ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಹಾಸನ ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಹಾಗೂ ಜನಪ್ರಿಯ ಆಸ್ಪತ್ರೆಯ ಸಹಯೋಗದೊಂದಿಗೆ ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯಲ್ಲಿ ಉಚಿತ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ಈ ಶಿಬಿರದಲ್ಲಿ ಸುಮಾರು 120 ಜನರಿಗೆ ಉಚಿತ ಹೃದಯ ತಪಾಸಣೆ ರಕ್ತ ಪರೀಕ್ಷೆ ECG ಹಾಗೂ ECHO ಸ್ಕ್ಯಾನಿಂಗ್ ಅನ್ನು ಜನಪ್ರಿಯ ಆಸ್ಪತ್ರೆಯ ವತಿಯಿಂದ ಮಾಡಿಕೊಡಲಾಯಿತು
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಪಾರ ಜಿಲ್ಲಾಧಿಕಾರಿಯ
ವರಾದ ಶ್ರೀಮತಿ ಕವಿತಾ ರಾಜಾರಾಮ್ ರವರು ಉದ್ಘಾಟನೆ ಮಾಡಿದರು ಉದ್ಘಾಟನೆ ಮಾಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ರವರು ಹೃದಯದ ಮತ್ತು ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಮತ್ತು ಜನರು ವಹಿಸಬೇಕಾದ ಕಾಳಜಿಯ ಬಗ್ಗೆ ವಿವರಿಸಿದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಅಬ್ದುಲ್ ಬಶೀರ್ ವಿಕೆ ರವರು ಮಾತನಾಡಿ ಹೃದಯದ ಪ್ರಾಮುಖ್ಯತೆಯ ಬಗ್ಗೆ ವಿವರಿಸುತ್ತ ಶ್ವಾಸಕೋಶ ವನ್ನು ಕೃತಕವಾಗಿ ಉಸಿರಾಡುವ ಯಂತ್ರವನ್ನು ಅಳವಡಿಸಿ ತಾತ್ಕಾಲಿಕ ಉಸಿರಾಡುವಂತೆ ಮಾಡಲು ಸಾಧ್ಯವಾದರೆ ಹೃದಯದ ಬಡಿತವನ್ನು ಕೃತಕವಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಅಧ್ಯಕ್ಷರಾದ ಡಾಕ್ಟರ್ ವೀರಭದ್ರಪ್ಪನವರು ವಹಿಸಿದರು ಉಚಿತ ಹೃದಯ ತಪಾಸಣೆ ಯನ್ನು ಮತ್ತು ಸ್ಕ್ಯಾನಿಂಗ್ ಅನ್ನು ಖ್ಯಾತ ಹೃದ್ರೋಗ ತಜ್ಞರಾದ ಡಾಕ್ಟರ್ ಅನೂಪ್ ಅವರು ನಡೆಸಿಕೊಟ್ಟರು
ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ವೇದಿಕೆಯ ಬಿ.ಕೆ ಮಂಜುನಾಥ್ ರವರು ಶ್ರೀ ಪುಟ್ಟೇಗೌಡ ರವರು ಹಾಗೂ ಅನೇಕ ಹಿರಿಯ ನಾಗರಿಕರು ಭಾಗವಹಿಸಿದ್ದರು ಈ ಕಾರ್ಯಕ್ರಮವನ್ನು ನಿವೃತ್ತ DFO ಶ್ರೀಯುತ ಚಂದ್ರೇಗೌಡ ರವರು ನಿರೂಪಿಸಿದರು