ಇತ್ತೀಚೆಗೆ ಬಿಡುಗಡೆಯಾಗಿ ಬಂದಿದ್ದ ಸುನೀತಾ ಪತಿ ಕೊಲೆ ಕೇಸ್ ನಲ್ಲಿ ಮತ್ತೆ ಅಂದರ್

0

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್ ಬಳಿಯಲ್ಲಿ ಕಳೆದ ತಿಂಗಳು ಜನವರಿ 31ರಂದು ಯಾರೋ ಅಪರಿಚಿತರು ಕೊಲೆ ಮಾಡಿ ಹೋಗಿದ್ದು ಅಪಘಾತ ಎಂಬಂತೆ ಬಿಂಬಿಸಿದ್ದ ಘಟನೆಗೆ ಅಂದೇ ಕೊಲೆಯಾದ ವ್ಯಕ್ತಿಯ ಪತ್ನಿಯ ಮೇಲಿದ್ದ ಅನುಮಾನ ನಿಜವಾಯಿತು ., ನಡೆದಿದ್ದಂತ ಕೊಲೆ ಪ್ರಕರಣವನ್ನು ನುಗ್ಗೇಹಳ್ಳಿ ಪೊಲೀಸರು ಹತ್ಯೆಯ ಹಿಂದಿನ ರಹಸ್ಯವನ್ನು ಬೆಂಬಿಡದೆ ಹುಡುಕಿದ್ದಾರೆ., ತನ್ನ ಮಕ್ಕಳನ್ನು ಶಾಲೆಯಿಂದ ಕರೆತರಲು ತೆರಳಿದ್ದಂತ ಆನಂದ್ ಕುಮಾರ್ (42) ಎಂಬಾತನನ್ನು, ಕಾವಲು ಹೊಸೂರು ಗೇಟ್ ಬಳಿಯಲ್ಲಿ ಇಬ್ಬರು ಅಪರಿಚಿತರು ಅಡ್ಡಗಟ್ಟಿ, ದೊಣ್ಣೆಯಿಂದ ಹತ್ಯೆಗೈದಿದ್ದರು. ಈ ಪ್ರಕರಣ ಕುರಿತಂತೆ ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಶ್ರೀನಿವಾಸಗೌಡ(SP) ವಿಶೇಷ ತಂಡವನ್ನು ತನಿಖೆಗೆ ನೇಮಿಸಿ ಕೊಲೆಗಾರರ ಹುಡುಕಲು ಯೋಜನೆ ರೂಪಿಸಿದ್ದರು ., ಆ ತಂಡವು ವಿವಿಧ ಹಂತಗಳಲ್ಲಿ ವಿಚಾರಣೆ ನಡೆಸಿದರು ಸುತ್ತಿ ಬಳಸಿ ಕೊಲೆಯಾದ ಪತ್ನಿ ಯ ಮೇಲೆ ಅನುಮಾನ ಕಾಡತೊಡಗಿತು , ಆನಂದ್ ಕುಮಾರ್ ಪತ್ನಿ, ಸುನೀತಾಳ ಬಗ್ಗೆಯೇ ಅನುಮಾನ ಮೂಡಲು ಈ ಹಿಂದಿನ ಆಕೆಯ ಹಿಸ್ಟರಿ ಅಲ್ಲದೆ ಕೆಲವು ಸಾಕ್ಷಿ ಪ್ರಕರಣ ಭೇದಿಸಲು ಸಹಕಾರಿಯಾದವು. ಆಕೆಯನ್ನು ವಿಚಾರಣೆಗೆ ಒಳಪಡಿಸಿದರೂ ತಾನು ಪತಿಯ ಕೊಲೆಗೆ ಕಾರಣವಲ್ಲ ಎಂದು ಮೊಸಳೆ ಕಣ್ಣೀರಿಟ್ಟಿದ್ದಳಂತೆ. ಪೊಲೀಸರು ತಮ್ಮ ವರಸೆಯಲ್ಲಿ ಸುನೀತಾಳನ್ನು ವಿಚಾರಿಸಿದಾಗ, ಹತ್ಯೆಯ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದು . ತಾನೇ ಪ್ರಿಯಕರನಿಗೆ , ಪತಿಯನ್ನು ಸುಫಾರಿ ಕೊಟ್ಟು ಹತ್ಯೆಗೈಯಿಸಿದಂತ ಮಾಹಿತಿಯನ್ನು ಕೊನೆಗೂ ಹೊರಬಿದ್ದಿದೆ.,

ಆರೋಪಿ ಸುನಿತಾ ಈ ಹಿಂದೆ ಅದೇಕೆ ಜೈಲಿಗೋಗಿದ್ದಳು ಎಂಬುದಾದರೆ ಅದಕ್ಕು ಮುನ್ನ ಈ ಕೊಲೆಗೆ ಕಾರಣ ಕೇಳಿಬಿಡಿ :

‘ ಆನಂದ್ ಕುಮಾರ್ ಹಾಗೂ ಸುನೀತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರಂತೆ. 2018ರಲ್ಲಿ ಡ್ರೈವಿಂಗ್ ಕಲಿಯೋದಕ್ಕೋಗಿ, ಗಲಾಟೆಯಾಗಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದಂತ ಪ್ರಕರಣದಲ್ಲಿ ಜೈಲಿಗೆ ಹೋಗಿ ಸುನೀತಾ ಇತ್ತೀಚಿಗೆ ಬಿಡುಗಡೆಯಾಗಿ ಬಂದಿದ್ದಳು. ಈ ಬಳಿಕ ಕೊರೋನಾ ಕಾಲದಲ್ಲಿ ಯೋಗಾ ಕ್ಲಾಸ್ ಗೆ ತೆರಳುತ್ತಿದ್ದಳಂತೆ. ಅಲ್ಲಿಯೇ ನವೀನ್ ಎಂಬಾತನೊಂದಿಗೆ ಪ್ರೇಮಾಂಕುರ ಶುರುವಾಗಿ. ಇದನ್ನು ಕಣ್ಣಾರೆ ಕಂಡಂತ ಆನಂದ್ ಕುಮಾರ್ ಆಕ್ಷೇಪಿಸಿ ಅಕ್ಷರಶಃ ವಿರೋಧಿಸಿದ್ದರಂತೆ. ಗಂಡನಿಗೆ ವಿಷಯ ತಿಳಿದ ಹಿನ್ನಲೆ ಗಂಡನನ್ನು ಹತ್ಯೆಗೆ ಸ್ಕೆಚ್ ಹಾಕಿ, ಪ್ರಿಯಕರ ನವೀನ್ ಮತ್ತು ಆತನ ಸ್ನೇಹಿತರೊಂದಿಗೆ ಹತ್ಯೆಗೈಯಿಸಿ. ಇದೀ ಈ ಪ್ರಕರಣದಲ್ಲಿ ಜೈಲುಪಾಲಾಗಿ ಸದ್ಯ ಮುದ್ದೆ ಮುರಿಯುತ್ತ ಕಂಬಿ ಎಣಿಸುತ್ತಿದ್ದಾಳೆ.

LEAVE A REPLY

Please enter your comment!
Please enter your name here