ಹಾಸನ : ಘನ ತ್ಯಾಜ್ಯ ನಿರ್ವಹಣೆ ಪ್ಲಾಸ್ಟಿಕ್ ನಿಯಂತ್ರಣ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣಕ್ಕಾಗಿ ನಿರಂತರ ವೈವಿಧ್ಯಮಯ ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸಿ ಅನೇಕ ಶಾಲಾ ಕಾಲೇಜುಗಳಿಂದ ಹಿಡಿದು ಸಮಾಜದ ಎಲ್ಲರಿಗೂ ಪರಿಸರ ಜ್ಞಾನವನ್ನು ಸಾರುತ್ತಿರುವ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಇನ್ಫರ್ಮೇಷನ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾಗಿರುವ ಚಂದ್ರಶೇಖರ್ ( #RottaryHassan ) ಅವರ ಪರಿಸರ ಕುರಿತ ಕಾರ್ಯಗಳಿಗೆ ಮೆಚ್ಚಿ 2023 ನೇ ಸಾಲಿನ ಹಾಸನ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
ಇವರು ಕಳೆದ ಸಾಲಿನಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಅಧ್ಯಕ್ಷರಾಗಿ ಒಂದು ವರ್ಷದಲ್ಲಿ 200ಕ್ಕೂ ಅಧಿಕ ಪರಿಸರ ಕುರಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ರೋಟರಿ ಜಿಲ್ಲೆ 3182ರಲ್ಲಿಯೇ ಉತ್ತಮ ಕ್ಲಬ್ ಪ್ರಶಸ್ತಿಗೆ ಹಾಗೂ ಇನ್ನಿತರ ಪ್ರಶಸ್ತಿಗಳಿಗೆ ಭಾಜನರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. , ಅದಲ್ಲದೆ ಸಮಾಜದ ಎಲೆಮರಿಕಾಯಿ ಸಾಧಕರ ಗುರ್ತಿಸಿ ಗೌರವಿಸಿ ಸನ್ಮಾನಿಸಿದ್ದಾರೆ.,
ಈ ಪ್ರಶಸ್ತಿಯನ್ನು ಇಂದು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಅವರಿಗೆ ಜಿಲ್ಲಾಡಳಿತದ ವತಿಯಿಂದ ನೀಡಲಾಯಿತು .
” ಗಣರಾಜ್ಯೋತ್ಸವ ಪ್ರಶಸ್ತಿ ಪಡೆದ ಕ್ಷಣ. ನನ್ನ ಎಲ್ಲ ಸಾಮಾಜಿಕ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ನನ್ನ ಕುಟುಂಬವರ್ಗ, ಸ್ನೇಹಿತರು, MCE, ರೋಟರಿ ಹಾಸನ, BGVS, ಹಸಿರು ಭೂಮಿ ಪ್ರತಿಷ್ಠಾನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಇತರ ಎಲ್ಲಾ ಸಂಘ ಸಂಸ್ಥೆಗಳು ಮತ್ತು ಸ್ನೇಹಿತರಿಗೆ ಹೃದಯಪೂರ್ವಕ ಧನ್ಯವಾದಗಳು ” – ಚಂದ್ರಶೇಖರ್ ಹೆಚ್ ಎಸ್