ಮ್ಯಾನ್ಯು ವಲ್ ಸ್ಕ್ಯಾ ವೆಂಜಿಗ್ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಿ -ಜಿಲ್ಲಾಧಿಕಾರಿ ಆರ್. ಗಿರೀಶ್

0

ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ
ಹಾಸನ ಮಾ. 20 (ಹಾಸನ್_ನ್ಯೂಸ್ !,

ಜಿಲ್ಲಾಧಿಕಾರಿಗಳ  ಸಭಾಂಗಣದಲ್ಲಿ ಮ್ಯಾನ್ಯು ವಲ್ ಸ್ಕ್ಯಾವೆಂಜಿಂಗ್  ಮತ್ತು ಅದರ  ಪುನರ್ವಸತಿ ಅಧಿನಿಯಮ 2013 ರ ಅನ್ವಯ  ಜಿಲ್ಲಾಮಟ್ಟದ ಜಾಗೃತಿ ಸಮಿತಿ   ಸಭೆ ನಡೆಸಿ ಮಾತನಾಡಿದ ಅವರು ಸಫಾಯಿ ಕರ್ಮಚಾರಿಗಳು  ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಸ್ಥಳಗಳಲ್ಲಿ   ಕ್ಯಾಂಪ್ ಗಳನ್ನು ಮಾಡಿ,   ಸ್ವಯಂ ಘೋಷಿತವಾಗಿ ಸ್ಥಳೀಯವಾಗಿ  ಘೋಷಣೆ ಹಾಗೂ ಗ್ರಾಮ   ಪಂಚಾಯಿತಿ ವಾಹನಗಳ ಮೂಲಕ ಟಾಮ್ ಟಾಮ್ ಮಾಡಿಸಿ  ಎಂದರಲ್ಲದೆ ಸ್ವಯಂ  ಪ್ರೇರಿತವಾಗಿ ಅರ್ಜಿ ನೀಡುವಂತೆ ಅವರಿಗೆ  ಮನವೊಲಿಸಿ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಚರಂಡಿ/ ಶೌಚ ಗುಂಡಿಗಳ ಸ್ವಚ್ಚತೆಗಾಗಿ ಅಗತ್ಯ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರಗಳನ್ನು ಹೊಂದಲಾಗಿದ್ದು, ಸದರಿ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರಗಳ ಮೂಲಕವೇ ಶೌಚ ಗುಂಡಿಗಳನ್ನು ಸ್ವಚ್ಚಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಮ್ಯಾನ್ಯುವಲ್   ಸ್ಕ್ಯಾವೆಂಜರ್ಸ್‍ಗಳು ಮತ್ತು  ಸಫಾಯಿ ಕರ್ಮಚಾರಿಗಳ   ಸಮೀಕ್ಷೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಿ  ಎಂದು  ಆರ್. ಗಿರೀಶ್  ಹೇಳಿದರು.

ಮ್ಯಾನ್ಯುವಲ್ ಸ್ಕ್ಯಾವೆಂಜಿಗ್  ನಿಷೇಧ ಹಾಗೂ  ಮ್ಯಾನ್ಯುವಲ್ ಸ್ಕ್ಯಾವೆಂಜರ್ ಗಳ  ಬಳಕೆ ಶಿಕ್ಷಾರ್ಹ ಅಪರಾಧ ಎಂಬುದರ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಕರಪತ್ರ ಮುದ್ರಿಸಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಮಾ. 22   ರಿಂದ 30ರ ವರೆಗೆ ಹೆಚ್ಚಿನ ಪ್ರಚಾರ ಕೈಗೊಳ್ಳಿ, ಹಾಗೂ  ಏಪ್ರಿಲ್ 1 ರಿಂದ  ಸರ್ವೆ  ಕ್ಯಾಂಪ್ ಮಾಡಿ ಎಂದು ಅಧಿಕಾರಿಗಳಗೆ ಸೂಚಿಸಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಬಿ.ಎ ಜಗದೀಶ್, ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿಯ  ಮುಖ್ಯ ಯೋಜನಾಧಿಕಾರಿಗಳಾದ  ನಾಗರಾಜ್,  ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ  ಮಂಜುನಾಥ್,   ಮತ್ತಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here