ಉದಯವಾಣಿ ಪತ್ರಿಕೆ ಹಾಸನ ಜಿಲ್ಲೆಯ ವರದಿಗಾರ ಸುಧೀರ್ ಭಟ್ ರಿಗೆ ಗಣ ರಾಜ್ಯೋತ್ಸವದಲ್ಲಿ ಗೌರವ ಸಮರ್ಪಣೆ

0

ಇಂದು ಸಕಲೇಶಪುರದಲ್ಲಿ ನಡೆದ ಗಣ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಉದಯವಾಣಿ ಪತ್ರಿಕೆಯ ಸಕಲೇಶಪುರದ ವರದಿಗಾರರಾದ ಸುಧೀರ್ ಭಟ್ ಹಾಗೂ ಇನ್ನಿತರ ಹಲವಾರು ಮಂದಿಯನ್ನು ಸನ್ಮಾನ ಮಾಡಿ ಗೌರವಿಸಲಾಗಿದೆ.

ಪತ್ರಿಕಾ ರಂಗದಲ್ಲಿ ಕೆಲಸ ಮಾಡೋದು ಅಷ್ಟು ಸುಲಭದ ಮಾತಲ್ಲ. ತಾಳ್ಮೆ, ಪರಿಶ್ರಮ, ಉತ್ತಮ ಗುಣ ಎಲ್ಲಾ ಮೈ ಗೂಡಿಸಿ ಕೊಂಡಿರಬೇಕು. ಇಷ್ಟೆಲ್ಲಾ ಇದ್ದರೂ ಚುನಾವಣೆ ಬಂದಾಗ ರಾಜಕೀಯ ಮೇಲಾಟದಲ್ಲಿ ಬಹಳ ಸಂಕಷ್ಟ ಪಡ ಬೇಕಾಗುತ್ತದೆ.

ಇವೆಲ್ಲವನ್ನೂ ಮೀರಿ ಸುಧೀರ್ ಭಟ್ರು ಕಳೆದ 10 ವರ್ಷಗಳಿಂದ ಓರ್ವ ಯಶಸ್ವೀ ಪತ್ರಕರ್ತನಾಗಿ ಸಾಧನೆ ಮಾಡಿದ್ದಾರೆ.

ಇಂದು ಅವರನ್ನು ಶಾಸಕ ಹೆಚ್ ಕೆ ಕುಮಾರ ಸ್ವಾಮಿ, ಉಪ ವಿಭಾಗ ಅಧಿಕಾರಿ ಅನ್ ಮೋಲ್ ಜೈನ್, ಎ ಎಸ್ ಪಿ ಮಿಥುನ್, ತಹಸೀಲ್ದಾರ್ ಮೇಘನಾ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ. ವೆಂಕಟೇಶ್ ಸೇರಿ ಸನ್ಮಾನ ಮಾಡಲಾಗಿದೆ.

ಸಮಾಜ ಮುಖಿಯಾಗಿರುವ ಅವರಿಗೆ ಹಾಸನ ನ್ಯೂಸ್ ಡಿಜಿಟಲ್ ಬಳಗ ಅಭಿನಂದನೆಗಳನ್ನು ಸಲ್ಲಿಸುತ್ತದೆ

LEAVE A REPLY

Please enter your comment!
Please enter your name here