ಕುಡಿದ ಅಮಲು ಹುಬ್ಳಿ ಹೈದ ಹಾಸನದಲ್ಲಿ ರೈಲಿಗೆ ತಲೆಕೊಡೋಕೆ ಹೋದ ಅದೃಷ್ಟ ವಶಾತ್ ಬಚಾವ್ (ಕೈ ಕಟ್)

0

ಹಾಸನ / ಹುಬ್ಬಳ್ಳಿ : ಹುಬ್ಬಳ್ಳಿಯ ರವಿ ಎಂಬುವಾತ ಸಖತ್ ಆಗಿ ಮದ್ಯ ಸೇವಿಸಿ ಕುಡಿದ ತಿಕ್ಕಲೋ / ಅದ್ಯಾವ ಟೆನ್ಶನ್ನೋ ಹಾಸನ ನಗರದ ಬಳಿಯ ರೈಲ್ವೇ ಹಳಿ ಮೇಲೆ ಮಲಗಿ ರೈಲಿಗೆ ತಲೆ ಕೊಟ್ಟು ಆತ್ಮ.ಹತ್ಯೆಗೆ ಯತ್ನಿಸಲು ಹೋಗಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.,  ಘಟನೆ ಶುಕ್ರವಾರ (26Aug2021) ಬೆಳಗ್ಗೆ ನಡೆದಿರೋದು , ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ , ಅದರೆ !,

ಈ ದುರಂತದಲ್ಲಿ ಎಡಗೈ ತುಂಡಾಗಿ ಅಲ್ಲೆಲ್ಲೋ ಹಾರಿದೆ , ಹಾಸನ ಜಿಲ್ಲಾಸ್ಪತ್ರೆ(HIMS)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಅಸಾಮಿ . ಅಂದಾಜು ಬೆಳ್ ಬೆಳಿಗ್ಗೆ ಎಣ್ಣೆ ಹೊಡೆದು 8 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳೋಕೆ ಹಾಸನ ನಗರದ ರೈಲ್ವೆ ನಿಲ್ದಾಣದ ಬಳಿ ಹಳಿಯ ಮೇಲೆ ಮಲಗಿದ್ದನಂತೆ . ಅದೇನಾಯಿತೋ ಗೊತ್ತಿಲ್ಲ ,  ರೈಲು ಹತ್ತಿರ ಬರುತ್ತಿದ್ದಂತೆಯೇ ಹೆದರಿ ಪಕ್ಕಕ್ಕೆ ಜಾರಿಲು ಧೈರ್ಯಮಾಡಿಬಿಟ್ಟ . ತಪ್ಪಿಸಿಕೊಳ್ಳುವ ಬರದಲ್ಲಿ ರೈಲು ಗಾಡಿಗೆ ಸಿಲುಕೇ ಬಿಟ್ಟಿತ್ತು ,  ಎಡಗೈ ತುಂಡಾಗಿ ಹಾರಿ ಬಿದ್ದಿತ್ತು., ಆ ಕ್ಷಣದಲ್ಲಿ ಅಲ್ಯಾರು ಇಲ್ಲದ ಕಾರಣ , ಬಾರಿ ನೋವಿನಿಂದ ಪಕ್ಕದ ಪೊದೆ ಬಳಿ ಚೀರಾಡುತ್ತಿದ್ದವನ ಕಿರುಚಾಟ ಕೇಳಿ, ಸ್ಥಳೀಯ ಯುವಕರ ಸಹಾಯದಿ ಹಾಸನ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಗೆ ವ್ಯವಸ್ಥೆ ಮಾಡಲಾಗಿದೆ .

ಇನ್ನು ಹಾಸನ ನಗರ ಠಾಣೆ , ಹಾಗೂ ಸೆಂಟ್ರಲ್ ರೈಲ್ವೇ ಪೊಲೀಸ್ ವಿಚಾರಣೆ ಎದರಿಸಬೇಕಾಗಿದೆ., ಆತ್ಮಹತ್ಯೆ ಮಹಾಪಾಪ , ಈಸಬೇಕು , ಈಸಿ ಜಯಿಸಬೇಕು . ಅದುವೇ ಬದುಕ ಮರ್ಮ ತಾಳ್ಮೆಯ ಛಲದಾಟ!

ಧನ್ಯವಾದಗಳು

LEAVE A REPLY

Please enter your comment!
Please enter your name here