ಮುಂದಿನ ವರ್ಷ ನ.2-11-2023 ರಿಂದ ನ.15-11-2023 ರವರೆಗೆ 14ದಿನ ಹಾಸನಾಂಬೆ ಜಾತ್ರಾ ಮಹೋತ್ಸವ

0

ಶಾಸ್ತ್ರೋಕ್ತವಾಗಿ ಮುಚ್ಚಿದ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು. ಮಧ್ಯಾಹ್ನ 12.47 ಕ್ಕೆ ಮುಚ್ಚಿದ ಗರ್ಭಗುಡಿ ಬಾಗಿಲು. ಮುಂದಿನ ವರ್ಷ ನ.2-11-2023 ರಿಂದ ನ.15-11-2023 ರವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ.

ಕಾಡಾನೆ ದಾಳಿ ವ್ಯಕ್ತಿಗೆ ಗಂಭೀರ ಗಾಯ: ಚಿಂತಾಜನಕ ಸ್ಥಿತಿಯಲ್ಲಿ ರೈತ ದೇವರಾಜ್

ಸಕಲೇಶಪುರ : ತೋಟಕ್ಕೆ ಹೋಗುವಾಗ ಕಾಡಾನೆ ಒಂದು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ತಾಲೂಕಿನ ಗಡಿಗ್ರಾಮ ನಿಡನೂರು ಗ್ರಾಮದ ದೇವರಾಜು (50) ರವರು ಎಂದಿನಂತೆ ಕಾಫಿ ತೋಟಕ್ಕೆ ತೆರಳುತ್ತಿದ್ದಾಗ ಏಕಾಏಕಿ ಎದುರಾದ ಕಾಡಾನೆ ಅವರ ಮೇಲೆ ದಾಳಿ ನಡೆಸಿದೆ. ಇದರಿಂದ

ಗಂಭೀರ ಗಾಯಗೊಂಡ ಅವರನ್ನು ಆಲೂರು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮುಖದ ಭಾಗಕ್ಕೆ ಹೆಚ್ಚಿನ ಗಾಯವಾಗಿದ್ದು ದೇವರಾಜು ರವರು ಮಾತನಾಡುತ್ತಿಲ್ಲ ಎಂದು ತಿಳಿದು ಬಂದಿದೆ.
ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಷ್ಟದ ಜೊತೆಗೆ ಮನುಷ್ಯರ ಮೇಲು ದಾಳಿ ನೆಡೆಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ.

LEAVE A REPLY

Please enter your comment!
Please enter your name here