ಹಾಸನ: ರಾಜ್ಯದಲ್ಲಿ ನಡೆಯುತ್ತಿರುವ ಪೇ ಸಿಎಂ ಅಭಿಯಾನ ಇದೀಗ ಹಾಸನಕ್ಕೂ ವಿಸ್ತರಿಸಿದೆ. ಆದರೆ ಇಲ್ಲಿ ಸಿಎಂ ವಿರುದ್ಧ ಅಲ್ಲ, ಬದಲಾಗಿ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರ ವಿರುದ್ಧ ಪೇ ಎಂಎಲ್ಎ, 50% ಅಕ್ಸೆಪ್ಟೆಡ್ ಹಿಯರ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಅಪ್ಲೋಡ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೇ ಎಂಎಲ್ಎ ಎಂಬ ಪೋಸ್ಟ್ಗಳನ್ನು ಅಪ್ಲೋಡ್ ಮಾಡಲಾಗಿದೆ.
ಶಾಸಕ ಪ್ರೀತಂಗೌಡ ವಿರುದ್ಧ 50% ಕಮೀಷನ್ ಪೇ ಎಂಎಲ್ಎ ಎಂಬ ಪೋಸ್ಟ್ ಡಾ.ಸೂರಜ್ರೇವಣ್ಣ ದೊಡ್ಮನೆ ಹುಡುಗ ಎಂಬ ಫೇಸ್ಬುಕ್ ಪೇಜ್ನಿಂದ ಅಪ್ಲೋಡ್ ಮಾಡಲಾಗಿದೆ.
ಇದಕ್ಕೆ
ಕೆಲ ಸಾಮಾಜಿಕ ಕಾರ್ಯಕರ್ತರೂ ಸಹ ಪೇ ಎಂಎಲ್ಎ ಎಂದು ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಈ ಬಗ್ಗೆ ದೂರು:
50% ಪೇ ಎಂಎಲ್ಎ ಪೋಸ್ಟ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು, ಈ ಸಂಬಂಧ ನಗರಠಾಣೆ ಪೊಲಿಸರಿಗೆ ದೂರು ನೀಡಿದ್ದಾರೆ. ಶಾಸಕ ಭಾವಚಿತ್ರ ಬಳಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ದುರುದ್ದೇಶದಿಂದ ಶಾಸರನ್ನು ಕೆಟ್ಟದ್ದಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಈ ಪೋಸ್ಟ್ ಈಗಾಗಲೇ ಅನೇಕ ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. ಭಿತ್ತಿಪತ್ರದ ಕೆಳಗಡೆ
ಒಂದು ಫೋನ್ ನಂಬರ್ ಇದ್ದು, ಅದಕ್ಕೆ ಕರೆ ಮಾಡಿದರೆ, ಕಾಂಗ್ರೆಸ್ ಕೇಂದ್ರ ಕಚೇರಿ ದೆಹಲಿ ಎಂದು ಕಾಲರ್ಟೋನ್ನಲ್ಲಿ ತೋರಿಸುತ್ತಿದೆ.
ಶಾಸಕರ ಮೇಲೆ ಸುಳ್ಳು ಆರೋಪ ಮಾಡಿ, ಹಾಸನದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯ ಹಾಗೂ ಪ್ರೀತಂಗೌಡ ಅವರ ಜನಪ್ರಿಯತೆ ಸಹಿಸದೆ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.
ಕಳೆದ ಇಪ್ಪತ್ತು ವರ್ಷದಿಂದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಆಗದ ಅಭಿವೃದ್ಧಿ ಕೆಲಸಗಳನ್ನು ಶಾಸಕ ಪ್ರೀತಂಗೌಡ ಮಾಡಿದ್ದಾರೆ. ಇದನ್ನು ಸಹಿಸದ ಕೆಲವರು, ಪೇ ಎಂಎಲ್ಎ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಒತ್ತಾಯಿಸಿದರು.
ಇದೇ ವೇಳೆ ಪೇ ಎಂಎಲ್ಎ ಪೋಸ್ಟ್ ವಿರುದ್ಧ
ಪ್ರೌಡ್ ಎಂಎಲ್ಎ 100%, ಎಗೈನ್ ಎಂಎಲ್ಎ ಅಭಿಯಾನ ಆರಂಭವಾಗಿದೆ. ಹಾಸನದ ಜನಮನ ಗೆದ್ದ ಫರ್ಫೆಕ್ಟ್ ಎಂಎಲ್ಎ, ಹಾಸನ ಕಂಡ ಅಭಿವೃದ್ಧಿ ಹರಿಕಾರ ಎಂಬ ಪೋಸ್ಟ್ ನ್ನು ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.