ಜಿಲ್ಲೆಯ ಪ್ರತಿ ತಾಲ್ಲೂಕು ವ್ಯಾಪ್ತಿಯ ಒಂದು ಗ್ರಾಮದಂತೆ ನಾಳೆ ಮಾ.20 ರಂದು ಗ್ರಾಮ ವಾಸ್ತವ್ಯ ಜರುಗಲಿದ್ದು ಜಿಲ್ಲಾಧಿಕಾರಿ ಅವರು ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯ ಹಂಪಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ #gramavastavya #hassadc

0

ಹಾಸನ.ಮಾ.19 (ಹಾಸನ್_ನ್ಯೂಸ್ !,
ಇದೇ ರೀತಿ ಆಯಾಯ ತಹಸೀಲ್ದಾರ್‍ರರು ತಮ್ಮತಾಲ್ಲೂಕು ವ್ಯಾಪ್ತಿಯ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.  ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿಯ  ಬೈಲಹಳ್ಳಿ ಗ್ರಾಮ, ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಕೊಳಗುಂದ ಗ್ರಾಮ, ಹೊಳೆನರಸೀಪುರ ತಾಲ್ಲೂಕಿನ ಕಸಬಾ ಹೋಬಳಿಯ ಗುಂಜೇವು ಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ತಾವರೆಕೆರೆ ಗ್ರಾಮ, ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯ ಹಂಪಾಪುರ ಗ್ರಾಮ ,ಸಕಲೇಶಪುರ ತಾಲ್ಲೂಕಿನ ಕಸಬಾ ಹೋಬಳಿ ಬ್ಯಾಕರವಳ್ಳಿ ಗ್ರಾಮ,  ಬೇಲೂರು ತಾಲ್ಲೂಕಿನ ಬಿಕ್ಕೊಡು ಹೋಬಳಿಯ ಲಕ್ಕುಂದ ಗ್ರಾಮ ಹಾಗೂ  ಆಲೂರು ತಾಲ್ಲೂಕಿನ ಕೆ. ಹೊಸಕೋಟೆ ಹೋಬಳಿಯ ವೈ ಎನ್ ಪುರ ಗ್ರಾಮದಲ್ಲಿ ತಾಲ್ಲೂಕು ತಹಸೀಲ್ದಾರ್‍ಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮ ವನ್ನೂ ಹಮ್ಮಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here