ಹಾಸನ : ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಪಟ್ಟಣ ಸಮೀಪದ YDD ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ವೋದಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಪಟ್ಟಣದ ಉಮೆಯಾನಿ (30) ಎಂಬ ಮಹಿಳೆ ಕಳೆದ ಮಂಗಳವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಸರ್ಕಾರ ಅತಿಥಿ ಉಪನ್ಯಾಸಕರ ಆಯ್ಕೆಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಕರೆದಿದ್ದು, ಇವರು ಸಹ ಅರ್ಜಿ ಸಲ್ಲಿಸಿದ್ದರಂತೆ. ಆದರೆ, ಇವರು ಆಯ್ಕೆಯಾಗಿರಲಿಲ್ಲ / ವೈಯಕ್ತಿಕ ಕಾರಣವೋ ?? ಗೊತ್ತಿಲ್ಲ ಎಂಬ ಜಿಗುಪ್ಸೆಗೆ ಮನನೊಂದು ಚಿಕ್ಕಮಗಳೂರಿನ ತಾಯಿ ನಿವಾಸದಲ್ಲಿ ನೇಣಿಗೆ ಶರಣಾಗಿ ಬಾಳಿ ಬದುಕಬೇಕಾದ ಜೀವ ಇನ್ನಿಲ್ಲವಾಗಿದೆ . ಅಂತ್ಯಕ್ರಿಯೆ ಬುಧವಾರ ನಡೆದಿದ್ದು.
ಈ ಮೂಲಕ ಹಾಸನ ಜನತೆಯಲ್ಲಿ ಮನವಿ ಮಾಡುವುದೇನೆಂದರೆ ಈ ಪ್ರಪಂಚದಲ್ಲಿ ಅಂದು ಕೊಂಡ ವಿದ್ಯಾಭ್ಯಾಸ / ಉದ್ಯೋಗ ಸಿಗದೆಯು ಜೀವನದಲ್ಲಿ ಮೇಲೆ ಬಂದಿರುತ್ತಾರೆ ಹಾಗೂ ಧೈರ್ಯಗೆಡದೆ ತಾಳ್ಮೆಯಿಂದ ನಿಮ್ಮ ಜೀವನ ರೂಪಿಸಿಕೊಳ್ಳಿ ., ಯಾವುದು ಸುಲಭವಲ್ಲದಿದ್ದರೂ ನಿರಂತರ ಪ್ರಯತ್ನ ನಿಮ್ಮನ್ನು ಒಂದಿಲ್ಲೊಂದು ಸ್ಥಾನ ಗಿಟ್ಟಿಸಿಕೊಡಲಿದೆ.