ಹಾಸನ: ಹೃದಯಾಘಾತದಿಂದ ಸಬ್ಇನ್ಸ್ಪೆಕ್ಟರ್ ಮಾದನಾಯಕ್ (52) ಮೃತಪಟ್ಟಿದ್ದಾರೆ. ಹಾಸನ ನಗರಠಾಣೆ ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಆಗಿದ್ದ ಮಾದನಾಯಕ್ ಪ್ರಕರಣವೊಂದರ ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಿ ನಂತರ
ಜೈಲಿಗೆ ಬಿಟ್ಟು ಮನೆಗೆ ತೆರಳಿದ್ದರು. ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಬ್ಇನ್ಸ್ಪೆಕ್ಟರ್ ನಿಧನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.