ಹಸಿರುಭೂಮಿ ಪ್ರತಿಷ್ಠಾನ ಮತ್ತು ಹಾಸನದ ಇತರೆ ಸಂಘದವತಿಯಿಂದ ಚನ್ನಪಟ್ಟಣ ಕೆರೆ ಸುತ್ತಮುತ್ತ ಪರಿಸರದ ಸ್ವಚ್ಛತೆಗಾಗಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಶ್ರಮದಾನಕ್ಕೆ ಬಾರಿ ಬೆಂಬಲ

0

ಹಾಸನ: ಹಸಿರುಭೂಮಿ ಪ್ರತಿಷ್ಠಾನ ಮತ್ತು ಚನ್ನಪಟ್ಟಣ ಕೆರೆ ಸಂರಕ್ಷಣೆ ಹಾಗು ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಚನ್ನಪಟ್ಟಣ ಕೆರೆ ಪರಿಸರದ ಸ್ವಚ್ಛತೆಗಾಗಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಶ್ರಮದಾನ ಕಾರ್ಯಕ್ರಮ ವು ನಿಜವಾಗಿಯೂ ಬೃಹತ್ತಾಗಿಯೇ ನಡೆಯಿತು.

ನೂರಕ್ಕೂ ಅಧಿಕ ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ವೈದ್ಯರು, ವಕೀಲರು, ಇಂಜಿನಿಯರುಗಳು, ಉಪನ್ಯಾಸಕರು, ಶಿಕ್ಷಕರು, ಮಹಿಳೆಯರು ಹೀಗೆ ವಿವಿಧ ಸಮುದಾಯಗಳ ಜನರಲ್ಲದೆ ಹಿರಿಯ ನಾಗರಿಕರ ವೇದಿಕೆ, ಲಯನ್ಸ್ಕ್ಲಬ್, ಮುಂಜಾನೆ ಮಿತ್ರರು ಮುಂತಾದ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಚನ್ನಪಟ್ಟಣ ಕೆರೆ ಆವರಣದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಕಟ್ಟಡದ ಎದುರು ಶ್ರಮದಾನ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಚಾಮರಾಜೇಂದ್ರ ಆಸ್ಪತ್ರೆಯ ಜಿಲ್ಲಾ ಶಸ್ತಚಿಕಿತ್ಸಕರು ಡಾ. ವಿ.ಆರ್. ಕೃಷ್ಣಮೂರ್ತಿ ಅವರು, ಹಸಿರುಭೂಮಿ ಪ್ರತಿಷ್ಠಾನವು ಕೆರೆ ಕಟ್ಟೆಗಳನ್ನು ಪುನಶ್ಚೇತನ ಹಾಗೂ ಅರಣ್ಯೀಕರಣ ಚಟುವಟಿಕೆಗಳನ್ನು ಮಾಡುತ್ತಿರುವುದು ಪ್ರಶಂಸಾರ್ಹವಾಗಿದೆ.

ಇದೀಗ ಹಾಸನ ನಗರದಲ್ಲಿ ಸ್ವಚ್ಛತಾ ಆಂದೋಲನಾ ಆರಂಭಿಸಿದ್ದು, ಈ ಆಂದೋಲನಕ್ಕೆ ತಾವು ಎಲ್ಲ ರೀತಿಯ ಸಹಕಾರ ಹಾಗು ನೆರವು ನೀಡುವುದಾಗಿ ಘೋಷಿಸಿದರು.
ಇನ್ನೊಬ್ಬ ಮುಖ್ಯ ಅತಿಥಿ ತಾಲ್ಲೂಕು ಪಂಚಾಯ್ತಿ ಕರ‍್ಯನಿರ್ವಹಣಾಧಿಕಾರಿ ಡಾ. ಯಶವಂತ್ ಅವರು ಮಾತನಾಡಿ, ಸರ್ಕಾರದ ಯೋಜನೆಗಳು ಅರ್ಥಪೂರ್ಣವಾಗಿ ಅನುಷ್ಠಾನಗೊಳ್ಳಲು ಜನರ ಸಹಭಾಗಿತ್ವ  ಬಹಳ ಮುಖ್ಯ.

ಈ ನಿಟ್ಟಿನಲ್ಲಿ ಹಸಿರುಭೂಮಿ ಪ್ರತಿಷ್ಠಾನವು ಅತ್ಯುತ್ತಮವಾದ ಕೆಲಸಗಳನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.


ಸ್ವಯಂ ಸೇವಕರು ಪ್ರವಾಸೋದ್ಯಮ ಕಟ್ಟಡದ ಸುತ್ತಮುತ್ತಲ ರಸ್ತೆ ಬದಿಯ ಗಿಡಗಂಟಿಗಳು ಮತ್ತು ಕಳೆಗಳನ್ನು ನಿರ್ಮೂಲನ ಮಾಡಿದರು. ಈ ದಿನದ ಕಾರ್ಯಕ್ರಮಕ್ಕೆ ಎಸ್‌ಬಿಜಿ ಸಮೂಹದ ಸುಜಾತ ನಾರಾಯಣ ಅವರು ಎರಡು ಜೆಸಿಬಿ ಯಂತ್ರಗಳನ್ನು ಹಾಗು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವರಾಜೇಗೌಡ ಅವರು ಒಂದು ಜೆಸಿಬಿ ಯಂತ್ರವನ್ನು ಉಚಿತವಾಗಿ ಕಳಿಸಿಕೊಟ್ಟಿದ್ದರು.


ಈ ದಿನದ ಕಾರ್ಯಕ್ರಮ ದಲ್ಲಿ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಡಾ. ವೈ.ಎಸ್. ವೀರಭದ್ರಪ್ಪ, ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ.ಶಿವಣ್ಣ, ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ, ಉಪಾಧ್ಯಕ್ಷ  ಡಾ.ಮಂಜುನಾಥ್. ಕಾರ್ಯದರ್ಶಿ ಚಿನ್ನೇನಹಳ್ಳಿಸ್ವಾಮಿ, ಎಸ್.ಪಿ. ರಾಜೀವೇಗೌಡ, ಲಯನ್ಸ್ಕ್ಲಬ್ ಅಧ್ಯಕ್ಷ ಪ್ರಕಾಶ್, ಮುಂಜಾನೆ ಮಿತ್ರರು ಬಳಗದ ಇಂಜಿನಿಯರ್ ವೆಂಕಟೇಗೌಡ, ರಾಮೇಗೌಡ, ರಾಜ್ ಅಭಿಮಾನಿ ಸಂಘದ ಬಾಳ್ಳುಗೋಪಾಲ್, ಚನ್ನಪಟ್ಟಣ  ಚಂದವ ಮಾಡೋಣ ಬಳಗದ ಮಮತಾ ಪ್ರಭು, ಪ್ರಾಧ್ಯಾಪಕಿ ಬಿ.ಎಸ್. ಕವಿತಾ, ಭವಾನಿ, ಚನ್ನಪಟ್ಟಣ ಕೆರೆ ಸಂರಕ್ಷಣಾ ಸಮಿತಿಯ ತೌಫಿಕ್ ಅಹಮ್ಮದ್, ದರ್ಪಣ ಗೋಪಾಲ್, ಕಿರಣ್, ಸುರೇಶ್, ಡಿ.ಎಸ್. ಹರೀಶ್, ಹಸಿರುಭೂಮಿ ಆಂದೋಲನದ ಗಿರಿಜಾಂಬಿಕಾ  ಮುಂತಾದವರು ಪಾಲ್ಗೊಂಡಿದ್ದರು.


ಮುಂದಿನ ವಾರವೂ ಭಾನುವಾರ ಬೆಳಿಗ್ಗೆ 7 ಗಂಟೆಯಿದ 9 ಗಂಟೆ ತನಕ ಚನ್ನಪಟ್ಟಣ ಕೆರೆ ಸುತ್ತಮುತ್ತ ಶ್ರಮದಾನ ಮಾಡಲಾಗುವುದೆಂದು ಸಂಘಟಕರು ತಿಳಿಸಿದ್ದಾರೆ.

ಹಾಸನ ಜನತೆಯ ಪರವಾಗಿ ಹಸಿರು ಭೂಮಿ ಪ್ರತಿಷ್ಠಾನ ದ ಪುಟ್ಟಯ್ಯ ಮತ್ತು ತಂಡಕ್ಕೆ ಧನ್ಯವಾದಗಳು 

LEAVE A REPLY

Please enter your comment!
Please enter your name here