ಹಾಸನ : ನಿಮಗೆ ತಿಳಿದಿರುವಂತೆ ವರ್ಷಕ್ಕೆ ಒಂದು ಬಾರಿ ಅಶ್ವಯುಜ ಮಾಸದ ಹುಣ್ಣಿಮೆ ನಂತರದ ಪ್ರಥಮ ಗುರುವಾರ ದೇವಾಲಯ ಗರ್ಭಗುಡಿ ಬಾಗಿಲು ತೆರೆದು ಬಲಿಪಾಡ್ಯಮಿಯ ಮರು ದಿನ ಮುಚ್ಚಿದರೆ, ಮರು ವರ್ಷದವರೆಗೂ ತೆರೆಯುವಂತಿಲ್ಲ. ಆದರೆ, ಹಾಸನವೇ ಮೊನ್ನೇ ಭಾನುವಾರದ ಸುದ್ದಿ ತಿಳಿದು ಆಶ್ಚರ್ಯ ವ್ಯಕ್ತಪಡಿಸಿತ್ತು ., ಹಾಸನಾಂಬ ದೇವಾಲಯದ ಆರ್ಚಕ ನಾಗರಾಜ್ ಭಟ್ ಅವರು ಭಾನುವಾರ ಗರ್ಭಗುಡಿ ಹೊರ ಭಾಗದಲ್ಲಿ ದೇವಿಯ ಪ್ರತಿರೂಪ ಇರಿಸಿ ಪಾದುಕೆ ಪೂಜೆ ಆರಂಭಿಸಿದ್ದಲ್ಲದೇ , ಕಾಣಿಕೆ ಹುಂಡಿಯನ್ನೂ ತಂದಿರಿಸಿಕೊಂಡಿದ್ದು. ಇದೇ ದೇವಾಲಯದ ಇತರೆ ಆರ್ಚಕರು ವಿರೋಧಿಸಿ ಅಧಿಕಾರಿಗಳ , ಮಾಧ್ಯಮಗಳ ಗಮನಕ್ಕೆ ತಂದಿದ್ದರು , ಅದರಂತೆ ಜಿಲ್ಲೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು., ದೇವಾಲಯದ ಆರ್ಚಕರೊಂದಿಗೆ ಸೋಮವಾರ ಸಭೆಯಲ್ಲಿ ” ಹಿಂದಿನಿಂದಲೂ ಗರ್ಭಗುಡಿ ಮುಂದೆ ಪೂಜೆ ಮಾಡುವ ಸಂಪ್ರದಾಯವಿದೆ ಎಂದು ಅರ್ಚಕರು ಹೇಳಿದರು ., ಆದರೆ, ಅದಕ್ಕೆ ವಿರೋಧ ವ್ಯಕ್ತವಾಗಿರುವುದರಿಂದ ಪೂಜೆ ನಡೆಸದಂತೆ ಸೂಚಿಸಲಾಗಿದೆ. ಸಂಪ್ರದಾಯಕ್ಕೆ ಧಕ್ಕೆ ಬರುವ ಹಾಗೂ ಭಕ್ತ ವಲಯವನ್ನು ಘಾಸಿಗೊಳಿಸುವ ಪೂಜೆ ನಡೆಯುವುದಿಲ್ಲ’ ಹಾಸನ: ನಗರದ ಅಧಿದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಮುಂಭಾಗದಲ್ಲಿ ದೇವಿಯ ಪ್ರತಿರೂಪ ನಿರ್ಮಿಸಿ ವಿಶೇಷ ಪೂಜೆ ನಡೆಸುವುದಕ್ಕೆ, ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಖಾರಿ ಬಿ.ಎ. ಜಗದೀಶ್ ತಡೆ ನೀಡಿ ಆದೇಶ ಹೊರಡಿಸಿದ್ದಾರೆ.
Home Hassan Taluks Hassan ಅರ್ಚಕರೊಬ್ಬರ ಎಡವಟ್ಟು : ಹಾಸನಾಂಬೆ ಗರ್ಭಗುಡಿ ಮುಂದೆ ಪಾದುಕೆ ಪೂಜೆಗೆ ಜಿಲ್ಲಾಡಳಿತವತಿಯಿಂದ ತಡೆ ; ಸಭೆಯಲ್ಲಿ...