ಹಾಸನ: ಜಿಲ್ಲೆಯ ಅರಕಲಗೂಡು, ಅರೇಹಳ್ಳಿ, ಜಾವಗಲ್, ಪೆನ್ಷನ್ ಮೊಹಲ್ಲಾ, ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದ್ದ ಗಾಂಜಾವನ್ನು ನಗರದ ಕೈಗಾರಿಕಾ ಪ್ರದೇಶದಲ್ಲಿನ ಡ್ರಗ್ ಡೆಸ್ಟ್ರಾಯ್ ಕಮಿಟಿ ಮತ್ತು
ಕರ್ನಾಟಕ ರಾಜ್ಯ ಮಾಲಿನ್ಯ ವೈಜ್ಞಾನಿಕ ಘಟಕದಲ್ಲಿ ಎಸ್ಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಗಾಂಜಾ ನಾಶ ಮಾಡಲಾಯಿತು , 14.81 ಲಕ್ಷ ಮೌಲ್ಯದ 112.209 ಕೆ.ಜಿ. ಗಾಂಜಾ ಇತ್ತು , ಗಾಂಜಾ ಮಾರಾಟದ ಹಿನ್ನೆಲೆಯಲ್ಲಿ ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ ಪೇಪರ್ ಪ್ಲೇಟ್ ವರ್ಕ್ಸ್ ಬೀರಲಿಂಗೇಶ್ವರ ಎಣ್ಣೆ ಮಿಲ್ ಬಿಲ್ಡಿಂಗ್ ಕೋಟೆಯ ಹೃತ್ವಿಕ್ ಎಸ್.ಆರ್, ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಮದ್ ಅಸಾದುಲ್ಲಾ ಇಸ್ಲಾಂ, ಜಾವಗಲ್ ಠಾಣಾ ವ್ಯಾಪ್ತಿಯ ಆರುಣ್, ನಗರದ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯ ಇಮಾನ್, ಬಾಣಾವರ ಠಾಣಾ ವ್ಯಾಪ್ತಿಯ ಸಂತೋಷ್ ಎಂಬುವವರನ್ನು ಈ ಹಿಂದೆ ವಿವಿಧೆಡೆ ಬಂಧಿಸಲಾಗಿತ್ತು. ಇವರಿಂದ
ಈ ಗಾಂಜಾ ವಶಕ್ಕೆ ಪಡೆಯಲಾಗಿತ್ತು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ
ಮನವಿ : ನಿಮ್ಮ ಸುತ್ತಮುತ್ತ ಇತರೆ ಕಾನೂನು ಬಾಹಿರ ಚಟುವಟಿಕೆ / ಮಾದಕ ವಸ್ತುಗಳ ಸಾಗಣೆ ನಡೆಯುತ್ತಿದ್ದರೆ 112 ಕರೆಮಾಡಿ ತಿಳಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಿ ( ಇದು ಟೀಂ ಹಾಸನ್ ನ್ಯೂಸ್ ಕರೆ )