ಪಿಂಚಣಿ ಪಡೆಯುತ್ತಿರುವವರೆ ಗಮನಿಸಿ 👇

0

ಪಿಂಚಣಿದಾರರಿಂದ ಜೀವನ ಪ್ರಮಾಣ ಪತ್ರ ಆಹ್ವಾನ
ಹಾಸನ ಮಾ.05 (ಹಾಸನ್_ನ್ಯೂಸ್ !, ಕಾರ್ಮಿಕ ಭವಿಷ್ಯ ನಿಧಿ ಸಂಘಟನೆ, ಕ್ಷೇತ್ರೀಯ ಭವಿಷ್ಯ ನಿಧಿ ಕಚೇರಿ ಚಿಕ್ಕಮಗಳೂರಿನಲ್ಲಿ ಒಟ್ಟು 17,939 ಪಿಂಚಣಿದಾರರು ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಇವರಲ್ಲಿ 2021 ರ ಫೆ. 28 ವರೆಗೆ 10,994 ಪಿಂಚಣಿದಾರರು ಮಾತ್ರ ಪ್ರತಿ ವರ್ಷ ಸಲ್ಲಿಸಬೇಕಾಗಿರುವ ಜೀವನ ಪ್ರಮಾಣ-ಆಧಾರ್ ಆನ್ ಲೈನ್ ಡಿಜಿಟಲ್ ಲೈಫ್ ಸರ್ಟಿಫಿಕೇಟನ್ನು ಸಲ್ಲಿಸಿದ್ದಾರೆ.
ಉಳಿದ 6945 ಪಿಂಚಣಿದಾರರು ಪ್ರತಿವರ್ಷ ಸಲ್ಲಿಸಬೇಕಾಗಿರುವ ಜೀವನ ಪ್ರಮಾಣ ಆಧಾರ್ ಆನ್‍ಲೈನ್ ಡಿಜಿಟಲ್ ಲೈಫ್ ಸರ್ಟಿಫಿಕೇಟ್‍ನ್ನು ಕೂಡಲೇ ದಾಖಲುಗೊಳಿಸಿ ನಿರಂತರವಾಗಿ ಮಾಸಿಕ ಪಿಂಚಣಿಯನ್ನು ಭವಿಷ್ಯ ನಿಧಿ ಕಚೇರಿಯಿಂದ ಪಡೆಯಲು ಅರ್ಹವಾಗಿರಬೇಕು ಎಂದು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಪಿಂಚಣಿದಾರರಿಗೆ ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರಾದ ಸಚಿನ್ ಟಿ.ಶೆಟ್ಟಿ ವಿತರಿಸಿದ್ದಾರೆ.
ಪಿಂಚಣಿದಾರರು ಪಿಂಚಣಿ ಪಡೆಯುತ್ತಿರುವ ಬ್ಯಾಂಕ್ ಹತ್ತಿರದ ಜೀವನ ಪ್ರಮಾಣ ದಾಖಲಾತಿ ಕೇಂದ್ರ ಅಥವಾ ಅಂಚೆ ಕಚೇರಿಯಲ್ಲಿ ಪಿಂಚಣಿ ಪತ್ರ ಅಥವಾ ಪಿಂಚಣಿ ಸಂಖ್ಯೆ, ಮೊಬೈಲ್ ಪೋನ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾರ್ಡ್‍ನೊಂದಿಗೆ ಹಾಜರಾಗಿ ಆನ್ ಲೈನ್ ಡಿಜಿಟಲ್ ಲೈಫ್ ಸರ್ಟಿಫಿಕೇಟ್‍ನ್ನು ನೊಂದಾಯಿಸಬೇಕು ತಪ್ಪಿದಲ್ಲಿ ಮಾರ್ಚ್ ತಿಂಗಳ ಬಳಿಕ ಪಿಂಚಣಿಯನ್ನು ತಡೆಹಿಡಿಯಲಾಗುವುದು ಎಂದು ಕ್ಷೇತ್ರಿಯ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here