬಂದ್ದಿವಂತರಾಗಿದ್ದು, ಅನೇಕ ಜನ ಇಂತಹ ಮೂಡ ನಂಬಿಕೆಗೆ ಮಾರು ಹೋಗಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.
ಮನುಷ್ಯ ಎಂದ ಮೇಲೆ ಕಷ್ಟಗಳು ಬರುವುದು ಸಹಜ ಬಂದೆ ಬರುತ್ತದೆ. ಮಕ್ಕಳು ಸರಿಯಾಗಿ ಓದುವುದಿಲ್ಲ, ಹೇಳಿದ ಮಾತು ಕೇಳುವುದಿಲ್ಲ. ಇನ್ನು ಮೊಬೈಲ್ ಬಂದ ಮೇಲೆ ಎಲ್ಲಾ ಒಳ್ಳೆ ಗುಣಗಳನ್ನೆ ಮರೆತು ಬಿಟ್ಟಿದ್ದೀರಾ! ಓದುವ ಮಕ್ಕಳು ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿದರೇ ಉತ್ತಮ. ಮಾಹಿತಿ ತಂತ್ರಜ್ಞಾನ ಬೇಕು ಅಷ್ಟಕ್ಕೆ ಮಾತ್ರ ಸೀಮಿತ ಮಾಡಿದರೇ ಉ೭ತ್ತಮ ಎಂದು ಕಿವಿಮಾತು ಹೇಳಿದರು. ಕಷ್ಟ ಬಂದಾಗ ಶಾಸ್ತ್ರಿಗಳತ್ತ ಶಾಸ್ತ್ರ ಕೇಳುವುದು ಹೆಚ್ಚಾಗಿದ್ದು, ಬಹಳಷ್ಟು ಮೌಢ್ಯತೆ.
ಬೆಳಗಾಯಿತೆಂದರೇ ಅನೇಕರು ಟಿವಿ ಮುಂದೆ ಜೋತಿಷ್ಯ ಕೇಳಲು ಏಕ ಚಿತ್ತರಾಗಿ ಕುಳಿತಿರುತ್ತಾರೆ. ಕಲಿಗೆ ಹಾಕುವ ಅದೆ ಹಾಲನ್ನು ಬಡ ಜೀವಿಗೆ ಹಾಕು ಎಂದು ಅಂದೆ ಬಸವಣ್ಣನವರು ವಚನದಲ್ಲಿ ಹೇಳಿದ್ದಾರೆ. ನಾಗರ ಹಾವುಗಳು ಹಾಲು ಕುಡಿಯುವುದಿಲ್ಲ. ಕಪ್ಪೆಗಳ, ಇಲಿಗಳ ನುಂಗುತ್ತದೆ. ವೈಜ್ಞಾನಿಕವಾಗಿ ನೋಡಿದರೇ ನಮ್ಮ ಸಮಾಜದಲ್ಲಿ ಅಂದಕಾರ, ಮೌಢ್ಯತೆ, ಅನಿಷ್ಟ ಪದ್ಧತಿಗಳು ತಲೆ ಎದ್ದಿವೆ ಎಂದು ಆತಂಕವ್ಯಕ್ತಪಡಿಸಿದರು. ಹುತ್ತಕ್ಕೆ ಹಾಕುವ ಅದೆ ಹಾಲನ್ನು ಬಡ ಜೀವಿಗೆ ನೀಡಿದರೇ ನಿಮಗೆ ಪುಣ್ಯ ಲಬಿಸುವುದರ ಜೊತೆಗೆ ಒಬ್ಬನ ಹೊಟ್ಟೆ ತುಂಬುತ್ತದೆ ಎಂದು ಇದೆ ವೇಳೆ ತಮ್ಮ ಆಶೀರ್ವಚನದಲ್ಲಿ ಹಿತಾನುಡಿ ತಿಳಿಸಿದರು.
ಇದೆ ವೇಳೆ ಕಾರ್ಯಕ್ರಮದಲ್ಲಿ ಎಂ.ಬಿ.ವಿ. ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್, ಬಾಲಕಿಯರ ವಿಭಜಿತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಪಿ. ಸುರೇಶ್, ಮಾನವ ಬಂಧುತ್ವ ವೇದಿಕೆ ಕರ್ನಾಟಕ ಜಿಲ್ಲಾ ಸಂಚಲನ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ರಂಗಸ್ವಾಮಿ, ಕೆ.ಪಿ. ಶಿವಕುಮಾರ್, ಉಪನ್ಯಾಸಕರಾದ ಶೋಭರಾಣಿ, ಎಂ.ಆರ್. ಸಹದೇವ್, ರಾಮಕೃಷ್ಣಯ್ಯ, ಚಂದ್ರಮೌಳಿ, ಪವಿತ್ರ, ಕೆ.ಆರ್. ಮಾಲತಿ, ಮಹದೇಶ್ವರ, ಸಿ. ಭಾರತೀ, ಸಣ್ಣೇಗೌಡ, ಕುಸುಮ, ಹೆಚ್.ಬಿ. ವೇಣುಗೋಪಾಲ್, ಎಸ್.ಎನ್. ರವಿ, ಹೆಚ್.ಬಿ. ಗಾಯಿತ್ರಿ, ಜಿ. ಜ್ಯೋತಿ, ನಾಗಮಣಿ, ಹೆಚ್. ಉಮಾ ಇತರರು ಉಪಸ್ಥಿತರಿದ್ದರು.