ಬಾರ್ ಮುಂದೆ ಹಲ್ಲೆ ಪ್ರಕರಣದಲ್ಲಿ ಎರಡು ಕಾಲಿಗೆ ಮಚ್ಚಿನ ಏಟು ತಗುಲಿ ಗಾಯಗೊಂಡಿದ್ದ ಕುಮಾರ್

0

ಹಾಸನ: ಕಳೆದ ತಿಂಗಳು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯ ಪ್ರಕೃತಿ ಬಾರ್ ಮುಂದೆ ಹಲ್ಲೆ ಪ್ರಕರಣದಲ್ಲಿ ಎರಡು ಕಾಲಿಗೆ ಮಚ್ಚಿನ ಏಟು ತಗುಲಿ ಗಾಯಗೊಂಡಿದ್ದ ಕುಮಾರ್ ಎಂಬುವರು ಇಂದು ಬೆಳಗ್ಗೆ ಚೋಳೇನಹಳ್ಳಿ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಚನ್ನರಾಯಪಟ್ಟಣ ತಾಲೂಕು ಹಿರೇಸಾವೆ ಗ್ರಾಮದ ಬಳಿಯ ಚೋಳೇನಹಳ್ಳಿಯ ನಡು ರಸ್ತೆಯಲ್ಲಿ ಅವರ ಶವ ದೊರೆತಿದ್ದು ಇವರು ಮಾಚಬೂವನಹಳ್ಳಿ ಯವರು ಎಂದು ತಿಳಿದುಬಂದಿದೆ.

ಈ ಹಿಂದೆ ಬಾರ್ ಲ್ಲಿ ಕುಮಾರ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು ತದನಂತರವು ಕುಮಾರ್ ಅವರ ಕೊಲೆ ನಡೆದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು ಪ್ರಕರಣ ಸಂಬಂಧ ಹಿರಿಸಾವೆ ಠಾಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here