ಪ್ರೀತಿಸಿದ ಯುವತಿಯಿಂದ ಮೋಸ ಆರೋಪ , ಹಾಸನದ ಯುವಕ ಚೆನ್ನೈ ನ ಲಾಡ್ಜ್ ನಲ್ಲಿ ಆತ್ಮಹತ್ಯೆ

0

ಹಾಸನ:  ಪ್ರೀತಿಸಿದ ಯುವತಿಯಿಂದ ಮೋಸ ಆರೋಪ , ಹಾಸನದ ಯುವಕ ಚೆನ್ನೈ ನ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ , ಹಾಸನ ನಗರದ ಸಂಗಮೇಶ್ವರ ಬಡಾವಣೆಯ ಕಾರ್ತಿಕ್ (26ವರ್ಷ ) ಮೃತ ಯುವಕನಾಗಿದ್ದು , ಕಳೆದ ನಾಲ್ಕು ವರ್ಷಗಳಿಂದ ಹೊಳೆನರಸೀಪುರ ತಾಲ್ಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ , ಜನವರಿ 27 ರಂದು ಮೊನ್ನೆ ತಾನು ಚೆನ್ನೈ ಲಿದ್ದು ಅಲ್ಲಿಗೇ ಬರುವಂತೆ ಕರೆದಿದ್ದ ಯುವತಿ? ,

ಆಕೆಯ ಮಾತು ನಂಬಿ ಚೆನ್ನೈ ಗೆ ಹೋಗಿದ್ದ ಕಾರ್ತಿಕ್ ಆಗಿದ್ದು ಆಘಾತ , ಚೆನ್ನೈ ಗೆ ಹೋದ ಬಳಿಕ ತಾನು ಹಾಸನದಲ್ಲೇ ಇರೋದಾಗಿ ಹೇಳಿದ್ದ ಯುವತಿ? ಯುವತಿ ತನಗೆ ಮೋಸ ಮಾಡಿದ್ದಾಳೆಂದು ಮನನೊಂದು ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿಬಿಟ್ಟ ಯುವಕ , ಯುವಕನ ಶವ ಇಂದು 31 ಜ. ಹಾಸನ ನಗರದ ಸ್ವಗೃಹದಲ್ಲಿಬೆಳಿಗ್ಗೆ ತರಲಾಯಿತು , ಹಾಸನದ ಪ್ರತಿಷ್ಠಿತ ಹೊಟೆಲ್ ನಲ್ಲಿ ರಿಸೆಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ,

ಯುವತಿ ಹುಡುಗನ ನಂಬಿಸಿ ಮೋಸಮಾಡಿದ್ದಾಳೆ ಎಂದು ಯುವಕನ ಕುಟುಂಬ ಸದಸ್ಯರ ಆರೋಪಿಸಿದ್ದು ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ  , ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಆಗ್ರಹಿದ್ದು , ಚೆನ್ನೈ ನ ಆರಂಬಕ್ಕಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಘಟನೆ ನಡೆದಿದೆ , ಇಂದು ಹಾಸನಕ್ಕೆ ಆಗಮಿಸಿದ ಯುವಕನ ಮೃತದೇಹಕ್ಕೆ

ಸಂಬಂಧಿಕರು , ಸ್ನೇಹಿತರು ಆಕ್ರಂದನ ವ್ಯಕ್ತಪಡಿಸಿದರು , ನಾಲ್ಕು ವರ್ಷಗಳಿಂದ ಪ್ರೀತಿಸಿ ಕೈ ಕೊಟ್ಟಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ ಇನ್ನಿಲ್ಲ

LEAVE A REPLY

Please enter your comment!
Please enter your name here