“ಕಸ ಹಾಕುವ ಜಾಗ ಸುಚಿ ಗೊಳಿಸುವ ಒಂದು ವಿಶಿಷ್ಟ ಕಾರ್ಯಕ್ರಮ” 

0

ಹಸಿರು ಭೂಮಿ ಪ್ರತಿಷ್ಠಾನ ಹಾಸನ ವತಿಯಿಂದ , ಸತ್ಯಮಂಗಲ ಗ್ರಾಮ ಪಂಚಾಯಿತಿ ಮತ್ತು ವಿದ್ಯಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಇವರುಗಳು ಸೇರಿ ಇಂದು ಪರಿಸರ ಜಾಗೃತಿ ಅಭಿಯಾನವನ್ನು

“ಕಸ ಹಾಕುವ ಜಾಗ ಸುಚಿ ಗೊಳಿಸುವ ಒಂದು ವಿಶಿಷ್ಟ ಕಾರ್ಯಕ್ರಮ”  ಬುದ್ಧ ಮಾರ್ಗ ರಸ್ತೆ, ವಿದ್ಯಾನಗರ ಹಾಸನ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

°ಹಸಿರು ಭೂಮಿ ಪ್ರತಿಷ್ಠಾನ ಮತ್ತು ಚನ್ನಪಟ್ಟಣ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ 72ನೇ  ಗಣರಾಜ್ಯೋತ್ಸವದ ಅಂಗವಾಗಿ  ಪರಿಸರ ಜಾಗೃತಿ ಅಭಿಯಾನದ ಮೂಲಕ ” *ಪೈಪ್ ಕಂಪೋಸ್ಟಿಂಗ್ ಪ್ರಾತ್ಯಕ್ಷತೆ”* ಯನ್ನು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರೀತಂ ಜೆ ಗೌಡರವರು ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಡಾಕ್ಟರ್ ಮಂಜುನಾಥ್ ರವರು ಪೈಪ್ ಕಂಪೋಸ್ಟಿಂಗ್ ಪ್ರಾತ್ಯಕ್ಷತೆ ಯನ್ನು ಮಾಡುವುದರ ಮೂಲಕ ಕಾರ್ಯಕ್ರಮದಲ್ಲಿ ಬಂದಿರುವ ಜನರಿಗೆ ಅರಿವು ಮೂಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪುಟ್ಟಯ್ಯನವರು ವಹಿಸಿದ್ದರು.


ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಸದಸ್ಯರು, ಲಯನ್ಸ್ ಕ್ಲಬ್ನ ಸದಸ್ಯರು, ಬಲಮುರಿ ಸೇವಾ ಗಣಪತಿ ಸಂಘದ ಸದಸ್ಯರು,

ಮುಂಜಾನೆ ಮಿತ್ರರ ತಂಡದವರು, ಹಾಸನದ ಅನೇಕ ಸ್ವಯಂ ಸೇವಾ ಸಂಘದ ಸದಸ್ಯರುಗಳು ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here