ದಿನಾಂಕ: 02-11-2023 ರಿಂದ 15-11-2023 ರ ವರೆಗೆ “ಶ್ರೀ ಹಾಸನಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ” ಇರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹಾಗೂ ಲಾರಿ/ಗೂಡ್ಸ್/ಬಾರಿ ವಾಹನಗಳು ಸಂಚರಿಸುವ ಮಾರ್ಗವನ್ನು ಕೆಳಕಂಡಂತೆ ಬದಲಾವಣೆ ಮಾಡಲಾಗಿರುತ್ತದೆ.
1) ಬೆಂಗಳೂರು < > ಹಾಸನ < > ಮಂಗಳೂರು ಮಾರ್ಗವಾಗಿ ಚಲಿಸುವ ಬಸ್ಸ್ ಗಳು/ಲಾರಿ/ಗೂಡ್ಸ್/ಬಾರಿ ವಾಹನಗಳು ಚನ್ನಪಟ್ಟಣ ಬೈಪಾಸ್ ಮಾರ್ಗವಾಗಿ ಚಲಿಸುವುದು.
2) ಹಾಸನ < > ಬೇಲೂರು < > ಮೂಡಿಗೆರೆ < > ಚಿಕ್ಕಮಗಳೂರು ಮಾರ್ಗವಾಗಿ ಚಲಿಸುವ ಬಸ್ಸ್ ಗಳು/ಲಾರಿ/ಗೂಡ್ಸ್/ಬಾರಿ ವಾಹನಗಳು ಚನ್ನಪಟ್ಟಣ ಬೈಪಾಸ್ ಮಾರ್ಗವಾಗಿ ರೇಷ್ಮೆ ಇಲಾಖೆ ಕ್ರಾಸ್ ಮೂಲಕ ಚಲಿಸುವುದು.
3) ಚಿಕ್ಕಮಗಳೂರು < > ಬೇಲೂರು < > ಬೆಂಗಳೂರಿಗೆ ಮಾರ್ಗವಾಗಿ ಚಲಿಸುವ ಬಸ್ಸ್ ಗಳು/ಲಾರಿ/ಗೂಡ್ಸ್/ಬಾರಿ ವಾಹನಗಳು ಉದ್ದೂರು ಸರ್ಕಲ್ ಮೂಲಕ ರಿಂಗ್ ರೋಡ್ ಮಾರ್ಗವಾಗಿ ಡೈರಿ ಸರ್ಕಲ್ ಮೂಲಕ ಚಲಿಸುವುದು.
4) ಹಾಸನ ನಗರದ ಎನ್.ಆರ್ ವೃತದಿಂದ ಪಾಯಣ್ಣ ವೃತ್ತದ ವರೆಗೆ ಸಿಟಿ ಬಸ್ಸುಗಳನ್ನು ಹೊರತುಪಡಿಸಿ ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳ ಪ್ರವೇಶವನ್ನು ನಿರ್ಬಂಧಿಸಲಾಗಿರುತ್ತದೆ.
5) ಎಮ್.ಎಚ್ ಸರ್ಕಲ್ ನಿಂದ ಸೊಸೈಟಿ ಸರ್ಕಲ್ ವರೆಗೆ ಹಾಗೂ ಪಾಯಣ್ಣ ಸರ್ಕಲ್ ನಿಂದ ಹೊಸ ಲೈನ್ ರಸ್ತೆ (ಬೃಂದಾ ಕಾಫಿ ವರ್ಕ್ಸ್) ವರಗೆ ಹಾಗೂ ನಗರಸಭೆ ಮುಂಭಾಗದ ರಸ್ತೆಯಿಂದ ಹಾಸನಾಂಬ ದೇವಸ್ಥಾನದ ಆವರಣದವರೆಗೆ ಎಲ್ಲಾ ರೀತಿಯ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿರುತ್ತದೆ(ತುರ್ತು ಸಂದರ್ಭ ಹಾಗೂ ಸ್ಥಳೀಯ ಪ್ರದೇಶದ ನಿವಾಸಿಗಳನ್ನು ಹೊರತುಪಡಿಸಿ).
6) ನಗರಸಭೆ ಕಚೇರಿಯ ಆವರಣದ ಹಿಂಭಾಗದಲ್ಲಿ( ದ್ವಿಚಕ್ರ ಮತ್ತು ನಾಲ್ಕು ಚಕ್ರ) ಹಾಗೂ ಗೊರೂರು ರಸ್ತೆಯ ಹಳೆ ಸಂತೆ ಮೈದಾನದಲ್ಲಿ ( ನಾಲ್ಕು ಚಕ್ರ) ಮತ್ತು ದನಗಳ ಸಂತೆ ಮೈದಾನದಲ್ಲಿ (ಟಿಟಿ ವಾಹನ ಮತ್ತು ಮಿನಿ ಬಸ್ ) ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.