ಹಾಸನ , ಶಿವಮೊಗ್ಗ , ವಿಜಯಪುರ  ಸೇರಿ ಸರಕಾರದಿಂದಲೇ ವಿಮಾನ ನಿಲ್ದಾಣಗಳ ನಿರ್ವಹಣೆ: ಸಚಿವ

0

ಹಾಸನ/ಬೆಂಗಳೂರು : ಮಹಾರಾಷ್ಟ್ರ ಮಾದರಿಯಂತೆಯೇ ಕರ್ನಾಟಕ ರಾಜ್ಯದಲ್ಲಿ 2ನೇ ಹಂತದ ನಗರಗಳಲ್ಲಿ ಕಾಮಗಾರಿಯಲ್ಲಿರುವ / ಕಾಮಗಾರಿಯಾದ ವಿಮಾನ ನಿಲ್ದಾಣಗಳ ಸ್ವತಃ ಸರಕಾರವೇ ಸಂಪೂರ್ಣವಾಗಿ ಮುನ್ನಡೆಸುವ ಬಗ್ಗೆ ಉನ್ನತ ಚಿಂತನೆ ನಡೆದಿದ್ದು, ಈ ಮೂಲಕ ಲಾಭ ಗಳಿಕೆ ಜತೆಗೆ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆಗಳನ್ನು ಒದಗಿಸಲು ಯೋಜಿಸಲಾಗಿದೆ., ಸದ್ಯ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ

ವಿಮಾನ ನಿಲ್ದಾಣಗಳ ಬಹುತೇಕ ನಿರ್ವಹಣೆಯನ್ನು ಖಾಸಗಿ ಕಂಪೆನಿ / ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವಹಿಸಲಾಗಿದ್ದು . ಇನ್ನು ಮುಂದೆ ಕಾರ್ಯಾರಂಭಗೊಳ್ಳುವ ನಮ್ಮ ‘ ಹಾಸನ ‘ ,  ಶಿವಮೊಗ್ಗ, ವಿಜಯಪುರ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ವೈಮಾನಿಕ ಸೇವೆ& ನಿರ್ವಹಣೆಯ ಸರ್ಕಾರವೇ ವಹಿಸಿ ನಿರ್ವಹಿಸಲು ಚಿಂತನೆ ನಡೆಸಿದ್ದು ಈ ಬಗ್ಗೆ

ಭಾರೀ& ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದು , ಶಿವಮೊಗ್ಗ ವಿಮಾನ ನಿಲ್ದಾಣ ಓಡಾಟಕ್ಕೆ ಸಿದ್ಧವಾಗಿದ್ದು . ನಿರ್ವಹಣೆಗೆ ಕೇಂದ್ರ ವಿಮಾನಯಾನ ನಿರ್ದೇಶನಾಲಯ ಒಪ್ಪಿಗೆ ಕೂಡ ಸಿಕ್ಕಿದೆ . ಅದೇ ರೀತಿ ನಿರ್ಮಾಣ ಹಂತದಲ್ಲಿ ಇರುವ ವಿಜಯಪುರ& ನಮ್ಮ ‘ ಹಾಸನ ‘ ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡುವ ಚಿಂತನೆ ಸರ್ಕಾರ ಮಾಡಿದೆ . ಈಗಾಗಲೇ

ಖಾಸಗಿ- ಸಾರ್ವಜನಿಕ ಸಹಭಾಗಿತ್ವ (PPP)ದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಿ, ಅವುಗಳ ಕಾರ್ಯಾಚರಣೆ& ನಿರ್ವಹಣೆಯನ್ನು ಕೆಲವು ಕಂಪೆನಿಗಳಿಗೆ ವಹಿಸಲಾಗುತ್ತಿತ್ತು . ಇನ್ನು ಕೆಲವು ವೇಳೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವಹಿಸಲಾಗುತ್ತಿತ್ತು . ಸರಕಾರವೇ ವಹಿಸಿಕೊಳ್ಳುವುದರಿಂದ ನೇರವಾಗಿ ಮತ್ತು ಪರೋಕ್ಷವಾಗಿ ಸರಕಾರಕ್ಕೇ ಆದಾಯ ಬರಲಿದೆ . & ಪ್ರಯಾಣಿಕರಿಗೆ ಇನ್ನೂ ಉತ್ತಮ ಪಾರದರ್ಶಕ ಸೇವೆಗಳ ನೀಡಬಹುದು ಎಂದು ಅಂದಾಜಿಸಲಾಗಿದೆ . , ಪ್ರಸ್ತುತ

ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್‌, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಐಎಎಲ್‌ಗೆ, ಹುಬ್ಬಳ್ಳಿ, ಕಲಬುರಗಿ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದ್ದು . ಸರಕಾರವೇ ನಿರ್ವಹಣೆ ಮಾಡುವುದಾದರೂ,

ವೈಮಾನಿಕ ಸಂಚಾರ ನಿಯಂತ್ರಣ (ATC), ನೇವಿಗೇಷನ್‌ ಸಂವಹನ ವ್ಯವಸ್ಥೆಗೆ ಪ್ರಾಧಿಕಾರದ ಮೊರೆ ಹೋಗಬೇಕಾಗಿರೋದು ಅನಿವಾರ್ಯ ಎಂದು ಮೂಲಗಳು ಹೇಳುತ್ತವೆ

LEAVE A REPLY

Please enter your comment!
Please enter your name here