ನವಜೀವನೋತ್ಸವ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ

0

ಇಂದು ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಹಾಸನ ಜಿಲ್ಲೆಯ ಹಾಸನ ಮತ್ತು ಶಾಂತಿ ಗ್ರಾಮ ಯೋಜನಾ ವ್ಯಾಪ್ತಿಯ ನವಜೀವನೋತ್ಸವ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರುಗಿತು, ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಸಂಗಮೇಶ್ವರ ಸ್ವಾಮೀಜಿಗಳು, ಜಾವೇನ ಹಳ್ಳಿ ಮಠ, ಹಾಸನ ಇವರು ವಹಿಸಿದರು,ಇವರು ಆಶೀರ್ವಾಚನ ಮಾಡಿ ಸರಕಾರ ಮಾಡುವ ಕೆಲಸವನ್ನು ಪರಮ ಪೂಜ್ಯರು ಮಾಡಿದರಿಂದ ನೀವೂ ಇಲ್ಲಿ ಬಂದು ಕುಳಿತು ಕೊಳ್ಳುವ ಯೋಗ ಬಂದಿದೆ ಇನ್ನೂ ಮುಂದೆ ನಿಮ್ಮ ಜೀವನದಲ್ಲಿ ಸುಖವಾಗಿ ಇರಲಿ ಎಂದು ಆಶೀರ್ವಾದ ನೀಡಿರುತ್ತಾರೆ,ಕಾರ್ಯಕ್ರಮದ ಉದ್ಘಾಟನೆಯನ್ನು

ಶ್ರೀ ಎಚ್ ಪಿ ಮೋಹನ, ಜಿಲ್ಲಾ ಸಭಾಪತಿಗಳು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಇವರು ಜ್ಯೋತಿ ಬೆಳಗಿಸಿದುರ ಮೂಲಕ ಉದ್ಘಾಟನೆ ಮಾಡಿ ಧರ್ಮಸ್ಥಳದ ಈ ಕಾರ್ಯಕ್ರಮ ಅನುಕರಣಿಯ ಕಾರ್ಯಕ್ರಮ ಈ ಕಾರ್ಯಕ್ರಮದ ಸದುಪಯೋಗ ಪಡಿಸಿ ಕೊಳ್ಳುವಂತೆ ತಿಳಿಸಿದರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದೇವು ತಾಲೂಕು ನವಜೀವನ ಸಮಿತಿ ಅಧ್ಯಕ್ಷರು ವಹಿಸಿಕೊಂಡು ಈ ಶಿಬಿರದಿಂದ ನನ್ನಂತ ಸಾವಿರಾರು ಜನರಿಗೆ ಬದುಕು ಕೊಟ್ಟಿದೆ ನಾಯಕತ್ವ ನೀಡಿದೆ ಈ ಕಾರ್ಯಕ್ರಮ ನಾವೂ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿರುತ್ತಾರೆ, ಈ ಕಾರ್ಯಕ್ರಮದಲ್ಲಿ

ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರು ಶ್ರೀ ಬಿ ಜಯರಾಮ ನೆಲ್ಲಿತ್ತಾಯ ಸರ್ ಅವರು ಆಶಯ ಭಾಷಣ ಮಾಡಿ ಶಿಬಿರದಿಂದ ನೀವೂ ಉತ್ತಮ ಜೀವನ ಸಾಗಿಸುತ್ತಾ ಇದ್ದೀರಿ, ಮುಂದೆ ಸಹ ನಿಮ್ಮಂತೆ ಉತ್ತಮ ಜೀವನ ಸಾಗಿಸಲು ನೀವೂ ಪ್ರೆರಣೆ ನೀಡಬೇಕು ಎಂದು ತಿಳಿಸಿದರು, ಕಾರ್ಯಕ್ರಮದ ವೇದಿಕೆಯಲ್ಲಿ ಡಾಕ್ಟರ್ ನವೀನ್ ಚಂದ್ರ ಶೆಟ್ಟಿ, ಅಧ್ಯಕ್ಷರು ಜಿಲ್ಲಾ ಜನಜಾಗ್ರತಿ ವೇದಿಕೆ, ಹಾಸನ ಜಿಲ್ಲೆ, ಶ್ರೀಮತಿ ಮಮತ ಹರೀಶ್ ರಾವ್ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೆತ್ರ ಧ.ಗ್ರಾ. ಯೋ. ಬಿ. ಸಿ. ಟ್ರಸ್ಟ್ (ರಿ )ಹಾಸನ, ಶ್ರೀ ಸುರೇಶ ಗುರೂಜಿ, ಯೋಗ ಶಿಕ್ಷಕರು ಮತ್ತು ವ್ಯಕ್ತಿತ್ವ ವಿಕಾಸನ ತರಬೇತುದಾರರು, ಶ್ರೀ ರವಿ ಕುಮಾರ್ ಬಲ್ಲೆನಹಳ್ಳಿ ಜಿಲ್ಲಾ ಮೇಲ್ವಿಚಾರಕರು, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ, ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯರಾದ ಶ್ರೀ ಮಹೇಶ್ ಬಂದು, ಶ್ರೀಮತಿ ಕಾಂಚನ ಮಾಲಾ, ಶ್ರೀ ತುಳಸಿ ರಾಮ, ಶ್ರೀ ರಮೇಶ, ಶ್ರೀ ಮಲ್ಲಿಕಾರ್ಜುನ, ಶ್ರೀ ವಿಜಯಕುಮಾರ, ಶ್ರೀ ಜೀವನ್.ಕೆ, ಶ್ರೀ ಪ್ರೇಮ ಕುಮಾರ್ ಜೈನ ಸರ್ ಉಪಸ್ಥಿತರಿದ್ದರು ಬೆಳಿಗ್ಗೆ ಬಂದ ನವಜೀವನ ಸಮಿತಿ ಸದಸ್ಯರಿಗೆ ಮತ್ತು ಅವರ ಮನೆಯವರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು, ವಿಜೇತರಾದ

ನವಜೀವನ ಬಂದುಗಳಿಗೆ, ಅವರ ಮನೆಯವರಿಗೆ ಬಹುಮಾನ ವಿತರಣೆ ಮಾಡಲಾಯಿತು, ನವಜೀವನ ಸಮಿತಿ ಸದಸ್ಯರಿಗೆ ಪ್ರಾದೇಶಿಕ ನಿರ್ದೇಶಕರು ಪ್ರಮಾಣ ಪತ್ರ, ಬ್ಯಾಡ್ಜ್ ವಿತರಣೆ ಮಾಡಿರುತ್ತಾರೆ,ಮತ್ತು ಯಶಸ್ವಿ ನವಜೀವನ ಸಮಿತಿ ಸದಸ್ಯರಾದ ಚೆನ್ನಕೇಶವ, ಅನಂತು ಅವರನ್ನು ಗೌರವಿಸಲಾಯಿತು,ಎರಡು ತಾಲೂಕಿನ ಯೋಜನಾಧಿಕಾರಿಗಳು ಶ್ರೀ ಪುರೊಷೋತ್ತಮ, ಶ್ರೀ ನವೀನ್ ಸರ್ ಸಹಕರಿಸಿದರು ಕಾರ್ಯಕ್ರಮದಲ್ಲಿ ನವಜೀವನ ಸದಸ್ಯರು, ಅವರ ಕುಟುಂಬಸ್ಥರು, ಪೋಷಕರು, ಜನಜಾಗ್ರತಿ ಯೋಜನಾಧಿಕಾರಿಗಳು, ಶಿಬಿರಧಿಕಾರಿ, ಅರೋಗ್ಯ ಸಹಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here