ಹಾಸನಕ್ಕೆ ಇದೇ ಮೊದಲ ಬಾರಿಗೆ ಮೋದಿ ಜಿಲ್ಲೆಯ ಹೆಚ್ಚು ವಿಧಾನಸಭಾ ಕ್ಷೇತ್ರದ ಕೇಂದ್ರ ಚಿತ್ರ

0

ಹಾಸನ: ಜಿಲ್ಲೆಯಲ್ಲಿ ಪಕ್ಷ ಬಲಗೊಳಿಸುವ ದೃಷ್ಟಿಯಿಂದ ಚುನಾವಣೆ ಪ್ರಚಾರಕ್ಕಾಗಿ ಹಾಸನಕ್ಕೆ ಪ್ರಧಾನಿ ನರೇಂದ್ರಮೋದಿಯವರು ಬರಲಿದ್ದಾರೆ ಶಾಸಕ ಪ್ರೀತಂಗೌಡ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ದೃಷ್ಠಿಯಿಂದ ನರೇಂದ್ರ ಮೋದಿಯವರನ್ನು ಚುನಾವಣೆ ಪ್ರಚಾರಕ್ಕಾಗಿ ಹಾಸನಕ್ಕೆ ಆಗಮಿಸಲು ಕೋರಿಕೆ ಸಲ್ಲಿಸಿದ್ದೇವೆ. ಅವರ ಪ್ರತಿಕ್ರಿಯೆಗಾಗಿ

ಕಾಯುತ್ತಿದ್ದೇವೆ. ಅತೀ ಶೀಘ್ರದಲ್ಲಿ ಹಾಸನಕ್ಕೆ ಬಂದು ಪಕ್ಷ ಇನ್ನಷ್ಟು ಬಲಗೊಳಿಸಲಿದ್ದಾರೆ ಎಂದು ತಿಳಿಸಿದರು.
ಬಜೆಟ್ ಘೋಷಣೆಯಾಗಿದ್ದು ರಾಜ್ಯವಾರು ಜಿಲ್ಲೆವಾರು ಅಲ್ಲ. ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದರೆ ಬಜೆಟ್ ಮಾತ್ರ ಸಾಲಲ್ಲ. ಮಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಆಗುವ ಕೆಲಸಗಳ ಬಗ್ಗೆ ಮನವರಿಕೆ ಮಾಡಿ ಅನುದಾನ ತರಬೇಕು. ಆ ಕೆಲಸವನ್ನು ನಾನು ನನ್ನ ಕ್ಷೇತ್ರದಲ್ಲಿ ಮಾಡಿದ್ದೇನೆ. ರಸ್ತೆ, ಹೊಳ ಚರಂಡಿ, ಪಾರ್ಕ್ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಅನುದಾನಗಳನ್ನು ತಂದು, ಜಲಜೀವನ್ ಮಿಷನ್ ಯೋಜನೆಗೆ ಸಾವಿರಾರು ಕೋಟಿ ಹಣವನ್ನು ಹಾಸನಕ್ಕೆ ತರಲಾಗಿದೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು. , ಒಂದು ಯೋಜನೆ ತರಬೇಕು ಎಂದರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಬೇಕು. ಆರು ಕ್ಷೇತ್ರದ ಶಾಸಕರು ಅನುದಾನ ತರುವ ಕೆಲಸ ಮಾಡಬೇಕಿತ್ತು, ಅವರು ಮಾಡಿಲ್ಲ.

ಜನಪ್ರತಿನಿಥಿಗಳು ಮುಖ್ಯಮಂತ್ರಿಯವರ ಗಮನ ಸೆಳೆದು ಬೇಕಾದ ಯೋಜನೆಯನ್ನು ತರಲು ಮನವಿ ಮಾಡಬೇಕಿತ್ತು. ಶಾಸಕರು ಎಷ್ಟು ಪರಿಣಾಮಕಾರಿಯಿಂದ ಕೆಲಸ ಮಾಡುತ್ತಾರೆ ಎಂದು ನೋಡಿ ಮುಖ್ಯ ಮಂತ್ರಿಯವರು ಯೋಜನೆಗೆ ಅನುಮೊದನೆ ನೀಡುತ್ತಿದ್ದರು. ಅನುದಾನವನ್ನು ತರುವ ಕೆಲಸವನ್ನು ಕ್ಷೇತ್ರಕ್ಕೆ ಆರು ಕ್ಷೇತ್ರದ ಶಾಸಕರು ಮಾಡಿಲ್ಲ ಎಂದರು. , ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ರಾಷ್ಟ್ರಿಯ ನಾಯಕರು ಚುನಾವಣೆ ನಿರ್ವಹಣ ಸಮಿತಿ ಅಂತಿಮ ಮಾಡುತ್ತದೆ. ಮಾರ್ಚ್ ಅಂತ್ಯದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ ಎಂದು ತಿಳಿದು ಬಂದಿದೆ. ನಾನು ಸಹ ಒಬ್ಬ ಆಕಾಂಕ್ಷಿ. ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತಾರೋ ಎಂದು ಗೊತ್ತಿಲ್ಲ.

ನಮ್ಮ ಪಕ್ಷದಲ್ಲಿ ಅದರದ್ದೆ ಆದ ನಿಯಮಗಳಿಗೆ, ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂದು ರಾಷ್ಟ್ರಿಯ ಅಧ್ಯಕ್ಷರೇ ನೇತೃತ್ವದಲ್ಲಿ ತಿರ್ಮಾನಿಸಲಾಗುತ್ತದೆ. ನಮ್ಮ ಪಕ್ಷದಲ್ಲಿ ಮನೆಯಲ್ಲಿ ಕೂತು ತಿರ್ಮಾನಿಸುವ ಅವಕಾಶವಿಲ್ಲ ಎಂದರು.

ಹಾಸನದಲ್ಲಿ ಆಪರೇಷನ್‌ ಅಖಾಡಕ್ಕಿಳಿದ ದಳಪತಿಗಳು, ಕಮಲಕ್ಕೆ ಕೈ ಕೊಟ್ಟು ತೆನೆ ಹೊತ್ತ ಎ. ಮಂಜು ಆಪ್ತ

ಹಾಸನದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರ ಈಗ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಕದನಕ್ಕೆ ಸಾಕ್ಷಿಯಾಗುತ್ತಿದೆ. ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪೀತ್ರಂ ಗೌಡ ರೇವಣ್ಣಗೆ ಸವಾಲ್‌ ಆಗಿದ್ದನ್ನ ಗಂಭೀರವಾಗಿ ಪರಿಗಣಿಸಿರುವ ದಳಪತಿಗಳು ಸದ್ದಿಲ್ಲದೇ ಅಪರೇಷನ್‌ ಶುರು ಮಾಡಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಯಾವಾಗ ಭವಾನಿ ರೇವಣ್ಣ ಎಂಟ್ರಿ ಆದ ದಿನದಿಂದಲೂ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸಿನಿಂದ ಸಾಗಿದೆ ಗೆಲ್ಲೋದು ನಾನಾ ಅಥವಾ ನೀನಾ ಎಂಬ ರಣಕಣ ವೇದಿಕೆಯು ಕೂಡ ಸಜ್ಜಾಗಿದೆ. ಆದರೆ ಬಿಜೆಪಿಯಿಂದ ಪ್ರೀತಂ ಗೌಡ ಅಭ್ಯರ್ಥಿಯಾದರೆ ಜೆಡಿಎಸ್‌ನಿಂದ ಅಭ್ಯರ್ಥಿ ಯಾರು ಎಂಬ ಕುತೂಹಲ ಮಾತ್ರ ಇನ್ನು ಹಾಗೆ ಉಳಿದಿದೆ.
ಪ್ರೀತಂ ಗೌಡ ಸವಾಲ್‌ ಹಾಕಿದ ದಿನದಿಂದಲೇ ಕಾರ್ಯೋನ್ಮುಖರಾಗಿರುವ ದಳಪತಿಗಳು, ಚುನಾವಣೆ ಮುನ್ನವೇ ಪಕ್ಷಾಂತರಕ್ಕೆ ಕೈ ಹಾಕಿದ್ದಾರೆ. ಹಲವು ಬಿಜೆಪಿ ಕಾಂಗ್ರೆಸ್‌ ಸ್ಥಳೀಯ ನಾಯಕರನ್ನ ಸೆಳೆಯಲು ಎಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ಮುಂದಾಗಿದ್ದಾರೆ. ಹೀಗಾಗಿ ಬಿಜೆಪಿ ತೊರೆದು ಒಬ್ಬೊಬ್ಬರೆ ಜೆಡಿಎಸ್‌ ಪಕ್ಷವನ್ನ ಸೇರುತ್ತಿದ್ದಾರೆ. ಸದ್ದಿಲ್ಲದೆ ರೇವಣ್ಣ ಆಪರೇಷನ್ ಜೆಡಿಎಸ್‌ಗೆ ಕೈ ಹಾಕಿದ್ದಾರೆ.
ಮೊನ್ನೆ ಮೊನ್ನೆ ತಾನೇ ಮಾಜಿ ಸಚಿವ ಎ.ಮಂಜು ಬಿಜೆಪಿಯಿಂದ ಜೆಡಿಎಸ್‌ಗೆ ಸೇರ್ಪಡೆಗೊಂಡ ಬಳಿಕ ಅವರ ಅನುಯಾಯಿಗಳು ಅಂತ ಅನಿಸಿಕೊಂಡಿದ್ದ ಹಾಸನ ತಾಲೂಕಿನ ಇಬ್ದಾಣೆ ಗ್ರಾಮ ಪಂಚಾಯತಿಯ ಅಧ್ಯಕ್ಷ, ಬಿಜೆಪಿಯ ಮಹೇಶ್ ಮತ್ತು ಆತನ ಅಭಿಮಾನಿಗಳು ಬಿಜೆಪಿ ಪಕ್ಷ ಬಿಟ್ಟು ಜೆಡಿಎಸ್ ಸೇರ್ಪಡೆಗೊಂಡಿದ್ದರು. ಇನ್ನು ಇದರ ಬೆನ್ನಲ್ಲಿಯೇ ಎ. ಮಂಜು ಆಪ್ತ ಎನ್ನಲಾದ ಮಾಜಿ ನಗರಸಭೆ ಸದಸ್ಯ ಬಂಗಾರಿ ಮಂಜು, ಸೈಲೆಂಟಾಗಿ ಬುಧವಾರ ಕಮಲ ಪಾಳಯಕ್ಕೆ ಶಾಕ್‌ ಕೊಟ್ಟು ಜೆಡಿಎಸ್ ಪಕ್ಷ ಸೇರಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಮಾಜಿ ಸಚಿವ ಎಚ್‌.ಡಿ ರೇವಣ್ಣ ಮತ್ತು ಬಂಗಾರಿ ಮಂಜು ಗೌಪ್ಯ ಮಾತುಕತೆ ನಡೆಸಿ ಬಳಿಕ ಬಿಜೆಪಿ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಬರುವ ಮೂಲಕ ತೆನೆ ಹೊತ್ತಿದ್ದಾರೆ. ಇನ್ನು ಬಂಗಾರಿ ಮಂಜು ಬಂದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಕೂಡ ಸಕ್ಕತ್ ಖುಷಿಯಲ್ಲಿದ್ದಾರೆ. ಎಚ್‌.ಎಸ್‌ ಪ್ರಕಾಶ್ ನಿಧನದ ನಂತರ ಪಕ್ಷ ಸಂಘಟನೆಯಿಲ್ಲದೇ ಹಿನ್ನಡೆ ಅನುಭವಿಸಿದ್ದ ದಳಪತಿಗಳು ಇದೀಗ ಮೈ ಕೊಡವಿ ನಿಂತಿದ್ದಾರೆ. ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯಲಿದೆ ಅನ್ನುವ ಭರವಸೆಯನ್ನ ಭವಾನಿ ರೇವಣ್ಣ ಹೇಳಿದ್ದಾರೆ ಎನ್ನಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಜೆಡಿಎಸ್‌ ನಾಯಕ ಆರ್ಭಟಕ್ಕೆ ಬಿಜೆಪಿ ಶಾಸಕ ಪ್ರೀತಂ ಗೌಡ ಹೇಗೆಲ್ಲ ಉತ್ತರ ಕೊಡುತ್ತಾರೆ. ಐವತ್ತು ಸಾವಿರ ಮತಗಳ ಅಂತರದಲ್ಲಿ ಗೆದ್ದೇ ಗೆಲ್ಲುವೆ ಎಂಬ ಸವಾಲ್‌ ಹಾಕಿರುವ ಪ್ರೀತಂ ಗೌಡ ಜೆಡಿಎಸ್‌ ಪಕ್ಷವನ್ನ ಹೇಗೆ ಮಣ್ಣು ಮುಕ್ಕಿಸುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಒಂದಡೆ ಜೆಡಿಎಸ್‌ ಹಾಲಿ ಶಾಸಕರೇ ಚುನಾವಣೆ ಹೊತ್ತಲ್ಲಿ ಪಕ್ಷಾಂತರ ಶುರು ಮಾಡಿದ್ದಾರೆ. ಇದಕ್ಕೆಲ್ಲ ಟಕ್ಕರ್‌ ಕೊಡಲು ಜೆಡಿಎಸ್‌ ನಾಯಕರು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ. ದಳಪತಿಗಳಿಗೆ ಅರಸೀಕೆರೆ ಮತ್ತು ಹಾಸನ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣು ಬಿದ್ದಿದ್ದು, ಯಾರಿಗೆ ಮಣ್ಣು ಮುಕ್ಕಿಸುವಲ್ಲಿ ರೇವಣ್ಣ ಕುಟುಂಬದವರು ಯಶಸ್ವಿಯಾಗುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

ಇದಾದ ಬೆನ್ನಲ್ಲೇ ಹಾಸನ ನಗರಸಭೆ ಜೆಡಿಎಸ್ ಸದಸ್ಯ ಪ್ರಸನ್ನ ( ಆಪು ) ಜೆಡಿಎಸ್ ನಿಂದ ಬಿಜಿಪಿ ಗೆ ಕರೆ ತಂದಿದ್ದಾರೆ

ಪ್ರಜ್ವಲ್ ರೇವಣ್ಣ ವಿರುದ್ಧದ ಕೇಸ್ ನಲ್ಲಿ ರಾಜಿ ಮಾಡಿಕೊಳ್ಳಲು ಎ.ಮಂಜುಗೆ ಜೆಡಿಎಸ್ ಟಿಕೆಟ್- ಹೆಚ್.ಡಿ ರೇವಣ್ಣ ವಿರುದ್ಧ ಶಾಸಕ ಎ.ಟಿ ರಾಮಸ್ವಾಮಿ ವಾಗ್ದಾಳಿ

ಹಾಸನ: ಪ್ರಜ್ವಲ್ ರೇವಣ್ಣ ವಿರುದ್ಧದ ಕೇಸ್ ನಲ್ಲಿ ರಾಜಿ ಮಾಡಿಕೊಳ್ಳಲು ಸ್ವಾರ್ಥಕ್ಕಾಗಿ ಎ.ಮಂಜುಗೆ ಜೆಡಿಎಸ್ ಟಿಕೆಟ್ ಕೊಡಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ವಾಗ್ದಾಳಿ ನಡೆಸಿದರು.
ಹೊಳೇನರಸಿಪುರ ಜೋಗಿಕೊಪ್ಪಲಿನಲ್ಲಿ ಮಾತನಾಡಿದ ಶಾಸಕ ಎ.ಟಿ ರಾಮಸ್ವಾಮಿ, ಹೆಚ್.ಡಿ ದೇವೇಗೌಡರನ್ನ ಇವರೆಲ್ಲಾ ಉತ್ಸಹ ಮೂರ್ತಿ ಮಾಡಿಕೊಂಡಿದ್ದಾರೆ. ಅಂತಹ ಮುತ್ಸದ್ದಿ ರಾಜಕಾರಣಿಯನ್ನ ಮೂಲೆಗುಂಪು ಮಾಡಿದ್ದಾರೆ. ದೇವೆಗೌಡರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ಸರಿಯಾಗಿ ಆಸ್ತಿ ಘೋಷಿಸದ ಹಿನ್ನೆಲೆ ಕೋರ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ವಿರುದ್ದ ವಿಚಾರಣೆ ನಡೆಯುತ್ತಿತ್ತು. ನ್ಯಾಯಾಲಯದಿಂದ ಶಿಕ್ಷೆ ಆಗುವ ಸಂದರ್ಭ ಬಂದಿತ್ತು. ಹೀಗಾಗಿ ಕೇಸ್ ನಲ್ಲಿ ರಾಜಿ ಮಾಡಿಕೊಳ್ಳಲು ಸ್ವಾರ್ಥಕ್ಕಾಗಿ ಎ.ಮಂಜುಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.ಹೆಚ್.ಡಿ ರೇವಣ್ಣರನ್ನ ರಾವಣನಿಗೆ ಹೋಲಿಕೆ ಮಾಡಿದ ಎ.ಟಿ ರಾಮಸ್ವಾಮಿ, ರಾವಣನಿಗೆ ಸಕಲ ಐಶ್ವರ್ಯದ ಜೊತೆ ಶಕ್ತಶಾಲಿ ಅಸ್ತ್ರ ಇದ್ದವು. ಅದರೆ ಅವನು ನಾಶನಾದ. ಯಾವುದಕ್ಕೆ ಆದಿ ಎಂಬುದು ಇರುತ್ತದೆಯೂ ಅದಕ್ಕೆ ಅಂತ್ಯವೂ ಇರುತ್ತದೆ. ಕೆಲವು ಜನ ಸ್ವಾರ್ಥಕ್ಕೆ ಏನು ಬೇಕಾದರೂ ಮಾಡುತ್ತಾರೆ ನಾನು ರಾಜಕೀಯದಿಂದ ಹಿಮ್ಮುಖವಾಗುವ ಸಂದರ್ಭವೇ ಇಲ್ಲ. ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಸ್ಪಷ್ಟನೆ ನೀಡಿದರು.

ವಿವಿಧೆಡೆ ಸಂಚಾರ: ಸ್ವರೂಪ್ ಅಬ್ಬರದ ಪ್ರಚಾರ

ಹಾಸನ: ಈವರೆಗೂ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ಮಾಡುತ್ತಿದ್ದ ದಿ.ಹೆಚ್.ಎಸ್.ಪ್ರಕಾಶ್ ಅವರ ಪುತ್ರ ಸ್ವರೂಪ್ ಪ್ರಕಾಶ್ ಗುರುವಾರ ನಗರದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು.
ಬೆಳಗ್ಗೆ ಹಾಸನಾಂಬೆ, ಸಿದ್ದೇಶ್ವರ ದೇವಾಲಯದ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ನಂತರ ಸಾವಿರಾರು ಮುಖಂಡರು, ಕಾರ್ಯಕರ್ತರೊಂದಿಗೆ ಮಧ್ಯಾಹ್ನದವರೆಗೂ ಮೆರವಣಿಗೆ, ಪಾದಯಾತ್ರೆ ಮಾಡಿದ ಸ್ವರೂಪ್ ಜೆಡಿಎಸ್ ಬೆಂಬಲಿಸುವAತೆ ಮನವಿ ಮಾಡಿದರು.
ಸ್ವರೂಪ್ ಹೋದಲೆಲ್ಲಾ ಪಟಾಕಿ ಸಿಡಿಸಿ ಹೂವಿನ ಹಾರಗಳನ್ನು ಹಾಕಿ ಅಭೂತಪೂರ್ವ ಸ್ವಾಗತ ಕೋರಿದರು. ಹೊಸಲೈನ್ ರಸ್ತೆ, ವಲ್ಲಭಾಯ್ ರಸ್ತೆ, ಹುಣನಸಿಕೆರೆ, ಚಿಕ್ಕನಾಳು, ಚಿಪ್ಪಿನಕಟ್ಟೆ ಬಡಾವಣೆಗಳಿಗೆ ತೆರಳಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು. ಸ್ವರೂಪ್ ಮತಯಾಚನೆಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ, ಪುಪ್ಪಾರ್ಚನೆ ಮಾಡಿ ಘೋಷಣೆ ಕೂಗಿ ಅದ್ಧೂರಿಯಾಗಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಸ್ವರೂಪ್, ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಮಾಡಿದ್ದೆ. ಇಂದು ನಗರದ ವಿವಿಧೆಡೆ ನಮ್ಮ ಪಕ್ಷದ ಮುಖಂಡರು, ಹಿರಿಯರು, ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದ್ದೇನೆ ಎಂದರು.
ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಪೂಜ್ಯರಾದ ದೇವೇಗೌಡರು, ಮಾಜಿ ಸಚಿವರಾದ ರೇವಣ್ಣ ಅವರು, ಕುಮಾರಣ್ಣ, ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿA ಎಲ್ಲರೂ ಸೇರಿ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ, ಒಮ್ಮತದಿಂದ ಕೆಲಸ ಮಾಡುತ್ತೇವೆ ಎಂದು ಹೇಳಿದರು. ನಾನು ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ನಮ್ಮ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆಯಾಗಬೇಕು. ಆ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬುದು ನಮ್ಮೆಲ್ಲರ ಗುರಿ ಮತ್ತು ಆಶಯವಾಗಿದೆ. ದೇವರು ಮತ್ತು ವರಿಷ್ಠರ ಆಶೀರ್ವಾದದಿಂದ ಯಾರಿಗೆ ಟಿಕೆಟ್ ಸಿಕ್ಕರೂ, ಒಟ್ಟಾರೆ ಜೆಡಿಎಸ್ ಗೆಲುವಿಗಾಗಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

LEAVE A REPLY

Please enter your comment!
Please enter your name here