ಹಾಸನ / ಮಡಿಕೇರಿ / ಜಾರ್ಖಂಡ್ : ಜೂನಿಯರ್ ನ್ಯಾಷನಲ್ಸ್ ಹಾಕಿಯಲ್ಲಿ ಹಾಸನದ ವಿದ್ಯಾರ್ಥಿನಿ
ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಪಟುಗಳಲ್ಲಿ ಹಾಸನದ ಪ್ರತಿಭಾನ್ವಿತ ಹಾಕಿ ಪಟು ಲಿಖಿತಾ ಎಸ್ ಪಿ D/O ಪ್ರಕಾಶ್ ಎಸ್ ಎಲ್ ಶಾಂತಿಗ್ರಾಮ , ಹಾಸನ ತಾ. ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಓದುತ್ತಿರುವ ತೃತೀಯ BA ವಿದ್ಯಾರ್ಥಿನಿ ಲಿಖಿತಾ ರಾಜ್ಯ ತಂಡವನ್ನು ಇದೇ ಅಕ್ಟೋಬರ್ ನಲ್ಲಿ ಜಾರ್ಖಂಡ್ ನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾವಳಿ ಟೂರ್ನಮೆಂಟ್ ನಲ್ಲಿ ಪ್ರತಿನಿಧಿಸುತ್ತಿದ್ದಾರೆ .,ಹಾಸನ ಜಿಲ್ಲೆಯ ಪ್ರತಿಭಾವಂತ ಹೆಮ್ಮೆಯ ಪುತ್ರಿ ಲಿಖಿತಾ ಅವರಿಗೆ ಹಾಸನ ಜನತೆ ಹಾಗೂ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳು ಹಾಗೂ ಶುಭ ಕೋರುತ್ತ ಇನ್ನಷ್ಟು ಸಾಧನೆ ಮಾಡಲೆಂದು ಆಶೀಸೋಣ
• ಕಳೆದ ಹಲವು ವರ್ಷಗಳಿಂದ ಹಾಸನದ ಲಿಖಿತಾ ಸೇರಿ ಮಡಿಕೇರಿಯ 7 ಮಂದಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದಾರೆ .
ಈ ಭಾವಚಿತ್ರದಲ್ಲಿರುವ ವಿದ್ಯಾರ್ಥಿಗಳು ಈ ಹಿಂದೆ ನಡೆದ ದೆಹಲಿ , ಹರಿಯಾಣ , ಅಸ್ಸಾಂ , ಕೇರಳ ದಂತಹ ಹತ್ತಕ್ಕು ಹೆಚ್ಚು ರಾಜ್ಯ ರಾಷ್ಟ್ರ ಮಟ್ಟದ ಹಾಕಿ ಟೂರ್ನಿಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಹೆಮ್ಮೆತಂದಿದ್ದಾರೆ .,
ಕೋವಿಡ್ ಭೀತಿಯಿಂದ ಕಳೆದ ವರ್ಷವೇ ನಡೆಯ ಬೇಕಿದ್ದ ಟೂರ್ನಿ ಈ ತಿಂಗಳು ನಡೆಯುತ್ತಿದ್ದು ., ಕಳೆದ ಸೆಪ್ಟೆಂಬರ್ ನಿಂದ ಮುಂದಿನ ರಾಜ್ಯ ಮಟ್ಟದಲ್ಲಿ ಗೆದ್ದು ರಾಜ್ಯದ ಕೀರ್ತಿ ಪತಾಕೆ ಹಾರಿಸಬೇಕೆಂದ ಪಣತೊಟ್ಟಿರುವ ಕೋಚ್ ನಾಗಲಿಂಗ ಸ್ವಾಮಿಗೆ ಒಂದೊಳ್ಳೆ ತಂಡ ತಯಾರಿದೆ ಹಾಗೂ ವಿಶೇಷವಾಗಿ ಹಾಸನ ಲಿಖಿತಾ ಎಸ್ ಪಿ ಅವರ ಅಗ್ರೆಸಿವ್ ಆಟದ ಮುಖೇನ ಎಲ್ಲಾ ನಮ್ಮ ಹಾಕಿ ತಂಡದ ವಿದ್ಯಾರ್ಥಿನಿಯರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಠಿಣ ತಾಲೀಮಿನಲ್ಲಿ ಮುಳುಗಿದ್ದು ಕರ್ನಾಟಕ ಹಾಕಿ ಅಸೋಸಿಯೇಷನ್ ಇವರ ವಿಶೇಷ ತರಬೇತಿಯ ನೆರವಿಗೆ ನಿಂತಿದೆ .
ಗೆದ್ದು ಬನ್ನಿ ಲಿಖಿತಾ ಮತ್ತು ತಂಡ ನಮ್ಮ ಕರ್ನಾಟಕ ನಮ್ಮ ಹೆಮ್ಮೆ
#hassansportsnews #sportsnewshassan #likithasp