ಹಲವರು ಬೆಳಗಿನ ತಿಂಡಿಯನ್ನು ಸೇವಿಸದೆ ಇರುತ್ತಾರೆ. ತಿಂಡಿ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ತಿಳಿಯಬೇಕಾದ ವಿಷಯ. ಬೆಳಗಿನ ತಿಂಡಿಯನ್ನು ತಿನ್ನದೇ ಈ ಅಭ್ಯಾಸವನ್ನು ರೂಡಿ ಮಾಡಿಕೊಂಡಿದ್ದರೆ ಇದನ್ನು ಮೊದಲಿಗೆ ನಿಲ್ಲಿಸಿ. ಬೆಳಗಿನ ತಿಂಡಿ ಎಷ್ಟು ಮುಖ್ಯ ಎನ್ನುವುದು ಇವತ್ತಿನ ವಿಚಾರ.
ಡಯಾಬಿಟಿಸ್;
ತಿಂಡಿಯನ್ನು ತಿನ್ನದೇ ಇದ್ದರೆ ಡಯಾಬಿಟಿಸ್ ರೋಗ ಬಹಳ ಬೇಗ ಅಂಟಿಕೊಳ್ಳಬಹುದು. ಈ ಅಭ್ಯಾಸದಿಂದ ನಮ್ಮ ಇನ್ಸುಲಿನ್ ಪ್ರಮಾಣದಲ್ಲಿ ಏರುಪೇರಾಗಬಹುದು ಇದರಿಂದ ಬಹಳ ಬೇಗ ನಮಗೆ ಡಯಾಬಿಟೀಸ್ ಬರುವ ಸಾಧ್ಯತೆಗಳಿವೆ.
ಆರೋಗ್ಯವನ್ನು ಕಾಪಾಡಿಕೊಳ್ಳಲು;
ತಿಂಡಿಯನ್ನು ತಿನ್ನದೇ ಇರುವುದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ ಹಾಗೂ ದೇಹದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತದೆ ಇದರಿಂದ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ತಿಂಡಿಯನ್ನು ಸೇವಿಸಲೇಬೇಕು.
ಚಯಾಪಚಯ;
ಬೆಳಗಿನ ತಿಂಡಿ ತಿನ್ನುವುದರಿಂದ ನಮಗೆ ಹೆಚ್ಚು ಶಕ್ತಿ ಸಿಗುತ್ತದೆ ಇದು ನಮ್ಮ ದೇಹದ ಚಯಾಪಚಯ( metabolism )ಕಾರ್ಯವನ್ನು ನಿಯಂತ್ರಿಸುತ್ತದೆ. ಬೆಳಗ್ಗೆ ಎದ್ದ ಕೂಡಲೇ ಎರಡು ಗಂಟೆಯ ಒಳಗೆ ತಿಂಡಿಯನ್ನು ತಿಂದರೆ ಹೆಚ್ಚು ಪ್ರಭಾವಕಾರಿ. ದೇಹದ ಚಯಾಪಚಯವನ್ನು ನಿಯಂತ್ರಿಸಲು ತಿಂಡಿಯನ್ನು ತಪ್ಪದೆ ತಿನ್ನಿ.
ಏಕಾಗ್ರತೆ;
ತಿಂಡಿ ತಿನ್ನುವುದರಿಂದ ನಮ್ಮ ಏಕಾಗ್ರತೆ ಹೆಚ್ಚಾಗುತ್ತದೆ. ನಮ್ಮ ಮೆದುಳನ್ನು ಶಾಂತ ರೀತಿಯಾಗಿ ಇರಿಸಲು ಸಹಾಯಮಾಡುತ್ತದೆ ನಮಗೆ ಯಾವುದೇ ತೊಂದರೆ ಇಲ್ಲದೆ ಏಕಾಗ್ರತೆಯಿಂದ ನಮ್ಮ ಕೆಲಸವನ್ನು ಮಾಡಿಕೊಳ್ಳಬಹುದು.
ಪ್ರತಿದಿನ ತಿಂಡಿಯನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
ತನ್ವಿ . ಬಿ