ತಮ್ಮದೇ(ಬಿಜೆಪಿ) ಪಕ್ಷದ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ ವಿಡಿಯೋ ವೈರಲ್ ! ಅರಸೀಕೆರೆ ಬಿಜೆಪಿ ಮುಖಂಡ ಅರೆಸ್ಟ್ ( 307 ಸೆಕ್ಷನ್ ಕೇಸ್ ದಾಖಲು )

0

ಹಾಸನ/ಅರಸೀಕೆರೆ : ಬುಧವಾರ ಸಂಜೆ ನಡುರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತ ಕುಮಾರ್ ಎಂಬಾತನ ಮೇಲೆ ವಿಜಯ್ ಕುಮಾರ್ ಮಾರಣಾಂತಿಕ ಹಲ್ಲೆ ಮಾಡಿದ್ದರು. ಥಳಿಕ್ಕೊಳಗಾಗಿದ್ದ ಕಾರ್ಯಕರ್ತ ಕುಮಾರ್ ಗಂಭೀರವಾಗಿ ಬುರುಡೆ ಒಪನ್ ಆಗಿ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ಕುರಿತು ಅರಸೀಕೆರೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. , ಬಿಜೆಪಿಯ ಭೂತ್ ವಿಜಯ್ ಅಭಿಯಾನ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲವು ಜನರಿಂದ ವಿಜಯ್ ಕುಮಾರ್ ಗೆ ಅವಮಾನವಾಗಿತ್ತು. ಈ ವಿಡಿಯೋವನ್ನು ಕುಮಾರ್ ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿದ್ದರು ಎನ್ನುವ ಕಾರಣಕ್ಕೆ

ಅರಸೀಕೆರೆ ನಗರಸಭೆ ಎದುರು, ಪೊಲೀಸ್ ಠಾಣೆಯ ಅಣತಿ ದೂರದಲ್ಲಿ ಹಲ್ಲೆ ಮಾಡಲಾಗಿದೆ. ನೂರಾರು ಜನರ ಎದುರಲ್ಲಿ ಹಾಡು ಹಗಲೇ ಸವಿತಾ ಸಮಾಜದ ಪ್ರತಿನಿಧಿಯಾಗಿದ್ದ ಕುಮಾರ್ ಎಂಬುವನ ಮೇಲೆ ರಕ್ತ ಸೋರುತಿದ್ದರು ಬಿಡದೇ ಬಿಜೆಪಿ ನಾಯಕ ಅಣ್ಣನಾಯಕನಹಲ್ಳಿ ವಿಜಿ ಕುಮಾರ್ ಹಲ್ಲೆ ಮಾಡಿದ್ದಾರೆ , ವರ್ಷದ ಹಿಂದೆ ಬಿಜೆಪಿ ಸಮಾವೇಶದ ವೇಳೆ ಅರಸೀಕೆರೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಎನ್.ಆರ್.ಸಂತೋಷ ಬಣ ಹಾಗೂ ವಿಜಯ್ ಕುಮಾರ್ ಬಣದ ನಡುವೆ ಗಲಾಟೆ ನಡೆದಿದೆ. ಗಾಯಗೊಂಡಿರುವ ಎನ್.ಆರ್ ಕುಮಾರ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಜೊತೆಗೆ ಇತ್ತೀಚೆಗೆ ಬಿಜೆಪಿಯ ಬೂತ್ ವಿಜಯ್ ಅಭಿಯಾನ ನಿಮಿತ್ತ ಗ್ರಾಮಗಳಿಗೆ ತೆರಳಿದ್ದ ವೇಳೆ

ಕೆಲವು ಜನರಿಂದ ವಿಜಯ್ ಕುಮಾರ್ಗೆ ಅವಮಾನವಾಗಿತ್ತು. ಆ ಘಟನೆ ವಿಡಿಯೋ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಕ್ಕಾಗಿ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ .,
ಸಾಮಾಜಿಕ ಜಾಲಾತಾಣದಲ್ಲಿ ತಮಗೆ ಅವಮಾನವಾಗಿರುವ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಕ್ಕೆ ಕುಪಿತಗೊಂಡಿದ್ದ ವಿಜಯ್ ಕುಮಾರ್ ಕುಪಿತಗೊಂಡು ಬುಧವಾರ ಅರಸೀಕೆರೆ ನಗರಸಭೆ ಎದುರು ನೂರಾರು ಜನರ ಎದುರೇ ತಮ್ಮ ಕಾರು ಚಾಲಕನ ಜೊತೆ ಸೇರಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದರು. ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಕುಮಾರ್ ಅವರನ್ನು

ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು., ಈ ಘಟನೆಯ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ (Social Media) ಭಾರಿ ವೈರಲ್ ಆಗಿತ್ತು. ಇದೀಗ ಅರಸೀಕೆರೆ ಪೊಲೀಸರು ವಿಜಯ್ ಕುಮಾರ್ ಹಾಗೂ ಕಾರಿನ ಚಾಲಕನನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಸನ್ 307 ಅಡಿ ಪ್ರಕರಣ ದಾಖಲಿಸಲಾಗಿದೆ , ಇನ್ನು ಚುನಾವಣೆಯೇ ನಿಗದಿಯಾಗಿಲ್ಲ ಅದಾಗಲೇ ಹಾದಿ – ಬೀದಿ ರಂಪವಾಗುತ್ತಿದೆ , ಇನ್ನು ಚುನಾವಣೆ ಮುಗಿಯುವಷ್ಟರಲ್ಲಿ ಜನತೆ ಇನ್ನೇನೇನು ನೋಡ ಬೇಕೋ … ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ .

LEAVE A REPLY

Please enter your comment!
Please enter your name here